International Yoga Day 2024: ಶಿಶು ಆರೋಗ್ಯವಾಗಿ ಬೆಳೆಯಲು ಪ್ರಸವಪೂರ್ವ ಸಮಯದಲ್ಲಿ ಈ ಆಸನ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 20, 2024 | 10:57 AM

ಗರ್ಭಿಣಿಯರು ಯೋಗ ಮಾಡುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಆದರೆ ಮೊದಲಿನಿಂದಲೂ ಯೋಗ ಮಾಡುತ್ತಿದ್ದವರು ಗರ್ಭಾವಸ್ಥೆಯಲ್ಲಿಯೂ ಯೋಗ ಮಾಡುತ್ತಾರೆ. ಇನ್ನು ಕೆಲವರು ಗರ್ಭಾವಸ್ಥೆಯಲ್ಲಿ ಯೋಗ ಶುರು ಮಾಡಲು ಬಯಸ್ತಾರೆ. ಆದರೆ ಸರಿಯಾದ ಮಾರ್ಗದರ್ಶನ ತೆಗೆದುಕೊಳ್ಳದೆಯೇ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾದರೆ ಗರ್ಭಾಸ್ಥೆಯಲ್ಲಿ ಯೋಗ ಮಾಡಬಹುದೇ? ಮಾಡುವುದರಿಂದ ಸಿಗುವ ಪ್ರಯೋಜನಗಳೇನು? ತಿಳಿದುಕೊಳ್ಳಿ.

International Yoga Day 2024: ಶಿಶು ಆರೋಗ್ಯವಾಗಿ ಬೆಳೆಯಲು ಪ್ರಸವಪೂರ್ವ ಸಮಯದಲ್ಲಿ ಈ ಆಸನ ಮಾಡಿ
International Yoga Day 2024
Follow us on

ಪ್ರಸವಪೂರ್ವ ಯೋಗ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಯೋಗ ಕೇವಲ ದೇಹಕ್ಕೆ ವ್ಯಾಯಾಮ ನೀಡುವುದಿಲ್ಲ. ಬದಲಾಗಿ ದೇಹ, ಮನಸ್ಸು ಮತ್ತು ಉಸಿರಾಟದ ನಡುವೆ ಸಮತೋಲನವನ್ನು ತರುವ ಕೆಲಸವನ್ನು ಮಾಡುತ್ತದೆ. ಹಾಗಾಗಿ ಗರ್ಭಿಣಿಯರು ಯೋಗ ಮಾಡುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಆದರೆ ಮೊದಲಿನಿಂದಲೂ ಯೋಗ ಮಾಡುತ್ತಿದ್ದವರು ಗರ್ಭಾವಸ್ಥೆಯಲ್ಲಿಯೂ ಯೋಗ ಮಾಡುತ್ತಾರೆ. ಇನ್ನು ಕೆಲವರು ಗರ್ಭಾವಸ್ಥೆಯಲ್ಲಿ ಯೋಗ ಮಾಡಲು ಆರಂಭಿಸುತ್ತಾರೆ. ಆದರೆ ಸರಿಯಾದ ಮಾರ್ಗದರ್ಶನ ತೆಗೆದುಕೊಳ್ಳದೆಯೇ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾದರೆ ಗರ್ಭಾಸ್ಥೆಯಲ್ಲಿ ಯೋಗ ಮಾಡಬಹುದೇ? ಮಾಡುವುದರಿಂದ ಸಿಗುವ ಪ್ರಯೋಜನಗಳೇನು? ತಿಳಿದುಕೊಳ್ಳಿ.

ಯಾವ ಸಮಯದಲ್ಲಿ ಯೋಗವನ್ನು ಪ್ರಾರಂಭಿಸಬೇಕು?

ಸಾಮಾನ್ಯವಾಗಿ ಗರ್ಭಿಣಿಯರು ಎರಡನೇ ತ್ರೈಮಾಸಿಕದಲ್ಲಿ ಅಂದರೆ 14 ವಾರಗಳ ನಂತರ ಯೋಗ ಮಾಡಬಹುದು. ಈ ಪ್ರಸವಪೂರ್ವ ಯೋಗಗಳು ಮಗುವಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಮೊದಲ ಮೂರು ತಿಂಗಳು ಯೋಗ ಮಾಡುವುದು ಒಳ್ಳೆಯದಲ್ಲ. ಇದರಿಂದ ಕೆಲವರಿಗೆ ಗರ್ಭಪಾತವಾಗುವ ಸಾಧ್ಯತೆಯಿರುತ್ತದೆ. ಯೋಗ ಅಥವಾ ಇತರ ಯಾವುದೇ ವ್ಯಾಯಾಮ ಮಾಡುವುದರಿಂದ ಭ್ರೂಣಕ್ಕೆ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅಲ್ಲದೆ, ಈ ಯೋಗಗಳನ್ನು ಸ್ವತಃ ನೀವೇ ಮಾಡುವ ಮೊದಲು ಯೋಗ ಪರಿಣಿತರನ್ನು ಸಂಪರ್ಕಿಸಿ ಸಲಹೆ ತೆಗೆದುಕೊಳ್ಳುವುದು ಅಥವಾ ಯೋಗ ತರಬೇತಿ ಪಡೆಯುವುದು ಒಳ್ಳೆಯದು.

ಯಾವ ಆಸನಗಳು ಉತ್ತಮ?

ಅಧ್ಯಯನದ ಪ್ರಕಾರ, ಗರ್ಭಿಣಿಯರು ಪಶ್ಚಿಮೋತ್ತಾಸನ, ಸುಖಾಸನ, ವೀರಭದ್ರಾಸನ, ಉತ್ತಾನಾಸನ, ಊರ್ಧ್ವ ಉತ್ತಾನಾಸನ, ಮಾರ್ಜರಿಯಾಸನ, ವಿರಾಸನ ಮತ್ತು ಉಷ್ಟ್ರಾಸನ ಇತ್ಯಾದಿಗಳನ್ನು ಮಾಡಬಹುದು.

ಪ್ರಯೋಜನಗಳೇನು?

ಪ್ರಸವಪೂರ್ವ ಯೋಗವು ಗರ್ಭದಲ್ಲಿರುವ ಶಿಶು ಆರೋಗ್ಯಕರವಾಗಿ ಬೆಳೆಯಲು ಅನುಕೂಲ ಮಾಡಿಕೊಡುತ್ತದೆ. ನಿಮ್ಮ ನಿದ್ರೆಯನ್ನು ಸುಧಾರಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೆರಿಗೆಗೆ ಅಗತ್ಯವಾದ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆನ್ನು ನೋವು, ವಾಕರಿಕೆ, ತಲೆನೋವು ಮತ್ತು ಉಸಿರಾಟದ ತೊಂದರೆಗಳಿದ್ದರೆ ಅದನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಯಾರೆಲ್ಲಾ ಕಾಲೇಜಿಗೆ ಹೋಗುವ ಮೊದಲು ತಿಂಡಿ ಮಾಡಲ್ಲಾ? ಒಮ್ಮೆ ಇಲ್ಲಿ ಗಮನಿಸಿ

ಯೋಗ ಮಾಡುವ ಭರದಲ್ಲಿ ಇದನ್ನು ಮರೆಯಬೇಡಿ:

ಯೋಗ ಮಾಡುವ ಭರದಲ್ಲಿ ದೇಹಕ್ಕೆ ಒತ್ತಡ ಹಾಕಬೇಡಿ. ಯೋಗವನ್ನು ತರಾತುರಿಯಲ್ಲಿ ಮಾಡಬೇಡಿ. ನಿಧಾನವಾಗಿ, ನಿಮಗೆ ಸಾಧ್ಯವಾದಷ್ಟೇ ಮಾಡಿ. ಆದರೆ ಯಾವುದೇ ಆಸನವನ್ನು ಮಾಡುವ ಮೊದಲು ನಿಮ್ಮ ವೈದ್ಯರ ಜೊತೆ ಮಾತನಾಡುವುದು ಬಹಳ ಒಳ್ಳೆಯದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 8:12 pm, Tue, 18 June 24