Eating Rusk: ಸಂಜೆಯ ಚಹಾದೊಂದಿಗೆ ರಸ್ಕ್ ಸೇವಿಸುವ ಅಭ್ಯಾಸವಿದ್ದರೆ ಈ ಸ್ಟೋರಿ ನೀವು ಓದಲೇಬೇಕು

| Updated By: ಅಕ್ಷತಾ ವರ್ಕಾಡಿ

Updated on: Dec 15, 2022 | 3:51 PM

ರುಚಿಕರ ಮತ್ತು ಕುರುಕುಲಾದ ರಸ್ಕ್‌ಗಳನ್ನು ತಿನ್ನದೆ ನಿಮ್ಮ ಟೀ ಟೈಮ್ ಅಪೂರ್ಣವೇ? ಆದರೆ ನೀವೂ ರಸ್ಕ್ ತಿನ್ನುವುದರಿಂದ ಆರೋಗ್ಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳಿರುವ ಅಂಶಗಳು ಈ ಕೆಳಗಿನಂತಿವೆ.

Eating Rusk: ಸಂಜೆಯ ಚಹಾದೊಂದಿಗೆ ರಸ್ಕ್ ಸೇವಿಸುವ ಅಭ್ಯಾಸವಿದ್ದರೆ ಈ ಸ್ಟೋರಿ ನೀವು ಓದಲೇಬೇಕು
ಸಾಂದರ್ಭಿಕ ಚಿತ್ರ
Image Credit source: NDTV FOOD
Follow us on

ರುಚಿಕರ ಮತ್ತು ಕುರುಕುಲಾದ ರಸ್ಕ್‌(Rusk) ಗಳನ್ನು ತಿನ್ನದೆ ನಿಮ್ಮ ಟೀ ಟೈಮ್ ಅಪೂರ್ಣವೇ? ಆದರೆ ನೀವೂ ರಸ್ಕ್ ತಿನ್ನುವುದರಿಂದ ಆರೋಗ್ಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳಿರುವ ಅಂಶಗಳು ಈ ಕೆಳಗಿನಂತಿವೆ. ರಸ್ಕ್‌ಗಳಲ್ಲಿ ಸಕ್ಕರೆಯನ್ನು ಸೇರಿಸಲಾಗಿರುವುದರಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಿಬಾರದು. ಸಂಕ್ಷಿಪ್ತವಾಗಿ ಹೇಳುವುದಾದರೆ, ರಸ್ಕ್ ಗಳನ್ನು ಬ್ರೆಡ್ ನಿಂದ ತಯಾರಿಸುವುದಾಗಿದ್ದು, ಜೊತೆಗೆ ಸಕ್ಕರೆಯನ್ನು ಸೇರಿಸುವ ಮೂಲಕ ರುಚಿಕರವಾಗಿ ತಯಾರಿಸಲಾಗುತ್ತದೆ. ಇದು ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಬ್ರೆಡ್‌ಗಿಂತ ರಸ್ಕ್‌ಗಳು ಕ್ಯಾಲೋರಿಗಳಲ್ಲಿ ಹೆಚ್ಚು. ನಿಮ್ಮ ಚಹಾದೊಂದಿಗೆ ರಸ್ಕ್ ತಿನ್ನುವುದರಿಂದ ಉಂಟಾಗುವ ಅನಾನುಕೂಲಗಳು ಈ ಕೆಳಗಿನಂತಿವೆ:

ಹಳೆಯ ಬ್ರೆಡ್ ನಿಂದ ತಯಾರಿಸಲಾಗುತ್ತದೆ: 

ರಸ್ಕ್ ತಯಾರಿಸಲು ಬಳಸುವ ಮುಖ್ಯ ಪದಾರ್ಥಗಳು ಹಿಟ್ಟು, ಸಕ್ಕರೆ, ಯೀಸ್ಟ್ ಮತ್ತು ಎಣ್ಣೆ. ಆದರೆ ಹಳೆಯ ಬ್ರೆಡ್ ಗಳ ಡೇಟ್ ಮುಗಿಯುತ್ತಾ ಬಂದಾಗ ಅದರಿಂದ ರಸ್ಕ್ ತಯಾರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಅತಿಸಾರ ಮತ್ತು ಮಲಬದ್ಧತೆ ಸೇರಿದಂತೆ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ ಅಲರ್ಜಿ ಅಥವಾ ಚರ್ಮದ ತುರಿಕೆ ಮುಂತಾದ ಸಮಸ್ಯೆಗೆ ಕಾರಣವಾಗಬಹುದು.

ಬಳಸುವ ಎಣ್ಣೆ:

ರಸ್ಕ್ ತಯಾರಿಸಲು ಬಳಸುವ ತೈಲವು ತುಪ್ಪ ಅಥವಾ ಮಾರ್ಗರೀನ್(ಕೃತಕ ಬೆಣ್ಣೆ) ರೂಪದಲ್ಲಿರುತ್ತದೆ. ಇದು ಕ್ರಮೇಣವಾಗಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು.

ಸಕ್ಕರೆಯ ಅಂಶ:

ಬೇಕಿಂಗ್ ಮತ್ತು ಬೇಕರಿ ಉತ್ಪನ್ನಗಳು ದೊಡ್ಡ ಪ್ರಮಾಣದ ಬಿಳಿ ಸಕ್ಕರೆಯನ್ನು ಬಳಸಲಾಗುತ್ತದೆ. ಇದು ರುಚಿಯನ್ನು ಹೆಚ್ಚಿಸುತ್ತದೆ. ಸಕ್ಕರೆಯ ನಿರಂತರ ಸೇವನೆಯು ಆರೋಗ್ಯಕ್ಕೆ ಅಪಾಯಕಾರಿ ಮತ್ತು ಮಧುಮೇಹ, ಹೃದಯ ಸಮಸ್ಯೆಗಳು, ಮೂತ್ರಪಿಂಡದ ಸಮಸ್ಯೆಗಳು ಮತ್ತು ಚರ್ಮದ ಉರಿಯೂತ ಮತ್ತು ಒಡೆಯುವಿಕೆಯಂತಹ ವಿವಿಧ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಪ್ರಯಾಣ ಸುರಕ್ಷಿತವೇ ತಜ್ಞರ ಸಲಹೆ ಇಲ್ಲಿದೆ

ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳು:

ಬ್ರೆಡ್ ಮತ್ತು ರಸ್ಕ್ ಎರಡನ್ನೂ ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗಿರುವುದರಿಂದ ಇದು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಆದ್ದರಿಂದ ಪ್ರತಿ ದಿನ ರಸ್ಕ್ ಸೇವಿಸುವುದರಿಂದ ದೇಹದ ತೂಕ, ರಕ್ತದಲ್ಲಿನ ಸಕ್ಕರೆ ಮಟ್ಟಗಳು, ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.

ಇದನ್ನು ಓದಿ: ನೀವು ಮಲಗುವ ಭಂಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು

ಅನಾರೋಗ್ಯಕರ ರಸ್ಕ್‌ಗೆ ಸಂಬಂಧಿಸಿದ ಅಡ್ಡ ಪರಿಣಾಮಗಳನ್ನು ನೀವು ಪರಿಹರಿಸಲು ಯಾವ ರೀತಿಯ ರಸ್ಕ್ ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಸಂಪೂರ್ಣ ಗೋಧಿ ರಸ್ಕ್ ಬಿಳಿ ಬ್ರೆಡ್ ಅಥವಾ ಕೇಕ್‌ಗಳಿಗಿಂತ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ಪ್ರೊಟೀನ್ ಒದಗಿಸುತ್ತದೆ. ಸಂಪೂರ್ಣ ಗೋಧಿ ರಸ್ಕ್ ಮ್ಯಾಂಗನೀಸ್ ಮತ್ತು ಸೆಲೆನಿಯಮ್‌ನಂತಹ ಪೋಷಕಾಂಶಗಳಿಂದ ಕೂಡಿದೆ. ಕಡಿಮೆ ಕ್ಯಾಲೋರಿ ಮೊಳಕೆಯೊಡೆದ ಧಾನ್ಯಗಳಿಂದ ತಯಾರಿಸಿದ ಬ್ರೆಡ್ ಬಳಸಿಕೊಂಡು ನೀವು ಮನೆಯಲ್ಲಿ ನಿಮ್ಮ ರಸ್ಕ್‌ಗಳನ್ನು ತಯಾರಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: