National Dengue Day 2025: ಬಿಸಿಲು, ಮಳೆಯಾದಾಗ ಹೆಚ್ಚಾಗುತ್ತೆ ಡೆಂಗ್ಯೂ ಪ್ರಕರಣ! ಮಕ್ಕಳ ಆರೋಗ್ಯದ ಮೇಲಿರಲಿ ಎಚ್ಚರ
ರಾಷ್ಟ್ರೀಯ ಡೆಂಗ್ಯೂ ದಿನ: ಹೆಸರೇ ಹೇಳುವಂತೆ ಡೆಂಗ್ಯೂ ಒಂದು ಭಯಾನಕ ಕಾಯಿಲೆ. ಒಮ್ಮೆ ದೇಹದೊಳಗೆ ಪ್ರವೇಶ ಮಾಡಿದರೆ ದೇಹದಲ್ಲಿರುವ ನಮ್ಮ ಶಕ್ತಿಯನ್ನು ಕುಗ್ಗಿಸಿದೆ ಬಿಡುವುದಿಲ್ಲ. ಅದಲ್ಲದೆ ಬೇಸಿಗೆ ಕಾಲ ಮುಗಿದು ಮಳೆಗಾಲ ಆರಂಭವಾಗುವ ಹೊತ್ತಿನಲ್ಲಿ ಸೊಳ್ಳೆಗಳ ಕಾಟ ಕೂಡ ಹೆಚ್ಚಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಜನರು ಬಹಳ ಜಾಗೃತೆ ವಹಿಸಬೇಕಾಗುತ್ತದೆ. ಹಾಗಾದರೆ ಡೆಂಗ್ಯೂ ರೋಗ ಲಕ್ಷಣಗಳು ಹೇಗಿರುತ್ತವೆ?

ಸಾಮಾನ್ಯವಾಗಿ ಡೆಂಗ್ಯೂ (Dengue) ಪ್ರಕರಣಗಳು ಬಿಸಿಲು, ಮಳೆಯಾಗುವಾಗ ಹೆಚ್ಚಾಗುತ್ತದೆ. ಅಂದರೆ ಮಳೆಗಾಲ ಇನ್ನೇನು ಸನಿಹವಿದೆ ಎಂದಾಗ ಈ ಕಾಯಿಲೆ ಹೆಚ್ಚಾಗುವ ಭೀತಿ ಉಂಟಾಗುತ್ತದೆ. ಅದಲ್ಲದೆ ಬೇಸಿಗೆ ಕಾಲ ಮುಗಿದು ಮಳೆಗಾಲ ಆರಂಭವಾಗುವ ಹೊತ್ತಿನಲ್ಲಿ ಸೊಳ್ಳೆಗಳು ಕೂಡ ಹೆಚ್ಚಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಜನರು ಬಹಳ ಜಾಗೃತೆ ವಹಿಸಬೇಕಾಗುತ್ತದೆ. ಸದ್ಯ ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಅಲ್ಲಲ್ಲಿ ಬಿಸಿಲು, ಮಳೆಯ ಕಣ್ಣುಮುಚ್ಚಾಲೆ ಆರಂಭವಾಗಿದ್ದು ಡೆಂಗ್ಯೂ ಪ್ರಕರಣಗಳು ಹೆಚ್ಚಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಅದಕ್ಕಾಗಿಯೇ ಪ್ರತಿವರ್ಷ ಡೆಂಗ್ಯೂನಿಂದ ಆಗುವ ಅಪಾಯಗಳ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದಲೇ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿಯೂ ಕೂಡ ಮೇ.16 ರಾಷ್ಟ್ರೀಯ ಡೆಂಗ್ಯೂ ದಿನ (National Dengue Day) ವನ್ನಾಗಿ ಅಚರಿಸಲಾಗುತ್ತಿದೆ. ಹಾಗಾದರೆ ಡೆಂಗ್ಯೂ ರೋಗ ಲಕ್ಷಣಗಳು (Symptoms) ಹೇಗಿರುತ್ತವೆ? ಅದು ಬರದಂತೆ ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಡೆಂಗ್ಯೂ ಜ್ವರ ಹೇಗೆ ಬರುತ್ತದೆ?
ಹೆಸರೇ ಹೇಳುವಂತೆ ಡೆಂಗ್ಯೂ ಒಂದು ಭಯಾನಕ ಕಾಯಿಲೆ. ಒಮ್ಮೆ ದೇಹದೊಳಗೆ ಪ್ರವೇಶ ಮಾಡಿದರೆ ದೇಹದಲ್ಲಿರುವ ನಮ್ಮ ಶಕ್ತಿಯನ್ನು ಕುಗ್ಗಿಸಿದೆ ಬಿಡುವುದಿಲ್ಲ. ಸಾಂಕ್ರಾಮಿಕ ರೋಗವಾಗಿರುವ ಡೆಂಗ್ಯೂ ಈಡೀಸ್ ಈಜಿಪ್ಟಿ ಎಂಬ ಸೊಳ್ಳೆಯ ಮೂಲಕ ಹರಡುತ್ತದೆ. ರೋಗಾಣುಗಳನ್ನು ಹೊಂದಿರುವ ಸೊಳ್ಳೆ ಕಡಿದ 5 ರಿಂದ 7 ದಿನದೊಳಗೆ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಸೋಂಕಿತ ವ್ಯಕ್ತಿಯನ್ನು ಕಚ್ಚಿ ನಂತರ ಸೋಂಕಿಲ್ಲದ ವ್ಯಕ್ತಿಯನ್ನು ಕಚ್ಚಿದಾಗ ಈ ಕಾಯಿಲೆಯು ಬರುತ್ತದೆ. ಪ್ರಾರಂಭದಲ್ಲಿಯೇ ಸರಿಯಾದ ಚಿಕಿತ್ಸೆ ಪಡೆದುಕೊಳ್ಳದೇ ಹೋದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೇ ಹೆಚ್ಚು.
ಡೆಂಗ್ಯೂ ರೋಗದ ಲಕ್ಷಣಗಳೇನು?
- ಮೊದಲಿಗೆ ತೀವ್ರ ಜ್ಞರ
- ತೀವ್ರ ತರವಾದ ತಲೆನೋವು,
- ಹಣೆ ಮುಂಭಾಗದಲ್ಲಿ ಕಣ್ಣಿನ ಹಿಂಭಾಗದಲ್ಲಿ ನೋವು.
- ಕಣ್ಣು ಚಲನೆ ಮಾಡಿದಾಗ ನೋವು ಕಾಣಿಸುವುದು.
- ಮೈ ಕೈ ನೋವು ಮತ್ತು ಕೀಲು ನೋವು
- ವಾಕರಿಕೆ ಮತ್ತು ವಾಂತಿ ಇವೆಲ್ಲಾ ಸಾಮಾನ್ಯ ಲಕ್ಷಣಗಳು. ಆದರೆ ತೀವ್ರ ಹೊಟ್ಟೆನೋವು, ಬಾಯಿಯ ವಸಡಿನಿಂದ ರಕ್ತಸ್ರಾವ, ರಕ್ತ ಸಹಿತ ಅಥವಾ ರಹಿತ ವಾಂತಿಯಾವುದು. ವಿಪರೀತ ಬಾಯಾರಿಕೆಯ ಜತೆಗೆ ರೋಗಿ ಪ್ರಜ್ಞೆ ತಪ್ಪುವುದು. ಈ ರೀತಿಯಾದಾಗ ತಡಮಾಡದೆಯೇ ಆದಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ.
ಇದನ್ನೂ ಓದಿ: Baldness in Men vs. Women: ಬೋಳುತಲೆ ಮಹಿಳೆಯರಿಗಿಂತ ಪುರುಷರಲ್ಲಿಯೇ ಹೆಚ್ಚಾಗಿ ಕಂಡುಬರಲು ಇದೆ ಕಾರಣ
ಯಾವ ರೀತಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು?
ಈ ರೋಗದ ನಿಯಂತ್ರಣ ಮಾಡಲು ನೀವು ಸೊಳ್ಳೆ ಕಡಿತದಿಂದ ಪಾರಾಗಬೇಕು. ಹಾಗಾಗಿ ಪ್ರತಿನಿತ್ಯವೂ ಸಂಜೆ ಸಮಯದಲ್ಲಿ ಅಥವಾ ಸೊಳ್ಳೆ ಜಾಸ್ತಿ ಇರುವ ಹೊತ್ತಿನಲ್ಲಿ ಮೈ ತುಂಬಾ ಬಟ್ಟೆಯನ್ನು ಧರಿಸಬೇಕು, ಮಲಗುವಾಗ ಸೊಳ್ಳೆ ಪರದೆ ಬಳಸುವುದನ್ನು ಮರೆಯಬಾರದು, ಸೊಳ್ಳೆ ನಿರೋಧಕ ಕ್ರೀಮ್‌ಗಳನ್ನು ಬಳಸಬೇಕು, ಮನೆಯಲ್ಲಿ, ಸುತ್ತಮುತ್ತ ಸೊಳ್ಳೆ ಸುಳಿಯದಂತೆ ನೋಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಡೆಂಗ್ಯೂ ರೋಗ ಬರದಂತೆ ತಡೆಯಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








