AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Singer Alka Yagnik: ಅಲ್ಕಾ ಯಾಗ್ನಿಕ್​ಗೆ ಕಿವಿ ಕೇಳದಿರಲು ಈ ಸೋಂಕು ಕಾರಣ, ಇದು ಬರದಂತೆ ಈ ರೀತಿ ಎಚ್ಚರಿಕೆ ವಹಿಸಿ

ಪ್ರಸಿದ್ಧ ಬಾಲಿವುಡ್ ಗಾಯಕಿ ಅಲ್ಕಾ ಯಾಗ್ನಿಕ್​ ಅವರಿಗೆ ಈಗ ಕಿವಿ ಕೇಳಿಸುತ್ತಿಲ್ಲ (Sensory Hearing loss). ಈ ವಿಚಾರವನ್ನು ಅವರೇ ಹಂಚಿಕೊಂಡಿದ್ದು, "ಶ್ರವಣ ನಷ್ಟದಿಂದ ಬಳಲುತ್ತಿದ್ದೇನೆ" ಎಂದು ಇನ್​ಸ್ಟಾಗ್ರಾಮ್​ನ ಪೋಸ್ಟ್​ ನಲ್ಲಿ ಬಹಿರಂಗಪಡಿಸಿದ್ದಾರೆ. ಹಾಗಾದರೆ ಈ ಸಮಸ್ಯೆಗೆ ಕಾರಣವೇನು? ರೋಗ ಲಕ್ಷಣಗಳೇನು? ತಡೆಯುವುದು ಹೇಗೆ? ಈ ಬಗ್ಗೆ ಡಾ.ಸುಧೀರ್ ಕುಮಾರ್ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

Singer Alka Yagnik: ಅಲ್ಕಾ ಯಾಗ್ನಿಕ್​ಗೆ ಕಿವಿ ಕೇಳದಿರಲು ಈ ಸೋಂಕು ಕಾರಣ, ಇದು ಬರದಂತೆ ಈ ರೀತಿ ಎಚ್ಚರಿಕೆ ವಹಿಸಿ
ಗಾಯಕಿ ಅಲ್ಕಾ ಯಾಗ್ನಿಕ್
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 19, 2024 | 10:02 AM

Share

ಪ್ರಸಿದ್ಧ ಬಾಲಿವುಡ್ ಗಾಯಕಿ ಗಾಯಕಿಯರಲ್ಲಿ ಒಬ್ಬರಾದ ಅಲ್ಕಾ ಯಾಗ್ನಿಕ್​ (Singer Alka Yagnik) ತಮ್ಮ ಮಧುರ ಗೀತೆಗಳಿಂದ ಜನರನ್ನು ರಂಜಿಸಿದ್ದಾರೆ. 80 ಮತ್ತು 90 ರ ದಶಕದಲ್ಲಿ ಜೊತೆಗೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಹಲವಾರು ಜನಪ್ರೀಯ ಗೀತೆಗಳನ್ನು ನೀಡಿದ ಕೊಡುಗೆ ಅವರಿಗೆ ಸಲ್ಲುತ್ತದೆ. ಆದರೆ​ ಅವರಿಗೆ ಈಗ ಕಿವಿ ಕೇಳಿಸುತ್ತಿಲ್ಲ (Sensory Hearing loss). ಈ ವಿಚಾರವನ್ನು ಅವರೇ ಹಂಚಿಕೊಂಡಿದ್ದು, “ಶ್ರವಣ ನಷ್ಟದಿಂದ ಬಳಲುತ್ತಿದ್ದೇನೆ” ಎಂದು ಇನ್​ಸ್ಟಾಗ್ರಾಮ್​ನ ಪೋಸ್ಟ್​ ನಲ್ಲಿ ಬಹಿರಂಗಪಡಿಸಿದ್ದಾರೆ. ಹಾಗಾದರೆ ಈ ಸಮಸ್ಯೆಗೆ ಕಾರಣವೇನು? ರೋಗ ಲಕ್ಷಣಗಳೇನು? ತಡೆಯುವುದು ಹೇಗೆ? ಈ ಬಗ್ಗೆ ಡಾ.ಸುಧೀರ್ ಕುಮಾರ್ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

1. ಶ್ರವಣದೋಷಕ್ಕೆ ಕಾರಣವೇನು?

ಸಾಮಾನ್ಯವಾಗಿ ಇದು ವೈರಲ್ ಸೋಂಕಿನಿಂದ ಉಂಟಾಗುತ್ತದೆ. ಶ್ರವಣ ನಷ್ಟಕ್ಕೆ ಹಲವಾರು ವೈರಸ್ ಗಳು ಕಾರಣವಾಗಿರಬಹುದು. ಶ್ರವಣ ನಷ್ಟವು, ವೈರಸ್ಗಳಿಂದ ಶ್ರವಣ (ಕೋಕ್ಲಿಯರ್) ನರಗಳ ನೇರ ಆಕ್ರಮಣ ಮಾಡಿದಾಗ ಮತ್ತು ಸೋಂಕಿನಿಂದ ಉಂಟಾಗುವ ಉರಿಯೂತದಿಂದ ಉಂಟಾಗುತ್ತದೆ ಎಂದು ಭಾವಿಸಲಾಗಿದೆ. ಇಲ್ಲಿ ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯು ಕೂಡ ಮುಖ್ಯ ಪಾತ್ರ ವಹಿಸುತ್ತದೆ.

2. ರೋಗಲಕ್ಷಣಗಳು ಯಾವುವು?

ಸಾಮಾನ್ಯ ಲಕ್ಷಣವೆಂದರೆ ಶ್ರವಣ ನಷ್ಟ, ಕೆಲವರಿಗೆ ಎರಡೂ ಕಿವಿಗಳು ಕೇಳಿಸದಿರಬಹುದು ಆದರೆ ಇದು ತುಂಬಾ ಅಪರೂಪವಾಗಿ ಕಂಡು ಬರುತ್ತದೆ. ಇತರ ರೋಗಲಕ್ಷಣಗಳಲ್ಲಿ ಕಿವಿಯಲ್ಲಿ ಒಂದು ರೀತಿಯ ಶಬ್ದ ಕೇಳಿಸುವುದು(ಟಿನ್ನಿಟಸ್), ತಲೆತಿರುಗುವಿಕೆ ಸೇರಿವೆ.

3. ಈ ಸ್ಥಿತಿಯನ್ನು ಹೇಗೆ ಪತ್ತೆಹಚ್ಚಲಾಗುತ್ತದೆ?

ಇದು ಕ್ಲಿನಿಕಲ್ ರೋಗನಿರ್ಣಯವಾಗಿದ್ದು ರೋಗಲಕ್ಷಣಗಳ ಆಧಾರದ ಮೇಲೆ ಹೇಳಲಾಗುತ್ತದೆ. ಇದಕ್ಕೆ ಇಎನ್ ಟಿ ಶಸ್ತ್ರಚಿಕಿತ್ಸಕರಿಂದ ಕ್ಲಿನಿಕಲ್ ಪರೀಕ್ಷೆಯ ಅಗತ್ಯವಿದೆ.

4. ನರವೈಜ್ಞಾನಿಕ ಮೌಲ್ಯಮಾಪನದ ಅಗತ್ಯವಿದೆಯೇ?

ಅಪರೂಪವಾಗಿ, ಏಕೆಂದರೆ ಹಠಾತ್ ಶ್ರವಣ ನಷ್ಟವು ಪೊಂಟೈನ್ ಪಾರ್ಶ್ವವಾಯುವಿನಿಂದ ಉಂಟಾಗಬಹುದು (ಮೆದುಳಿನ ಒಂದು ಭಾಗವಾದ ಪೊನ್ಸ್ ಗೆ ರಕ್ತದ ಹರಿವಿನ ಕೊರತೆ). ನರವೈಜ್ಞಾನಿಕ ಪರೀಕ್ಷೆ, ನಂತರ ಎಂಆರ್ ಐ ಈ ಸ್ಥಿತಿಯನ್ನು ತಳ್ಳಿಹಾಕಬಹುದು.

5. ವೈರಲ್ ಸೋಂಕಿನಿಂದ ಉಂಟಾಗುವ ಶ್ರವಣ ನಷ್ಟಕ್ಕೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ?

ಈ ಚಿಕಿತ್ಸೆಯು ಸ್ಟಿರಾಯ್ಡ್‌ಗಳನ್ನು ಒಳಗೊಂಡಿರುತ್ತದೆ. ಮೂರು ದಿನಗಳವರೆಗೆ ದಿನಕ್ಕೆ ಒಮ್ಮೆ, ಡ್ರಿಪ್ ಮೂಲಕ ಇದನ್ನು ನೀಡಲಾಗುತ್ತದೆ, ನಂತರ ಮಾತ್ರೆಗಳು ಮತ್ತು ಟಿಂಪಾನಿಕ್ ಮೆಂಬ್ರೇನ್ (ಕಿವಿ ಡ್ರಮ್) ನಲ್ಲಿ ಸ್ಟೀರಾಯ್ಡ್ ಚುಚ್ಚುಮದ್ದನ್ನು ನೀಡಲಾಗುತ್ತದೆ. ಇದನ್ನು ರೋಗಿಯ ಪ್ರತಿಕ್ರಿಯೆಗೆ ಅನುಗುಣವಾಗಿ ನೀಡಲಾಗುತ್ತದೆ.

ಇದನ್ನೂ ಓದಿ: ‘ಇದ್ದಕ್ಕಿದ್ದಂತೆ ಕಿವಿ ಕೇಳಿಸುತ್ತಿಲ್ಲ’; ಗಾಯಕಿ ಅಲ್ಕಾ ಯಾಗ್ನಿಕ್​ಗೆ ಗಂಭೀರ ಆರೋಗ್ಯ ಸಮಸ್ಯೆ

6. ಪರಿಣಾಮವೇನು?

ಅನೇಕ ರೋಗಿಗಳು ಮೊದಲ ಕೆಲವು ದಿನಗಳಲ್ಲಿ ತಾವಾಗಿಯೇ ಚೇತರಿಸಿಕೊಳ್ಳುತ್ತಾರೆ. ಆರಂಭಿಕ ಚಿಕಿತ್ಸೆಯಲ್ಲಿಯೇ ಸ್ಟಿರಾಯ್ಡ್‌ಗಳನ್ನು ತೆಗೆದುಕೊಳ್ಳುವ ರೋಗಿಗಳು ಸಹ ಚೇತರಿಸಿಕೊಳ್ಳುತ್ತಾರೆ. ಆದರೆ ಕೆಲವು ರೋಗಿಗಳು ಮಾತ್ರ ಶಾಶ್ವತ ಅಥವಾ ದೀರ್ಘಕಾಲದ ಶ್ರವಣ ನಷ್ಟಕ್ಕೆ ಒಳಗಾಗುತ್ತಾರೆ.

7. ಶಾಶ್ವತ ಶ್ರವಣದೋಷ ಉಂಟಾದರೆ ಏನು ಮಾಡಬಹುದು?

ಅಂತಹ ರೋಗಿಗಳಿಗೆ ಶ್ರವಣ ಸಾಧನವನ್ನು ನೀಡಬಹುದು.

8. ಈ ಸ್ಥಿತಿಯನ್ನು ತಡೆಗಟ್ಟಲು ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

ವೈರಲ್ ಸೋಂಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ. ವರ್ಷವೂ ಫ್ಲೂ ಲಸಿಕೆಯನ್ನು ತೆಗೆದುಕೊಳ್ಳಿ (ನಿಮ್ಮ ವೈದ್ಯರ ಮಾರ್ಗದರ್ಶನದಲ್ಲಿ), ದೊಡ್ಡ ಶಬ್ದವನ್ನು ಹೆಚ್ಚು ಹೆಚ್ಚು ಕೇಳಿಸಿಕೊಳ್ಳಬೇಡಿ ಅದನ್ನು ತಪ್ಪಿಸಿ, ದೀರ್ಘಕಾಲದವರೆಗೆ ಹೆಡ್ ಫೋನ್ /ಇಯರ್ ಫೋನ್ ಗಳನ್ನು ಬಳಕೆ ಮಾಡುವುದನ್ನು ತಪ್ಪಿಸಿ, ವಿಶೇಷವಾಗಿ ಜೋರಾಗಿ ಹಾಡು ಕೇಳುವುದನ್ನು ಬಿಟ್ಟುಬಿಡಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್
‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್
VIDEO: ಸುಈಈಈಈ... ಪ್ಯಾಟ್ ಕಮಿನ್ಸ್ ವಾಟ್ ಎ ಕ್ಯಾಚ್
VIDEO: ಸುಈಈಈಈ... ಪ್ಯಾಟ್ ಕಮಿನ್ಸ್ ವಾಟ್ ಎ ಕ್ಯಾಚ್