ಹತ್ತೆ ನಿಮಿಷದಲ್ಲಿ ಖರ್ಜೂರ ಚಣ್ನಿ ಮಾಡಿ; ಮಾಡುವ ವಿಧಾನ ಇಲ್ಲಿದೆ

ಖರ್ಜೂರದಿಂದ ಚಣ್ನಿ ಮಾಡಬಹುದಾ? ಅಂತ ಬಹುತೇಕರು ಅಂದುಕೊಂಡಿರುತ್ತಾರೆ. ಹಲವರಿಗೆ ಖರ್ಜೂರ ಚಣ್ನಿ ಬಗ್ಗೆ ಇನ್ನು ತಿಳಿದಿಲ್ಲ. ಒಮ್ಮೆ ಈ ಚಣ್ನಿ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಅಂತ ಅನಿಸದೆ ಇರದು.

ಹತ್ತೆ ನಿಮಿಷದಲ್ಲಿ ಖರ್ಜೂರ ಚಣ್ನಿ ಮಾಡಿ; ಮಾಡುವ ವಿಧಾನ ಇಲ್ಲಿದೆ
ಖರ್ಜೂರ ಚಣ್ನಿ
Follow us
TV9 Web
| Updated By: sandhya thejappa

Updated on: Jan 02, 2022 | 8:30 AM

ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿರುವ ಖರ್ಜೂರ ಎಲ್ಲರಿಗೂ ಇಷ್ಟವಾಗುತ್ತದೆ. ಪ್ರತಿದಿನ ಎರಡು ಖರ್ಜೂರ ತಿಂದರೆ ಕೆಲ ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗಬಹುದು. ಇದು ಹೆಚ್ಚು ಪೋಷಕಾಂಶಗಳಿಂದ ಕೂಡಿದೆ. ಖನಿಜಗಳು, ಕಬ್ಬಿಣ, ಪೊಟ್ಯಾಶಿಯಮ್ನಂತಹ ಅನೇಕ ಪ್ರಯೋಜಕಾರಿ ಅಂಶಗಳು ಇದರಲ್ಲಿವೆ. ಅಲ್ಲದೇ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನೂ ಹೊಂದಿದೆ. ಇನ್ನು ಇದರ ಚಣ್ನಿ ಕೂಡಾ ಆರೋಗ್ಯಕ್ಕೆ ಒಳ್ಳೆಯದು. ಜೊತೆಗೆ ನಾಲಿಗೆಗೆ ಹೆಚ್ಚು ರುಚಿ ನೀಡುತ್ತದೆ.

ಖರ್ಜೂರದಿಂದ ಚಣ್ನಿ ಮಾಡಬಹುದಾ? ಅಂತ ಬಹುತೇಕರು ಅಂದುಕೊಂಡಿರುತ್ತಾರೆ. ಹಲವರಿಗೆ ಖರ್ಜೂರ ಚಣ್ನಿ ಬಗ್ಗೆ ಇನ್ನು ತಿಳಿದಿಲ್ಲ. ಒಮ್ಮೆ ಈ ಚಣ್ನಿ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಅಂತ ಅನಿಸದೆ ಇರದು. ಚಣ್ನಿ ಮಾಡಲು ಕೇವಲ 10 ನಿಮಿಷ ಸಾಕು. ಚಣ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳು ಮತ್ತು ಚಣ್ನಿ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.

ಖರ್ಜೂರ ಚಣ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳು ಖರ್ಜೂರ- 10 ಜೀರಿಗೆ- ಅರ್ಧ ಚಮಚ ಒಣ ಮೆಣಸು- ಮೂರರಿಂದ ನಾಲ್ಕು ಸ್ವಲ್ಪ ಹುಣಸೆ ಹುಳಿ ಉಪ್ಪು ನೀರು

ಖರ್ಜೂರ ಚಣ್ನಿ ಮಾಡುವ ವಿಧಾನ ಮೊದಲು ಖರ್ಜೂರವನ್ನು ಜೀರಿಗೆ ಮತ್ತು ಹುಣಸೆ ಹುಳಿಯೊಂದಿಗೆ ಬೇಯಿಸಿ. 10ರಿಂದ 15 ನಿಮಿಷಗಳ ಕಾಲ ಬೇಯಬೇಕು. ಬೆಂದ ನಂತರ ಅದು ಅದು ತಣ್ಣಗಾಗಬೇಕು. ತಣ್ಣಗಾದ ಬಳಿಕ ಅದನ್ನ ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ಒಣ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರಯ ಹಾಕಿ ರುಬ್ಬಿ. ಖರ್ಜೂರ ಚಣ್ನಿ ರೆಡಿ.

ಇದನ್ನೂ ಓದಿ

TMC Foundation Day: ತೃಣಮೂಲ ಕಾಂಗ್ರೆಸ್​ಗೆ 24 ವರ್ಷ; ರಾಷ್ಟ್ರ ರಾಜಕಾರಣದತ್ತ ದೀದಿ ಒಲವು, ಒಂದಾಗಲು ಕಾರ್ಯಕರ್ತರಿಗೆ ಕರೆ

Viral Video: ಮಗನಿಗೂ ಯಾರ್ಕರ್​…ಮಿಡ್ಲ್ ಸ್ಟಂಪ್ ಎಗರಿಸಿದ ಬ್ರೆಟ್ ಲೀ