ಇಂಪೆಟಿಗೊ ಒಂದು ರೀತಿಯ ಚರ್ಮದ ಮೇಲೆ ಹುಟ್ಟಿಕೊಳ್ಳುವ ಸಾಂಕ್ರಾಮಿಕ ಸೋಂಕು. ಇಂಪೆಟಿಗೊ ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಇದು ಸ್ಟ್ರೆಪ್ಟೋಕೊಕಸ್ ಎ ಮತ್ತು ಸ್ಟ್ಯಾಫಿಲೋಕೊಕಸ್ ಔರೆಸ್ ಎಂಬ ಎರಡು ಬ್ಯಾಕ್ಟೀರಿಯಾಗಳಿಂದ ಹರಡುತ್ತದೆ. 2 ರಿಂದ 5 ವರ್ಷ ವಯಸ್ಸಿನ ಮಕ್ಕಳಲ್ಲಿ ಇಂಪೆಟಿಗೊ ಹೆಚ್ಚಾಗಿ ಕಂಡುಬರುತ್ತದೆ.
ಎ ಸ್ಟ್ರೆಪ್ ಬ್ಯಾಕ್ಟೀರಿಯಾವು ಚರ್ಮಕ್ಕೆ ಸೋಂಕು ತಗುಲಿದಾಗ, ಅವು ಹುಣ್ಣುಗಳನ್ನು ಉಂಟುಮಾಡುತ್ತವೆ. ಯಾರಾದರೂ ಆ ಹುಣ್ಣುಗಳನ್ನು ಮುಟ್ಟಿದರೆ ಅಥವಾ ಹುಣ್ಣುಗಳಿಂದ ದ್ರವದ ಸಂಪರ್ಕಕ್ಕೆ ಬಂದರೆ ಬ್ಯಾಕ್ಟೀರಿಯಾವು ಇತರರಿಗೆ ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಮುಂಬಯಿ ಪ್ರಾಣ ಹೆಲ್ತ್ ಕೇರ್ ಸೆಂಟರ್ನ ಡಾ. ಡಿಂಪಲ್ ಜಂಗ್ಡಾ ಈ ಸಾಂಕ್ರಾಮಿಕ ಚರ್ಮದ ಸೋಂಕಿಗೆ ಆರ್ಯುವೇದದ ಪರಿಹಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಇಲ್ಲಿದೆ ನೋಡಿ.
2016 ರ ಅಧ್ಯಯನವೊಂದರ ಪ್ರಕಾರ ಸ್ಟ್ಯಾಫಿಲೋಕೊಕಸ್ ಮತ್ತು ಸ್ಟ್ರೆಪ್ಟೋಕೊಕಸ್ ಎಂಬ ಚರ್ಮದ ಸೋಂಕಿಗೆ ಕಾರಣವಾಗುವ ಎರಡು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವಲ್ಲಿ ಅರಶಿನವು ಉತ್ತಮ ಔಷಧಿಯಾಗಿ ಎಂದು ತಿಳಿದುಬಂದಿದೆ.
ಅರಶಿನವು ಆಂಟಿ ಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿರುವ ಕಾರಣ ಚರ್ಮದ ಸೋಂಕಿನ ವಿರುದ್ಧ ಹೋರಾಡುವಲ್ಲಿ ಸಹಾಯಕವಾಗಿದೆ. ಆದ್ದರಿಂದ ಚರ್ಮದ ಮೇಲೆ ಉಂಟಾದ ಹುಣ್ಣು ಉಂಟಾದರೆ ಅರಶಿನದ ಪೇಸ್ಟ್ ತಯಾರಿಸಿ, ಸೋಂಕಿನ ಭಾಗದ ಮೇಲೆ ಹಚ್ಚಿ 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಚರ್ಮದ ಮೇಲಿನ ಸೋಂಕಿನ ವಿರುದ್ಧ ಹೋರಾಡುವಲ್ಲಿ ಸಹಾಯಕವಾಗಿದೆ ಎಂದು ತಜ್ಞರಾದ ಡಿಂಪಲ್ ಸಲಹೆ ನೀಡುತ್ತಾರೆ.
ಜೇನುತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಾ ಗುಣ ಹೇರಳವಾಗಿರುವುದರಿಂದ ಹುಣ್ಣುಗಳಿಂದ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ. ಆದ್ದರಿಂದ ಒಂದು ಹನಿ ಜೇನುತುಪ್ಪ ತೆಗೆದುಕೊಂಡು ಹುಣ್ಣಾಗಿರುವ ಜಾಗದಲ್ಲಿ ಹಚ್ಚಿ ಹಾಗೂ 30 ನಿಮಿಷಗಳ ವರೆಗೆ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಇದನ್ನೂ ಓದಿ: H3N2 ವೈರಸ್‌ನ ರೋಗ ಲಕ್ಷಣ, ಚಿಕಿತ್ಸೆ, ಜತೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ ಯಾವುವು?
ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿಯನ್ನು ಹೊಂದಿರುವ ಕಹಿಬೇವು, ಜೊತೆಗೆ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಆದ್ದರಿಂದ ಒಂದು ಪಾತ್ರೆಯಲ್ಲಿ ನೀರು ಕುದಿಸಿ, ನೀರು ಕುದಿಯುತ್ತಿರುವಾಗಲೇ ಅದಕ್ಕೆ ಕಹಿಬೇವಿನ ಎಲೆಗಳನ್ನು ಹಾಕಿ. ನಂತರ ಈ ನೀರಿನಿಂದಲೇ ಸ್ನಾನ ಮಾಡಿ. ಇದು ಚರ್ಮದ ಮೇಲೆ ಸಾಂಕ್ರಮಿಕ ಸೋಂಕಿಗೆ ಕಾರಣವಾಗುವ ಎಲ್ಲಾ ಬ್ಯಾಕ್ಟೀರಿಯಾಗಳನ್ನು ಕೊಲ್ಲುವಲ್ಲಿ ಪ್ರಯೋಜನಕಾರಿಯಾಗಿದೆ.
ನಿಮ್ಮ ಚರ್ಮದ ಮೇಲೆ ತುರಿಕೆ ಹುಣ್ಣುಗಳು ಕಂಡು ಬಂದರೆ ತಕ್ಷಣ ಆ ಭಾಗಗಳಿಗೆ ಅಲೋವೆರಾ ಹಚ್ಚಿ. ಇದು ನಿಮ್ಮ ಚರ್ಮವನ್ನು ತಂಪಾಗಿಡುತ್ತದೆ ಮತ್ತು ಚರ್ಮದ ಸೋಂಕಿನ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತದೆ ಎಂದು ಡಾ. ಡಿಂಪಲ್ ಸಲಹೆ ನೀಡುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:00 am, Sat, 11 March 23