
ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಹಲ್ಲುಜ್ಜುವುದು ಇದ್ದೇ ಇರುತ್ತದೆ. ಹೊಳೆಯುವ ಹಲ್ಲಿಗಾಗಿ ಇಲ್ಲಸಲ್ಲದ ಟೂತ್ಪೇಸ್ಟ್ಗಳನ್ನು (toothbrush) ಬಳಸುತ್ತೇವೆ. ಆದರೆ ಇದರಿಂದಲೇ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವುದು ಮತ್ತು ದುರ್ಬಲ ಒಸಡುಗಳು ಉಂಟಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ನಮ್ಮ ಹಿರಿಯರು ಅಂದಿನ ಕಾಲದಲ್ಲಿ ಟೂತ್ಪೇಸ್ಟ್ಗಳನ್ನು ಬಳಸುತ್ತಿರಲಿಲ್ಲ. ಬದಲಾಗಿ ಬೇವು ಮತ್ತು ಅಕೇಶಿಯಾದ ಆ ನೈಸರ್ಗಿಕ ಕಡ್ಡಿಗಳನ್ನು ಬಳಸುತ್ತಿದ್ದರು. ಕೆಲವೊಂದು ಹಳ್ಳಿಗಳಲ್ಲಿ ಇಂದಿಗೂ ಈ ಬೇವು ಮತ್ತು ಅಕೇಶಿಯಾದ ಕಡ್ಡಿಗಳನ್ನು ಬಳಸುತ್ತಿದ್ದಾರೆ. ಅವರ ಹಲ್ಲುಗಳು ಇಂದಿಗೂ ಅವರ ಹಲ್ಲುಗಳು ಆರೋಗ್ಯವಾಗಿದೆ.
ದಾತುನ್ ಎಂಬುದು ಬೇವು, ಅಕೇಶಿಯಾ ಅಥವಾ ಕಾರಂಜಾ ಮುಂತಾದ ಮರಗಳ ಕಡ್ಡಿಗಳಿಂದ ತಯಾರಿಸಿದ ನೈಸರ್ಗಿಕವಾದ ಹಲ್ಲುಜ್ಜುವ ಬ್ರಷ್, ಇದನ್ನು ಅಗಿಯುವುದರಿಂದ ಹಲ್ಲು ಸ್ವಚ್ಛಗೊಳ್ಳುತ್ತದೆ, ಒಸಡುಗಳಿಗೆ ಉತ್ತಮ ಮಸಾಜ್ ಆಗುತ್ತದೆ. ಇದರ ಜತೆಗೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಹಲ್ಲುಜ್ಜುವ ಬ್ರಷ್‌ಗಳು ಅಥವಾ ರಾಸಾಯನಿಕ ಪೇಸ್ಟ್‌ಗಳು ಇಲ್ಲದಿದ್ದಾಗ, ಈ ದಾತುನ್ ಬಳಸುತ್ತಿದ್ದರು.
ನೈಸರ್ಗಿಕ ನಂಜುನಿರೋಧಕ: ಬೇವು ಮತ್ತು ಅಕೇಶಿಯಾದ ಕಹಿ ಕಡ್ಡಿಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿವೆ.
ನೈಸರ್ಗಿಕ ಫ್ಲೋಸಿಂಗ್ : ಇವುಗಳನ್ನು ಅಗಿಯುವುದರಿಂದ ಅದರ ನಾರುಗಳು ಹಲ್ಲುಗಳ ನಡುವೆ ತೂರಿಕೊಂಡು ಸಿಕ್ಕಿಬಿದ್ದ ಆಹಾರ ಮತ್ತು ಪ್ಲೇಕ್ ಅನ್ನು ತೆಗೆದುಹಾಕಲು ಅನುವು ಮಾಡಿಕೊಡುತ್ತದೆ.
ಒಸಡುಗಳನ್ನು ಬಲಪಡಿಸುವುದು: ದಾತುನ್ ಒಸಡುಗಳನ್ನು ನಿಧಾನವಾಗಿ ಮಸಾಜ್ ಮಾಡುತ್ತದೆ, ಇದು ರಕ್ತ ಪರಿಚಲನೆ ಹೆಚ್ಚಿಸುತ್ತದೆ ಹಾಗೂ ಒಸಡುಗಳನ್ನು ಬಲಪಡಿಸುತ್ತದೆ.
ಹಳದಿ ಬಣ್ಣ ಹೋಗುತ್ತದೆ: ನಿಯಮಿತ ಬಳಕೆಯಿಂದ, ಹಲ್ಲುಗಳ ಹಳದಿ ಬಣ್ಣವೂ ಹೋಗುತ್ತದೆ.
ಬಾಯಿಯ ದುರ್ವಾಸನೆಯಿಂದ ಪರಿಹಾರ: ಈ ಕಡ್ಡಿಗಳು ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ.
ಇದನ್ನೂ ಓದಿ: ತಡವಾಗಿ ಉಪಾಹಾರ ಸೇವಿಸಿದ್ರೆ ನಿಮ್ಮ ಆಯಸ್ಸು ಕಡಿಮೆಯಾಗುತ್ತೆ; ಅಧ್ಯಯನದಿಂದ ಬಹಿರಂಗ
ಬೆಳಿಗ್ಗೆ ಬೇವು ಅಥವಾ ಅಕೇಶಿಯಾದ ತೆಳುವಾದ ಕಡ್ಡಿಯನ್ನು ತೆಗೆದುಕೊಳ್ಳಿ. ಅದರ ಒಂದು ತುದಿಯನ್ನು ಅಗಿಯಿರಿ, ಅದನ್ನು ನಾರಿನಂತೆ ಮಾಡಿ. ನಂತರ ಹಲ್ಲುಗಳ ಮೇಲೆ ನಿಧಾನವಾಗಿ ಉಜ್ಜಿ ಮತ್ತು ಒಸಡುಗಳಿಗೆ ಮಸಾಜ್ ಮಾಡಿ. ದಿನಕ್ಕೆ ಒಮ್ಮೆ ಬಳಸಿದರೆ ಸಾಕು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:15 pm, Wed, 17 September 25