ಮೂಳೆಗಳು ಬಲಿಷ್ಠವಾದರೆ, ನೀವೂ ಬಲಿಷ್ಠವಾಗಿರುತ್ತೀರಿ: 40ರ ನಂತರ ಮಹಿಳೆಯರು ಮೂಳೆ ಆರೋಗ್ಯದ ಈ ಸಲಹೆಗಳನ್ನು ಪಾಲಿಸಿ

ಮಹಿಳೆಯರು ತುಂಬಾ ಚಟುವಟಿಯಿಂದ ಇರುವವರು, ಎಲ್ಲದಕ್ಕೂ ಓಡಾಡಿಕೊಂಡ, ಎಲ್ಲ ಕೆಲಸಗಳನ್ನು ಮಾಡಿಕೊಂಡು ಕ್ರಿಯಾಶೀಲರಾಗಿರುತ್ತಾರೆ. ಆದರೆ ಹೆಚ್ಚು ಆರೋಗ್ಯ ಸಮಸ್ಯೆಗಳು ಕಾಡುವುದು ಇವರಲ್ಲೇ, ಚುಟುವಟಿಕೆಯಿಂದ ಇದ್ರು ಇವರಿಗೆ ಹೆಚ್ಚು ಕಾಡುವ ಆರೋಗ್ಯ ಸಮಸ್ಯೆಯೆಂದರೆ ಕೀಲು ನೋವು. ಹಾಗಾಗಿ ಈ ಮೂಳೆಗಳು ಬಲಿಷ್ಠವಾಗಿರಬೇಕಂದರೆ ಅದರು ಯಾವೆಲ್ಲ ಆರೋಗ್ಯಕರ ಸಲಹೆಗಳನ್ನು ಪಾಲಿಸಬೇಕು ಎಂಬುದನ್ನು ಡಾ. ಯೋಗೀಶ್ವರ್ ಎ.ವಿ. ಹೇಳುವ ಸಲಹೆಗಳು ಇಲ್ಲಿದೆ.

ಮೂಳೆಗಳು ಬಲಿಷ್ಠವಾದರೆ, ನೀವೂ ಬಲಿಷ್ಠವಾಗಿರುತ್ತೀರಿ: 40ರ ನಂತರ ಮಹಿಳೆಯರು ಮೂಳೆ ಆರೋಗ್ಯದ ಈ ಸಲಹೆಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರ
Image Credit source: Getty Images
Updated By: ಅಕ್ಷಯ್​ ಪಲ್ಲಮಜಲು​​

Updated on: May 15, 2025 | 4:15 PM

ಮಹಿಳೆಯರಲ್ಲಿ 40ನೇ ವಯಸ್ಸಿನ ಬಳಿಕ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತದೆ. ಅದರಲ್ಲೂ ಮೂಳೆ ಆರೋಗ್ಯದಲ್ಲಿ (Bone health) ವ್ಯತ್ಯಾಸ ಕಂಡುಬರುವುದು ಸಹಜವಾಗಿದೆ. ಇದಕ್ಕೆ ಹಲವು ಕಾರಣಗಳು ಕೂಡ ಇವೆ. ಹೀಗಾಗಿ ಈ ಹಂತದಲ್ಲಿ ಮಹಿಳೆಯರು ತಾವು ಸೇವಿಸುವ ಆಹಾರ, ಜೀವನಶೈಲಿಯಲ್ಲಿ ಮೂಳೆ ಆರೋಗ್ಯಕ್ಕೆ ಪೂರಕವಾದ ಬದಲಾವಣೆಯನ್ನು ತರುವುದು ಅಗತ್ಯವಾಗಿರುತ್ತದೆ. ಹಾಗಾಗಿ ಮಹಿಳೆಯರು ತಮ್ಮ ಮೂಳೆ ಆರೋಗ್ಯವನ್ನು ಕಾಪಾಡುವುದು ಹೇಗೆ? ಮೂಳೆಗಳನ್ನು ಬಲಿಷ್ಠವಾಗಿ ಮಾಡುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಮಣಿಪಾಲ್ ಆಸ್ಪತ್ರೆ ಹಿರಿಯ ಸಲಹೆಗಾರ – ಆರ್ಥೋಪೆಡಿಕ್ಸ್ ಮತ್ತು ರೊಬೊಟಿಕ್ ಕೀಲು ಬದಲಿ ಶಸ್ತ್ರಚಿಕಿತ್ಸೆ ವೈದ್ಯ ಡಾ. ಯೋಗೀಶ್ವರ್ ಎ.ವಿ. ಹೇಳುವ ಸಲಹೆಗಳು ಇಲ್ಲಿದೆ.

ಮೂಳೆಯ ಸಾಂದ್ರತೆ ತಗ್ಗಲು ಏನು ಕಾರಣ?

40 ವರ್ಷದ ನಂತರ ಮೂಳೆಯ ಆರೋಗ್ಯ ಕಡಿಮೆಯಾಗಲು ಪ್ರಮುಖ ಕಾರಣವೆಂದರೆ ವ್ಯಾಯಾಮದ ಕೊರತೆ ಅಥವಾ ಜಡ ಜೀವನಶೈಲಿ ಮತ್ತು ಸೂರ್ಯನ ಬೆಳಕಿಗೆ ಸಾಕಷ್ಟು ಒಡ್ಡಿಕೊಳ್ಳದಿರುವುದು. ಬೆಳಿಗ್ಗೆ 6 ರಿಂದ 8.30 ರವರೆಗೆ ಸೂರ್ಯನ ಕಿರಣಗಳಲ್ಲಿ ಮೂಳೆಯ ಬಲವರ್ಧನೆಗೆ ಅಗತ್ಯವಾಗಿರುವ ವಿಟಮಿನ್ ಡಿ ಯ ಪ್ರಮಾಣ ಹೇರಳವಾಗಿರುತ್ತದೆ, ಆದರೆ ಈ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಮನೆಯೊಳಗೆಯೇ ಇರುತ್ತಾರೆ. ಸಾಮಾನ್ಯವಾಗಿ ವ್ಯಾಯಾಮ ಮಾಡುವಾಗಲೂ ಸಹ, ಒಳಾಂಗಣಗಳಲ್ಲಿ ಅಥವಾ ಜಿಮ್‌ನಲ್ಲಿರುವ ಕಾರಣ ವಿಟಮಿನ್ ಡಿ ಯ ಕೊರತೆಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಲ್ಲದೆ ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಗಳು ಮತ್ತು ನಿಯಮಿತವಾಗಿ ಸೇವಿಸುವ ಕೆಲವು ಔಷಧಿಗಳು ಸಹ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ಧೂಮಪಾನ, ಮದ್ಯಪಾನ ಮುಂತಾದ ನಮ್ಮ ಕೆಲವು ಅಭ್ಯಾಸಗಳೂ ಸಹ ಮೂಳೆಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ, ನೀವು 40 ವರ್ಷ ದಾಟಿದ ನಂತರ, ಮೂಳೆಯ ಆರೋಗ್ಯವನ್ನು ಸುಧಾರಿಸಲು ಉತ್ತಮ ಮಾರ್ಗವೆಂದರೆ ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳುವುದು – ಮುಂಜಾನೆ ನಡಿಗೆ ಅಥವಾ ಸೈಕ್ಲಿಂಗ್‌ಗೆ ಹೋಗಿ. ಧೂಮಪಾನ ಮತ್ತು ಮದ್ಯಪಾನವನ್ನು ತಪ್ಪಿಸಿ, ಮತ್ತು ಯಾವುದೇ ಇತರ ಕಾಯಿಲೆಗಳಿಗೆ, ವೈದ್ಯರು ಅಥವಾ ಮೂಳೆ ತಜ್ಞರಿಂದ ಅಭಿಪ್ರಾಯ ಪಡೆಯುವುದು ಮತ್ತು ಮೂಳೆಯ ಆರೋಗ್ಯವನ್ನು ಸುಧಾರಿಸಲು ಸರಿಯಾದ ಪೂರಕಗಳನ್ನು ತೆಗೆದುಕೊಳ್ಳುವುದು ಉತ್ತಮ.

ಮೂಳೆ ಸಾಂದ್ರತೆ ಕಡಿಮೆಯಾಗಲು ಯಾವ ಅಂಶಗಳು ಕಾರಣವಾಗಿವೆ?

  • 40 ವರ್ಷದ ಬಳಿಕ ಮೂಳೆ ತಹ್ಹ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ
  • ಮಹಿಳೆಯರಲ್ಲಿ ವಿಶೇಷವಾಗಿ ಋತುಬಂಧದ ನಂತರ, ಮೂಳೆ ಸಾಂದ್ರತೆಯು ತ್ವರಿತ ದರದಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.
  • ವ್ಯಾಯಾಮದ ಕೊರತೆ
  • ಧೂಮಪಾನ
  • ರುಮಟಾಯ್ಡ್ ಆರ್ಥರೈಟೀಸ್‌,

ಹೈಪರ್‌ಪ್ಯಾರಥೈರಾಯ್ಡಿಸಮ್ ಮತ್ತು ಹೈಪೋಗೊನಾಡಿಸಮ್‌ನಂತಹ ಪರಿಸ್ಥಿತಿಗಳಿರುವ ರೋಗಿಗಳು ಕಾಲಾನಂತರದಲ್ಲಿ ಮೂಳೆ ಸಾಂದ್ರತೆಯನ್ನು ಕಳೆದುಕೊಳ್ಳುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

ಕೆಲವು ಔಷಧಗಳಾದ ಕಾರ್ಟಿಕೊಸ್ಟೆರಾಯ್ಡ್‌ಗಳು ಮತ್ತು ಹೆಚ್ಚುವರಿ ಥೈರಾಯ್ಡ್ ಪೂರಕಗಳು, ಡಿಯುರೆಟಿಕ್ಸ್‌ ಮತ್ತು ಆಂಟಿ-ಕನ್ವಲ್ಸಂಟ್‌ಗಳಂತಹ ಕೆಲವು ಚಿಕಿತ್ಸೆಗಳು ನಿಮ್ಮ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಆದ್ದರಿಂದ, ಅಪಾಯಕಾರಿ ಅಂಶಗಳು, ಕೊಮೊರ್ಬಿಡಿಟಿಗಳು ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಿರುವ ಜನರು ಮೂಳೆ ಸಾಂದ್ರತೆಯು ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ ಎಂಬ ಅಂಶವನ್ನು ತಿಳಿದಿರಬೇಕು.

ಮೂಳೆ ಸಂಬಂಧಿತ ಸಮಸ್ಯೆಗಳ ಆರಂಭಿಕ ಚಿಹ್ನೆಗಳು ಅಥವಾ ಲಕ್ಷಣಗಳು ಯಾವುವು?

  • ಆಸ್ಟಿಯೊಪೊರೋಸಿಸ್‌ನಂತಹ ಮೂಳೆ ಸಂಬಂಧಿತ ಸಮಸ್ಯೆಗಳಿಗೆ, ಆರಂಭಿಕ ಚಿಹ್ನೆಗಳು:
  • ಎತ್ತರ ಕಡಿಮೆಯಾಗುವುದು
  • ಬೆನ್ನುಮೂಳೆಯ ವಿರೂಪತೆ ಮತ್ತು ಗೂನು ಬೆನ್ನು
  • ದೀರ್ಘಕಾಲದ ಬೆನ್ನು ನೋವು
  • ಕಾರಣವಿಲ್ಲದೆ ಮೂಳೆ -ಮಜ್ಜೆಗಳಲ್ಲಿ ನೋವು
  • ಕ್ಷುಲ್ಲಕ ಕಾರಣಗಳಿಂದ (ಉದಾ: ಸಣ್ಣ ಜಾರುವಿಕೆ, ಮೂಳೆಗೆ ಏಟು), ಅಥವಾ ಅತ್ಯಂತ ಕಡಿಮೆ ಶ್ರಮದಿಂದಲೂ ಕೂಡ ಮುರಿತಕ್ಕೆ ಒಳಗಾಗುವ ದುರ್ಬಲ ಮೂಳೆಗಳು.
  • ನಾವು ಈ ಆರಂಭಿಕ ಚಿಹ್ನೆಗಳ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಸ್ಥಿತಿಯನ್ನು ನಿರ್ವಹಿಸಲು ಅವುಗಳನ್ನು ಮೊದಲೇ ಪತ್ತೆಹಚ್ಚಬೇಕು.

ಇದನ್ನೂ ಓದಿ: ಹಾಲು, ಅನ್ನ ಎರಡನ್ನು ಮಿಶ್ರಣ ಮಾಡಿದರೆ ಆರೋಗ್ಯ ಭಾಗ್ಯ ಖಂಡಿತ

ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಕ್ಯಾಲ್ಸಿಯಂ ಪೂರಕಗಳು ಅಗತ್ಯವೇ?

ಇದಕ್ಕೆ ಉತ್ತರ ಇಲ್ಲ. ಕ್ಯಾಲ್ಸಿಯಂ ಪೂರಕಗಳು ಮಾತ್ರ ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುವುದಿಲ್ಲ. ವಿಟಮಿನ್ ಡಿ ನಂತಹ ಪೂರಕಗಳೊಂದಿಗೆ ಸಂಬಂಧ ಹೊಂದಿದಾಗ ಇದು ಸಹಾಯಕವಾಗಿರುತ್ತದೆ. ಮಹಿಳೆಯರು ದುರ್ಬಲರು ಮತ್ತು ಕ್ಯಾಲ್ಸಿಯಂ ಅಗತ್ಯವಿದೆ ಎಂಬುದು ಸಾಮಾನ್ಯ ಉಹಾಪೋಹವಾಗಿದೆ. ಮಹಿಳೆಯರು ದುರ್ಬಲರಲ್ಲ, ವಾಸ್ತವವಾಗಿ, ಅವರ ಮುಟ್ಟಿನ ಚಕ್ರಗಳು ನಿಯಮಿತವಾಗಿ ಇರುವವರೆಗೆ ಅವರು ಪುರುಷರಿಗಿಂತ ಬಲಶಾಲಿಯಾಗಿರುತ್ತಾರೆ. ಮಹಿಳೆಯರಲ್ಲಿ ಈಸ್ಟ್ರೊಜೆನ್ ಕ್ಯಾಲ್ಸಿಯಂ ಶೇಖರಣೆಗೆ ಸಹಾಯ ಮಾಡುವ ರಕ್ಷಣಾತ್ಮಕ ಹಾರ್ಮೋನ್ ಆಗಿದೆ. ಆದ್ದರಿಂದ, ಅವರಿಗೆ ಜೀವನದ ಮೂರು ಹಂತಗಳಲ್ಲಿ ಮಾತ್ರ ಕ್ಯಾಲ್ಸಿಯಂ ಅಗತ್ಯವಿದೆ – ಗರ್ಭಾವಸ್ಥೆಯಲ್ಲಿ, ಹಾಲುಣಿಸುವ ಸಮಯದಲ್ಲಿ ಮತ್ತು ಋತುಬಂಧದ ಸಮಯದಲ್ಲಿ. ಋತುಬಂಧದ ನಂತರದ ಹಂತದಲ್ಲಿ ಮಹಿಳೆಯರು ತಮ್ಮ ಜೀವನದುದ್ದಕ್ಕೂ ನಿಯಮಿತವಾಗಿ ಕ್ಯಾಲ್ಸಿಯಂ ತೆಗೆದುಕೊಳ್ಳಬೇಕು. ಕನಿಷ್ಠ ಪರ್ಯಾಯ ದಿನಗಳಲ್ಲಿ ಒಮ್ಮೆ, ವಾರಕ್ಕೊಮ್ಮೆ ಅಥವಾ ಜೀವಿತಾವಧಿಯಲ್ಲಿ ವಾರಕ್ಕೆ ಮೂರು ದಿನಗಳಾದರೂ ಕ್ಯಾಲ್ಸಿಯಂ ಪೂರಕಗಳನ್ನು ತೆಗೆದುಕೊಳ್ಳುವಂತೆ ನಾನು ಅವರಿಗೆ ಸಲಹೆ ನೀಡುತ್ತೇನೆ. ನಿಯಮಿತ ಮುಟ್ಟಿನ ಮಹಿಳೆಯರಿಗೆ ಥೈರಾಯ್ಡ್ ಅಥವಾ ಹೈಪರ್‌ಪ್ಯಾರಥೈರಾಯ್ಡ್ ಸಮಸ್ಯೆಗಳಿಲ್ಲದಿದ್ದರೆ ಕ್ಯಾಲ್ಸಿಯಂ ಅಗತ್ಯವಿಲ್ಲ. ಪಿಸಿಒಡಿಯಿಂದ ಬಳಲುತ್ತಿರುವವರಿಗೆ ಸಹ, ಅಗತ್ಯವಿದ್ದರೆ ಕೆಲವೊಮ್ಮೆ ಕ್ಯಾಲ್ಸಿಯಂ ಅನ್ನು ಶಿಫಾರಸು ಮಾಡಬಹುದು.

ಡಾ. ಯೋಗೀಶ್ವರ್ ಎ.ವಿ., ಹಿರಿಯ ಸಲಹೆಗಾರಆರ್ಥೋಪೆಡಿಕ್ಸ್ ಮತ್ತು ರೊಬೊಟಿಕ್ ಕೀಲು ಬದಲಿ ಶಸ್ತ್ರಚಿಕಿತ್ಸೆ, ಮಣಿಪಾಲ್ ಆಸ್ಪತ್ರೆ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ