AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pregnancy: ಗರ್ಭಿಣಿಯರು ಈ ವಿಷಯಗಳನ್ನು ಪಾಲಿಸಿ, ಗರ್ಭಪಾತವನ್ನು ತಪ್ಪಿಸಿ

ಗರ್ಭಿಣಿಯಾದ ನಂತರ, ಮಹಿಳೆಯರಿಗೆ ಸುಮಾರು 3 ತಿಂಗಳವರೆಗೆ ಹೆಚ್ಚುವರಿ ಆರೈಕೆಯ ಅಗತ್ಯವಿರುತ್ತದೆ. ಪಪ್ಪಾಯಿ ಮತ್ತು ಮಾಂಸಾಹಾರಗಳಿಂದ ದೂರವಿರಬೇಕು ಎಂದು ಹೇಳಲಾಗುತ್ತದೆ. ಹಾಗಾದರೆ ಗರ್ಭಪಾತವನ್ನು ತಡೆಯಲು ಯಾವ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು? ಈ ಬಗ್ಗೆ ತಜ್ಞರು ಹೇಳುವುದೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

Pregnancy: ಗರ್ಭಿಣಿಯರು ಈ ವಿಷಯಗಳನ್ನು ಪಾಲಿಸಿ, ಗರ್ಭಪಾತವನ್ನು ತಪ್ಪಿಸಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 15, 2024 | 11:41 AM

Share

ಗರ್ಭಧಾರಣೆ ಎನ್ನುವುದು ದಾಂಪತ್ಯ ಜೀವನದ ಸುಂದರವಾದ ಘಟ್ಟ. ಈ ಸಮಯದಲ್ಲಿ ತಾಯಿ ಮತ್ತು ಮಗುವಿನ ಸುರಕ್ಷತೆ ಬಹಳ ಮುಖ್ಯವಾಗುತ್ತದೆ. ಏಕೆಂದರೆ ಆ ಸಂದರ್ಭಗಳಲ್ಲಿ ಗರ್ಭಪಾತದ ಅಪಾಯ ಹೆಚ್ಚಾಗಿರುತ್ತದೆ. ಆದರೆ ಇದನ್ನು ತಪ್ಪಿಸಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮಹಿಳೆಯರು ಗರ್ಭಪಾತ ಆಗದಂತೆ ತಡೆಯಲು, ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದು ವೈದ್ಯರು ಹೇಳುತ್ತಾರೆ.

ಇದಕ್ಕಾಗಿ, ನಿಮ್ಮ ಆಹಾರದಲ್ಲಿ ಹಣ್ಣು, ತರಕಾರಿ, ಧಾನ್ಯ ಮತ್ತು ಪ್ರೋಟೀನ್ಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸುವುದು ಒಳ್ಳೆಯದು. ಫೋಲಿಕ್ ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಇತರ ಅಗತ್ಯ ಪೋಷಕಾಂಶಗಳ ಸೇವನೆಯು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದಲ್ಲದೆ, ಇನ್ನಿತರ ಅನೇಕ ವಿಷಯಗಳನ್ನು ಈ ಸಮಯದಲ್ಲಿ ಪಾಲಿಸಬೇಕು. ಗರ್ಭಿಣಿಯಾದ ನಂತರ, ಮಹಿಳೆಯರಿಗೆ ಸುಮಾರು 3 ತಿಂಗಳವರೆಗೆ ಹೆಚ್ಚುವರಿ ಆರೈಕೆಯ ಅಗತ್ಯವಿರುತ್ತದೆ. ಪಪ್ಪಾಯಿ ಮತ್ತು ಮಾಂಸಾಹಾರಗಳಿಂದ ದೂರವಿರಬೇಕು ಎಂದು ಹೇಳಲಾಗುತ್ತದೆ. ಹಾಗಾದರೆ ಗರ್ಭಪಾತವನ್ನು ತಡೆಯಲು ಯಾವ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು? ಈ ಬಗ್ಗೆ ತಜ್ಞರು ಹೇಳುವುದೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

ಗರ್ಭಪಾತ ಎಂದರೇನು?

ಗರ್ಭಪಾತವೆಂದರೆ ಗರ್ಭಧಾರಣೆಯು ಮಧ್ಯದಲ್ಲೇ ಅಂತ್ಯವಾಗುವುದು. ಶೇ.25ರಷ್ಟು ಮಹಿಳೆಯರಲ್ಲಿ ಗರ್ಭಪಾತ ಸಮಸ್ಯೆ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ನಾಲ್ಕರಿಂದ 6 ವಾರಗಳಲ್ಲಿ ಕಂಡುಬರುವುದು. ಗರ್ಭಧಾರಣೆಯ 13 ವಾರಗಳ ನಡುವೆ ಗರ್ಭಪಾತ ಆಗುತ್ತದೆ. ಆದರೆ ಶೇ.1ರಷ್ಟು ಗರ್ಭಿಣಿಯರಲ್ಲಿ 13 ವಾರಗಳ ಬಳಿಕವೂ ಆಗಬಹುದು. ಇದು ಹೆಚ್ಚಾಗಿ ಮೊದಲ ತ್ರೈಮಾಸಿಕದಲ್ಲಿ ಆಗುವ ಸಾಧ್ಯತೆ ಇರುತ್ತದೆ. ಗರ್ಭಧಾರಣೆಯು ಅನೇಕ ಕಾರಣಗಳಿಂದ ಸಂಭವಿಸಬಹುದು. ಅಂಡಾಣುವು ಬೇರೆ ಜಾಗದಲ್ಲಿ ಹೋಗಿ ನೆಲೆ ನಿಂತಿರಬಹುದು. ಆನುವಂಶಿಕ ಕಾರಣಗಳಿಂದಾಗಿಯೂ ಸಂಭವಿಸುತ್ತದೆ. ಗರ್ಭಿಣಿಯರ ನಿಯಂತ್ರಣದಲ್ಲಿ ಇರದೇ ಕೆಲವೊಂದು ಸಲ ಗರ್ಭಪಾತವು ಆಗುತ್ತದೆ. ಈ ಸಮಯದಲ್ಲಿ ರಕ್ತವು ಋತುಚಕ್ರದ ರೀತಿ ಬರಲು ಪ್ರಾರಂಭಿಸಿದರೆ, ಅದು ಗರ್ಭಪಾತದ ಸಂಕೇತವಾಗಿದೆ.

ಯಾವುದನ್ನು ತಪ್ಪಿಸಬೇಕು?

ಡಾ. ನೀತಿ ಹೇಳುವ ಪ್ರಕಾರ ಈ ಸಮಯದಲ್ಲಿ ಜಂಕ್ ಫುಡ್ ನಿಂದ ದೂರವಿರಿ, ಹೆಚ್ಚು ಸಿಹಿತಿಂಡಿಗಳನ್ನು ತಿನ್ನಬೇಡಿ. ಪಪ್ಪಾಯಿ ಮತ್ತು ಅನಾನಸ್ ಹಣ್ಣುಗಳನ್ನು ಸೇವಿಸಬೇಡಿ. ಧೂಮಪಾನ, ಮದ್ಯಪಾನ ಮತ್ತು ಅತಿಯಾದ ಕೆಫೀನ್ ಬಳಕೆಯನ್ನು ತಪ್ಪಿಸಿ, ಏಕೆಂದರೆ ಇವು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತವೆ. ನೀವು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಥೈರಾಯ್ಡ್ ನಂತಹ ಕಾಯಿಲೆಗಳಿಂದ ಬಳಲುತ್ತಿದ್ದರೆ ಅವುಗಳನ್ನು ನಿಯಂತ್ರಣದಲ್ಲಿಡಿ. ವೈದ್ಯರು ಸೂಚಿಸಿದ ನಿಯಮಿತ ತಪಾಸಣೆ ಮತ್ತು ಚಿಕಿತ್ಸೆಯನ್ನು ಅನುಸರಿಸಿ.

ಇದನ್ನೂ ಓದಿ: 21-29 ವರ್ಷದ ಪ್ರತೀ ಮಹಿಳೆ ಈ ಪರೀಕ್ಷೆ ಮಾಡಿಸುವುದು ಅಗತ್ಯ

ಸುರಕ್ಷಿತವಾಗಿ ವ್ಯಾಯಾಮ ಮಾಡಿ

ಗರ್ಭಾವಸ್ಥೆಯಲ್ಲಿ ನಿಯಮಿತ, ಮಧ್ಯಮ ವ್ಯಾಯಾಮ ಮಾಡುವುದು ಪ್ರಯೋಜನಕಾರಿಯಾಗಿದೆ, ಆದರೆ ವ್ಯಾಯಾಮ ದೇಹಕ್ಕೆ ಒತ್ತಡ ನೀಡಬಾರದು. ಹಾಗಾಗಿ ಆಳವಾದ ಉಸಿರಾಟ, ದಿನನಿತ್ಯ ವಾಕಿಂಗ್ ತಪ್ಪದೆ ಮಾಡಿ. ಜೊತೆಗೆ ತಜ್ಞರ ಸಲಹೆಯ ಮೇರೆಗೆ ಮಾತ್ರ ದೈಹಿಕ ಚಟುವಟಿಕೆಗಳನ್ನು ಮಾಡಿ.

ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ

ಹೆಚ್ಚಿನ ಒತ್ತಡವು ಗರ್ಭಧಾರಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಯೋಗ, ಧ್ಯಾನ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಸುಲಭ ವಿಧಾನವಾಗಿದೆ. ಕುಟುಂಬ, ಸ್ನೇಹಿತರ ಜೊತೆ ಒಳ್ಳೆಯ ಮಾತುಕತೆ, ವೃತ್ತಿಪರ ಸಮಾಲೋಚನೆ ಕೂಡ ಪ್ರಯೋಜನಕಾರಿ. ಗರ್ಭಾವಸ್ಥೆಯಲ್ಲಿ ತೀವ್ರ ಹೊಟ್ಟೆ ನೋವು ಅಥವಾ ಇತರ ಯಾವುದೇ ಗಂಭೀರ ಸಮಸ್ಯೆಗಳು ಅನುಭವಕ್ಕೆ ಬಂದರೆ ವೈದ್ಯರನ್ನು ಸಂಪರ್ಕಿಸಿ. ಈ ವಿಷಯದಲ್ಲಿ ಅಸಡ್ಡೆ ತೋರಬೇಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ