International Coffee Day 2024: ಬ್ಲಾಕ್ ಕಾಫಿ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?

International Coffee Day 2024: ಇಡೀ ಜಗತ್ತಿನಲ್ಲಿ ಹೆಚ್ಚು ಸೇವನೆ ಆಗುವ ಪಾನಿಯವೆಂದರೆ ಅದು ಕಾಫಿ. ಅದೆಷ್ಟೂ ಮಂದಿ ಒಂದು ಕಪ್ ಕಾಫಿ ಕುಡಿಯಲು ಕಿಲೋ ಮೀಟರ್ ಗಟ್ಟಲೆ ಹೋಗುತ್ತಾರೆ. ಕೆಲವರಿಗೆ ಕಾಫಿಯ ಪರಿಮಳ, ಅದರ ಸ್ವಾದ ಅಮೃತವಿದ್ದಂತೆ. ಅದರಲ್ಲಿಯೂ ಬ್ಲಾಕ್ ಕಾಫಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದರೆ ಕಾಫಿ ನಮ್ಮ ದೇಶಕ್ಕೆ ಬಂದದ್ದು ಹೇಗೆ? ಇದರ ಇತಿಹಾಸ, ಮಹತ್ವವೇನು? ಈ ದಿನವನ್ನು ಆಚರಿಸುವ ಉದ್ದೇಶವೇನು? ಬ್ಲಾಕ್ ಕಾಫಿ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

International Coffee Day 2024: ಬ್ಲಾಕ್ ಕಾಫಿ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 01, 2024 | 10:46 AM

ಕಾಫಿ ಕುಡಿಯುವುದು ಒಳ್ಳೆಯದಲ್ಲ ಎನ್ನುವುದು ಹಲವರ ಮನೋಭಾವ. ಆದರೆ ಇಡೀ ಜಗತ್ತಿನಲ್ಲಿ ಹೆಚ್ಚು ಸೇವನೆ ಆಗುವ ಪಾನಿಯವೆಂದರೆ ಅದು ಕಾಫಿ. ಅದೆಷ್ಟೂ ಮಂದಿ ಒಂದು ಕಪ್ ಕಾಫಿ ಕುಡಿಯಲು ಕಿಲೋ ಮೀಟರ್ ಗಟ್ಟಲೆ ಹೋಗುತ್ತಾರೆ. ಕೆಲವರಿಗೆ ಕಾಫಿಯ ಪರಿಮಳ, ಅದರ ಸ್ವಾದ ಅಮೃತವಿದ್ದಂತೆ. ಅದರಲ್ಲಿಯೂ ಬ್ಲಾಕ್ ಕಾಫಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದರೆ ಕಾಫಿ ನಮ್ಮ ದೇಶಕ್ಕೆ ಬಂದದ್ದು ಹೇಗೆ? ಇದರ ಇತಿಹಾಸ, ಮಹತ್ವವೇನು? ಈ ದಿನವನ್ನು ಆಚರಿಸುವ ಉದ್ದೇಶವೇನು? ಬ್ಲಾಕ್ ಕಾಫಿ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಈ ದಿನದ ಹಿನ್ನೆಲೆಯೇನು?

ಅಂತರಾಷ್ಟ್ರೀಯ ಕಾಫಿ ಸಂಸ್ಥೆಯ 77 ಸದಸ್ಯ ರಾಷ್ಟ್ರಗಳು ಮತ್ತು ಪ್ರಪಂಚದಾದ್ಯಂತದ ಕಾಫಿ ಸಂಘಗಳು ಅ. 1ರಂದು ಕಾಫಿ ದಿನವನ್ನು ಆಚರಿಸುತ್ತವೆ. 2014 ರಲ್ಲಿ, ಕಾಫಿ ವಲಯದ ವೈವಿಧ್ಯತೆ, ಗುಣಮಟ್ಟ ಮತ್ತು ಕಾಫಿ ಬೆಳೆಯುವವರ ಉತ್ಸಾಹವನ್ನು ಇಮ್ಮಡಿಗೊಳಿಸಲು ಮತ್ತು ಎಲ್ಲಾ ಕಾಫಿ ಪ್ರಿಯರಿಗೆ ಈ ದಿನವನ್ನು ಮೀಸಲಿಡಲು ಅಂತರಾಷ್ಟ್ರೀಯ ಕಾಫಿ ಸಂಸ್ಥೆ (ಐಸಿಒ) ನಿರ್ಧರಿಸಿದ್ದು, ಹಾಗಾಗಿ ನಾವು ಪ್ರತಿವರ್ಷ ಅ. 1ರಂದು ಅಂತರಾಷ್ಟ್ರೀಯ ಕಾಫಿ ದಿನವನ್ನು ಆಚರಿಸುತ್ತೇವೆ.

ಕಾಫಿಯನ್ನು ಭಾರತಕ್ಕೆ ತಂದವರು ಯಾರು?

ಭಾರತಕ್ಕೆ ಕಾಫಿಯನ್ನು ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ಖ್ಯಾತಿಯ ಬಾಬಾಬುಡನ್ ಅವರು ತಂದರು. ಇವರು ಮೆಕ್ಕಾಯಾತ್ರೆಗೆಂದು ಹೋದಾಗ ಯೆಮೆನ್‌ನಿಂದ ತಮ್ಮೊಂದಿಗೆ ಏಳು ಕಾಫಿ ಬೀಜಗಳನ್ನು ಚಿಕ್ಕಮಗಳೂರಿಗೆ ತಂದರು. ಅಲ್ಲಿಂದ ಆ ಏಳು ಬೀಜಗಳಿಂದ ಚಿಕ್ಕಮಗಳೂರು ಕಾಫಿ ಬೆಳೆಗೆಂದೇ ಖ್ಯಾತಿ ಪಡೆಯುವಂತಾಗಿದೆ. ಭಾರತ ಪ್ರತಿವರ್ಷ ಸುಮಾರು 3,20,000 ಮೆಗಾಟನ್ ಕಾಫಿಯನ್ನು ಉತ್ಪಾದಿಸುತ್ತಿದ್ದು ಕರ್ನಾಟಕ, ತಮಿಳುನಾಡು ಮತ್ತು ಕೇರಳ ಪ್ರಮುಖ ಕಾಫಿ ಉತ್ಪಾದನಾ ರಾಜ್ಯಗಳಾಗಿವೆ. ಹಾಗೆ ಬೆಳೆದದ್ದರಲ್ಲಿ ಸುಮಾರು 70% ಕಾಫಿಯನ್ನು ಭಾರತ ರಫ್ತು ಮಾಡುತ್ತದೆ.

ಬ್ಲಾಕ್ ಕಾಫಿ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?

1. ದೇಹಕ್ಕೆ ಶಕ್ತಿಯನ್ನು ನೀಡುತ್ತದೆ

ಕಾಫಿಯಲ್ಲಿ ಕೆಫೀನ್ ಅಂಶವು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.

2. ಟೈಪ್ 2 ಮಧುಮೇಹವನ್ನು ಕಡಿಮೆ ಮಾಡುತ್ತದೆ

ನಿಯಮಿತವಾಗಿ ಕಾಫಿ ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಟೈಪ್ 2 ಮಧುಮೇಹದ ಅಪಾಯ ಕಡಿಮೆಯಾಗುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ಒಂದು ವೇಳೆ ಮಧುಮೇಹ ಇದ್ದರೂ ಕೂಡ ಕಾಫಿಯಲ್ಲಿ ಸಿಗುವ ಕೆಫಿನ್ ಅಂಶ ತನ್ನ ಆಂಟಿಆಕ್ಸಿಡೆಂಟ್ ಹಾಗೂ ಮೆಗ್ನೀಷಿಯಂ ಅಂಶದ ಪ್ರಭಾವದಿಂದ ಮಧುಮೇಹದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಿಯಂತ್ರಿತ ಪ್ರಮಾಣದಲ್ಲಿ ಕಾಫಿ ಸೇವನೆ ಒಳ್ಳೆಯದು.

3. ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಅಲ್ಝೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆ ಸೇರಿದಂತೆ ಕೆಲವು ನ್ಯೂರೋಡಿಜೆನರೇಟಿವ್ ಅಸ್ವಸ್ಥತೆಗಳಿಂದ ರಕ್ಷಿಸಲು ಕಾಫಿ ಸಹಾಯ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳಿಂದ ತಿಳಿದು ಬಂದಿದೆ. ಅದಲ್ಲದೆ ನಿಯಮಿತವಾಗಿ ಕಾಫಿ ಸೇವನೆಯು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಹಲವಾರು ಅಧ್ಯಯನಗಳು ತೋರಿಸಿವೆ.

4. ತೂಕ ಕಡಿಮೆ ಮಾಡುತ್ತದೆ

ಕಾಫಿಯಲ್ಲಿ ಕಂಡು ಬರುವ ಕೆಫಿನ್ ಅಂಶವು ದೇಹದ ತೂಕ ಮತ್ತು ಬೊಜ್ಜಿನ ಸಮಸ್ಯೆ ಇರುವವರಿಗೆ ಒಳ್ಳೆಯದು. ಏಕೆಂದರೆ ಇದು ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಕೊಬ್ಬಿನ ಅಂಶವನ್ನು ಕರಗಿಸುವಂತೆ ಸೂಚನೆ ಕೊಡುತ್ತದೆ. ಅನೇಕ ಆರೋಗ್ಯಕರ ಪಾನೀಯಗಳಲ್ಲಿ ಕೂಡ ಕೆಫಿನ್ ಅಂಶ ಇರುತ್ತದೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಹೃದ್ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಎಐ ನಿಮಗೆ ಸೂಚನೆ ನೀಡುತ್ತೆ

5. ಖಿನ್ನತೆಯ ಅಪಾಯವೂ ಕಡಿಮೆಯಾಗುತ್ತದೆ

ಕಾಫಿ ಕುಡಿಯುವುದರಿಂದ ಖಿನ್ನತೆಯ ಅಪಾಯ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳಿಂದ ಕಂಡು ಬಂದಿದೆ. ಜೊತೆಗೆ ಆತ್ಮಹತ್ಯೆ ಮತ್ತು ಸಾವಿನ ಅಪಾಯ ಕಡಿಮೆಯಾಗುತ್ತದೆ. ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯ ಹೇಳುವ ಪ್ರಕಾರ ಯಾವ ಮಹಿಳೆಯರು ಪ್ರತಿದಿನ ನಾಲ್ಕು ಕಪ್ ಕಾಫಿ ಕುಡಿಯುತ್ತಾರೆಯೋ ಅವರಿಗೆ ಮಾನಸಿಕ ಖಿನ್ನತೆ ಸಮಸ್ಯೆ ಶೇಕಡ 20% ಕಡಿಮೆಯಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:32 am, Tue, 1 October 24

ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ