ಮಲ್ಲಿಗೆಯ ಸುವಾಸನೆಯಲ್ಲಿದೆ ಆರೋಗ್ಯದ ಗುಟ್ಟು
ಹೆಣ್ಣು ಮಕ್ಕಳಿಗೆ ಮಲ್ಲಿಗೆ ಅಂದ್ರೆ ಅಚ್ಚುಮೆಚ್ಚು. ಸಾಂಪ್ರದಾಯಿಕ ಉಡುಗೆ ತೊಟ್ಟರೆ ಮಲ್ಲಿಗೆ ಇರಲೇಬೇಕು. ಮುಡಿಯನ್ನು ಅಲಂಕರಿಸುವ ಮಲ್ಲಿಗೆ ಹೂವಿನ ಘಮವು ಮೂಗಿಗೆ ಬಡಿದ್ರೆ ಕೆಲವರಿಗೆ ತಲೆನೋವು ಶುರುವಾಗುತ್ತದೆ. ಹೀಗಾಗಿ ಕೆಲವರು ಈ ಮಲ್ಲಿಗೆಯ ಪರಿಮಳವನ್ನು ಅಷ್ಟಾಗಿ ಇಷ್ಟ ಪಡುವುದಿಲ್ಲ. ಆದ್ರೆ ಮಲ್ಲಿಗೆ ಸುವಾಸನೆಯಿಂದಲೂ ಆರೋಗ್ಯ ಪ್ರಯೋಜನಗಳು ಇವೆಯಂತೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಮಲ್ಲಿಗೆ (Jasmine) ಹೆಸರು ಕೇಳಿದ ತಕ್ಷಣ ಹೆಂಗಳೆಯರ ಕಿವಿ ನೆಟ್ಟಗಾಗುತ್ತದೆ. ಹೆಣ್ಣು ಮಕ್ಕಳಿಗೆ ಮಲ್ಲಿಗೆ ಹೂವು ಮುಡಿಯುವುದು ಎಂದರೆ ತುಂಬಾನೇ ಇಷ್ಟ. ಇನ್ನು ಕೆಲವರು ಈ ಹೂವಿನ ಸುವಾಸನೆಯನ್ನು ಇಷ್ಟ ಪಡ್ತಾರೆ. ಮಲ್ಲಿಗೆಯಲ್ಲಿ ಔಷಧೀಯ ಗುಣಗಳನ್ನು ಹೊಂದಿದ್ದು ಇದರ ಲಾಭಗಳು ಅತ್ಯಧಿಕ. ಘಮ ಬೀರುವ ಈ ಹೂವು ಮುಡಿಯುವುದು ಮಾತ್ರ ಇದರಿಂದ ಸುವಾಸನೆಯನ್ನು ತೆಗೆದುಕೊಳ್ಳುವುದರಿಂದ ಆರೋಗ್ಯ ಪ್ರಯೋಜನಗಳಿವೆ (health benefits) ಎಂಬುದು ಎಷ್ಟೋ ಜನರಿಗೆ ತಿಳಿದೇ ಇಲ್ಲ. ಹೂವು ಮುಡಿಯುವ ಮುನ್ನ ಇದರ ಆರೋಗ್ಯ ಲಾಭಗಳನ್ನು ಮೊದಲು ತಿಳಿದುಕೊಳ್ಳಿ.
ಮಲ್ಲಿಗೆಯ ಸುವಾಸನೆಯ ಆರೋಗ್ಯ ಪ್ರಯೋಜನಗಳೇನು?
- ಮಲ್ಲಿಗೆಯ ಸುವಾಸನೆಯೂ ಮನಸ್ಸನ್ನು ಶಾಂತಗೊಳಿಸಿ, ಇದು ಒತ್ತಡ ಹಾಗೂ ಆತಂಕವನ್ನು ಕಡಿಮೆ ಮಾಡುತ್ತದೆ.
- ಮಲ್ಲಿಗೆಯ ಘಮವು ನಿದ್ರಾಹೀನತೆಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಇದರ ಘಮ ತೆಗೆದುಕೊಳ್ಳುವುದು ನಿದ್ರೆಯನ್ನು ಉತ್ತೇಜಿಸಲು ಸಹಕಾರಿಯಾಗಿದೆ.
- ನಿಯಮಿತವಾಗಿ ಮಲ್ಲಿಗೆ ಸುವಾಸನೆ ತೆಗೆದುಕೊಳ್ಳುವುದರಿಂದ ಮನಸ್ಸು ಹಗುರವಾಗುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸಿ ಖಿನ್ನತೆಯನ್ನು ದೂರ ಮಾಡುತ್ತದೆ.
ಇದನ್ನೂ ಓದಿ:ಮಲ್ಲಿಗೆ ಸುವಾಸನೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು! ಇದೇ ಕಾರಣಕ್ಕೆ ಫಸ್ಟ್ ನೈಟ್ ನಲ್ಲಿ ಇಡುವುದು
- ಮಲ್ಲಿಗೆ ಹೂವಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್‌ಗಳು ಮೆದುಳಿನ ಕಾರ್ಯಚಟುವಟಿಕೆಯನ್ನು ಸುಧಾರಿಸುತ್ತದೆ. ಏಕಾಗ್ರತೆ, ಸ್ಮರಣಾ ಶಕ್ತಿಯನ್ನು ಉತ್ತೇಜಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:50 pm, Wed, 17 September 25








