International Yoga Day 2024: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಆಸನಗಳನ್ನು ತಪ್ಪದೆ ಮಾಡಿ
ಧೂಮಪಾನ ಹಾಗೂ ಮದ್ಯಪಾನ ನಿಯಂತ್ರಣದ ಜೊತೆಗೆ, ಕೆಲವೊಂದು ಯೋಗಾಸನಗಳನ್ನು ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೃದಯ ಹಾಗೂ ಯೋಗಕ್ಕೆ ಸಂಬಂಧ ಇದೆಯೇ? ಯೋಗ, ಹೃದಯದ ಆರೋಗ್ಯವನ್ನು ಹೇಗೆ ಕಾಪಾಡಬಹುದು ಎಂಬುದನ್ನು ತಿಳಿದುಕೊಳ್ಳಿ.
ಹೃದಯದ ಆರೋಗ್ಯಕ್ಕೆ ಪೂರಕ ಜೀವನಶೈಲಿ ಅತ್ಯಗತ್ಯ. ಅದರಲ್ಲಿ ವ್ಯಾಯಾಮ, ಒಳ್ಳೆಯ ಆಹಾರ ಪದ್ಧತಿ, ಒತ್ತಡಮುಕ್ತ ಜೀವನ, ಶರೀರಕ್ಕೆ ಅಗತ್ಯ ಕ್ಯಾಲೋರಿ ಪೂರೈಕೆ, ಬೊಜ್ಜು ನಿಯಂತ್ರಣ ಮಾಡಿ ಸರಿಯಾದ ದೇಹ ತೂಕ ಕಾಪಾಡುವುದು, ಧೂಮಪಾನ ಹಾಗೂ ಮದ್ಯಪಾನ ನಿಯಂತ್ರಣದ ಜೊತೆಗೆ, ಕೆಲವೊಂದು ಯೋಗಾಸನಗಳನ್ನು ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೃದಯ ಹಾಗೂ ಯೋಗಕ್ಕೆ ಸಂಬಂಧ ಇದೆಯೇ? ಯೋಗ ಹೃದಯದ ಆರೋಗ್ಯವನ್ನು ಹೇಗೆ ಕಾಪಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ.
ಸರ್ವಾಂಗಾಸನ
ಈ ಆಸನದ ಬಗ್ಗೆ ನೀವು ಕೇಳಿರಬಹುದು. ಇದು ಎಲ್ಲಾ ಆಸನಗಳ ತಾಯಿ ಎಂದರೆ ತಪ್ಪಾಗಲಾರದು. ಇದನ್ನು ಪ್ರತಿನಿತ್ಯ ಮಾಡುವುದರಿಂದ ರಕ್ತಪರಿಚಲನೆ ಚೆನ್ನಾಗಿ ಆಗುತ್ತದೆ. ಈ ಆಸನದಿಂದ ನಿಮ್ಮ ತೋಳುಗಳು, ಮಾಂಸಖಂಡಗಳು ಬಲಿಷ್ಠವಾಗುತ್ತದೆ. ಇದೆಲ್ಲದರೊಂದಿಗೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಪಶ್ಚಿಮೋತ್ಥಾನಾಸನ
ಈ ಆಸನ ಮೂತ್ರಪಿಂಡದ ವ್ಯವಸ್ಥೆ ಮತ್ತು ಮೇದೋಜ್ಜೀರಕ ಗ್ರಂಥಿಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಕೂಡ ಸಹಾಯ ಮಾಡುತ್ತದೆ. ಇದರಿಂದಾಗಿ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ. ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಚಕ್ರಾಸನ
ಪಾದಗಳು ಮತ್ತು ಕೈಗಳ ನಡುವೆ ಸುಮಾರು ಒಂದು ಅಡಿ ಅಂತರ ಇರಿಸಿ ದೇಹವನ್ನು ಚಕ್ರಾಕಾರವಾಗಿ ಬಾಗಿಸುವುದೇ ಚಕ್ರಾಸನ. ಇಡೀ ದೇಹವು ಅರ್ಧವೃತ್ತಾಕಾರದಲ್ಲಿ ಬಾಗಿರುತ್ತದೆ. ಚಕ್ರಾಸನವನ್ನು ಅಭ್ಯಾಸ ಮಾಡಿದರೆ ದೇಹಲ ಎಲ್ಲಾ ಭಾಗಗಳಲ್ಲೂ ರಕ್ತಸಂಚಾರ ಸುಲಲಿತವಾಗಿ ಉಂಟಾಗುವುದರೊಂದಿಗೆ ಹೃದಯ ಸಂಬಂಧಿತ ರೋಗಗಳು ದೂರವಾಗುತ್ತದೆ. ಈ ಆಸನ ಮಾಡುವುದರಿಂದ ಎದೆಯ ಭಾಗಕ್ಕೆ ಮೆದು ವ್ಯಾಯಾಮವಾಗುತ್ತದೆ.
ಇದನ್ನೂ ಓದಿ: ಯಾರೆಲ್ಲಾ ಕಾಲೇಜಿಗೆ ಹೋಗುವ ಮೊದಲು ತಿಂಡಿ ಮಾಡಲ್ಲಾ? ಒಮ್ಮೆ ಇಲ್ಲಿ ಗಮನಿಸಿ
ಮಕರಾಸನ
ಮಕರ ಎಂದರೆ ಮೊಸಳೆ ಎಂದರ್ಥ. ಮೊಸಳೆ ಮಲಗಿ ವಿಶ್ರಾಂತಿ ಪಡೆಯುವ ಸ್ಥಿತಿಯನ್ನು ಹೋಲುವ ಈ ಭಂಗಿಗೆ ಮಕರಾಸನ ಎಂದು ಹೆಸರು. ಹೀಗೆ ಕಣ್ಣುಗಳನ್ನು ಮುಚ್ಚಿಕೊಂಡು ಮಲಗಿ ಸುಮಾರು ಎರಡು ನಿಮಿಷಗಳ ಕಾಲ ಉಸಿರಾಡಬೇಕು. ಕೆಮ್ಮು, ರಕ್ತದೊತ್ತಡ ಸೇರಿದಂತೆ ಹಲವು ರೋಗಗಳು ದೂರವಾಗಲು ಇದು ಸಹಕಾರಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:23 am, Tue, 18 June 24