Zika virus: ಝಿಕಾ ವೈರಸ್ ತಡೆಗಟ್ಟಲು ಇಲ್ಲಿದೆ ಬೆಂಗಳೂರಿನ ವೈದ್ಯರ ಸಲಹೆ
ಬೆಂಗಳೂರು ಮೂಲದ ವೈದ್ಯ ಡಾ ಗೌರವ್ ಶರ್ಮಾ ಅವರು ಝಿಕಾ ವೈರಸ್, ಅದರ ಚಿಕಿತ್ಸೆಗಳು, ಝಿಕಾ ಮತ್ತು ಡೆಂಗ್ಯೂ ನಡುವಿನ ವ್ಯತ್ಯಾಸ, ತಡೆಗಟ್ಟುವ ತಂತ್ರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಝಿಕಾ ವೈರಸ್(Zika virus) ರೋಗ ಲಕ್ಷಣಗಳು ಒಂದೊಂದಾಗಿ ಕಂಡು ಬಂದಿರುವ ಕಾರಣ ಅದನ್ನು ತಡೆಗಟ್ಟುವುದು ಹೇಗೆ ಎನ್ನುವ ಸಾಕಷ್ಟು ಪ್ರಶ್ನೆಗಳು ಸೃಷ್ಟಿಯಾಗಿದ್ದು, ಇದೀಗ ಬೆಂಗಳೂರು ಮೂಲದ ವೈದ್ಯ ಡಾ ಗೌರವ್ ಶರ್ಮಾ ಅವರು ಝಿಕಾ ವೈರಸ್, ಅದರ ಚಿಕಿತ್ಸೆಗಳು, ಝಿಕಾ ಮತ್ತು ಡೆಂಗ್ಯೂ ನಡುವಿನ ವ್ಯತ್ಯಾಸ, ತಡೆಗಟ್ಟುವ ತಂತ್ರಗಳ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ನೊಂದಿಗೆ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.
ರಾಯಚೂರಿನ ಐದು ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್‌ನ ಮೊದಲ ಪ್ರಕರಣ ವರದಿಯಾದ ಬೆನ್ನಲ್ಲೇ ಕರ್ನಾಟಕ ಆರೋಗ್ಯ ಇಲಾಖೆಯು ಹೈ ಅಲರ್ಟ್ ಆಗಿದೆ. ಆದರೆ ನೀವು ಝಿಕಾ ವೈರಸ್‌ನ ಬಗ್ಗೆ ಆತಂಕ ಪಡಬೇಕಾಗಿಲ್ಲ. ಆತಂಕ ಭಯಗಳು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ. ಆದ್ದಕ್ಕಾಗಿ ಝಿಕಾ ವೈರಸ್ ತಡೆಗಟ್ಟಲು ಬೆಂಗಳೂರಿನ ವೈದ್ಯರು ನೀಡಿರುವ ಸಲಹೆ ಇಲ್ಲಿದೆ.
ಝಿಕಾ ವೈರಸ್ ಎಂದರೇನು ಮತ್ತು ಲಕ್ಷಣಗಳು ಯಾವುವು?
ಝಿಕಾ ಎಂಬುದು ಡೆಂಗ್ಯೂಗೆ ಕಾರಣವಾಗುವ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು, ಈಡಿಸ್ ಸೊಳ್ಳೆಗಳು. ಇದು ಹೆಚ್ಚಾಗಿ ಹಗಲಿನಲ್ಲಿ ಕಚ್ಚುತ್ತದೆ. ಬೆಂಗಳೂರು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಈಗೀಗಾ ನಿರಂತರವಾಗಿ ಮಳೆಯಾಗುವುದರಿಂದ ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಸೊಳ್ಳೆಗಳು, ಸೋಂಕಿತ ವ್ಯಕ್ತಿಗಳೊಂದಿಗೆ ಲೈಂಗಿಕ ಸಂಪರ್ಕದ ಮೂಲಕ ಮಾತ್ರ ಝಿಕಾ ಹರಡುತ್ತದೆ. ನೀವು ಗಾಬರಿಯಾಗುವ ಅಗತ್ಯವಿಲ್ಲ. ಬದಲಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಏನಿದು ಝಿಕಾ ವೈರಸ್? ಭಾರತದಲ್ಲಿ ಇದರ ತೀವ್ರತೆ ಎಷ್ಟಿದೆ?
ಝಿಕಾವನ್ನು ಹೇಗೆ ತಡೆಯುವುದು?
ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟುವುದು ಬಹಳ ಮುಖ್ಯ. ಮಳೆ ಬಂದಿರುವುದರಿಂದ ಅಲ್ಲಲ್ಲಿ ನೀರು ತುಂಬಿರುತ್ತದೆ. ಆದ್ದರಿಂದ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ. ಪಾತ್ರೆಗಳು ಮತ್ತು ಟೈರುಗಳಲ್ಲಿ ನೀರು ನಿಲ್ಲದಂತೆ ನೋಡಿ ಕೊಳ್ಳಿ. ಸೊಳ್ಳೆ ಪರದೆಗಳಿಂದ ಕಿಟಕಿಗಳನ್ನು ಮುಚ್ಚಿ ಮತ್ತು ಸೊಳ್ಳೆ ಕಡಿತವನ್ನು ತಡೆಗಟ್ಟಲು ನಿವಾರಕಗಳನ್ನು ಬಳಸಿ. ಹೊರಗಡೆ ಹೋಗುವಾಗ ಉದ್ದ ಕೈಗಳ ಬಟ್ಟೆಯನ್ನು ಧರಿಸಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಝಿಕಾ ವೈರಸ್ ಪತ್ತೆ: ಲಕ್ಷಣಗಳು, ವೈರಸ್ ಇತಿಹಾಸ, ಮುನ್ನೆಚ್ಚರಿಕಾ ಕ್ರಮಗಳೇನು, ಇಲ್ಲಿದೆ ಮಾಹಿತಿ
ಗರ್ಭಿಣಿ ಮಹಿಳೆಯರು ಎಚ್ಚರದಿಂದಿರುವುದು ಅಗತ್ಯ:
ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಹೆಚ್ಚಿನ ಅಪಾಯವಿದೆ. ಆದ್ದರಿಂದ ಆದಷ್ಟು ಸೊಳ್ಳೆ ಕಡಿತದಿಂದ ದೂರವಿರಿ. ನಿರ್ಲಕ್ಷಿಸಿದರೆ ಮಗುವಿನ ನರಮಂಡಲದಲ್ಲಿ ಅಸಹಜತೆಗಳು ಮತ್ತು ದೈಹಿಕ ಅಥವಾ ಬೆಳವಣಿಗೆಯ ವೈಪರೀತ್ಯಗಳಂತಹ ತೊಡಕುಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: