Research reveals: ಕೂದಲು ಸ್ಟ್ರೈಟ್ನಿಂಗ್ ಮಾಡಿಸುವುದು ಗರ್ಭಾಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ!
ನಿಮ್ಮ ಕೂದಲನ್ನು ರೇಷ್ಮೆ ನೂಲಿನಂತೆ ಮಾಡಿಸುವ ಈ ಹೇರ್ ಸ್ಟ್ರೈಟ್ನಿಂಗ್ ನಿಮ್ಮ ಜೀವಕ್ಕೆ ಕಂಟಕವಾಗಬಹುದು ಎಂದು ತಿಳಿದಿದೆಯೇ? ಕೂದಲು ಸ್ಟ್ರೈಟ್ನಿಂಗ್ನಲ್ಲಿ ಬಳಸುವ ಸಾಕಷ್ಟು ರಾಸಾಯನಿಕಗಳು ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸುತ್ತಾರೆ ಡಾ.ಅರ್ಪಣಾ ಜೈನ್.
ಸಾಕಷ್ಟು ಮಹಿಳೆಯರು ತಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸಲು ಮೇಕಪ್ ಜೊತೆಗೆ ಕೂದಲಿಗೆ ಕಲರಿಂಗ್, ಹೇರ್ ಸ್ಟ್ರೈಟ್ನಿಂಗ್, ಕರ್ಲಿಂಗ್ ಮಾಡಿಸಿಕೊಳ್ಳುತ್ತಾರೆ. ಆದರೆ ನಿಮ್ಮ ಕೂದಲನ್ನು ರೇಷ್ಮೆ ನೂಲಿನಂತೆ ಮಾಡಿಸುವ ಈ ಹೇರ್ ಸ್ಟ್ರೈಟ್ನಿಂಗ್ ನಿಮ್ಮ ಜೀವಕ್ಕೆ ಕಂಟಕವಾಗಬಹುದು ಎಂದು ತಿಳಿದಿದೆಯೇ? ಕೂದಲು ಸ್ಟ್ರೈಟ್ನಿಂಗ್ನಲ್ಲಿ ಬಳಸುವ ಸಾಕಷ್ಟು ರಾಸಾಯನಿಕಗಳು ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ವರ್ಷಕ್ಕೆ ನಾಲ್ಕಕ್ಕಿಂತ ಹೆಚ್ಚು ಬಾರಿ ಕೂದಲನ್ನು ಸ್ಟ್ರೈಟ್ನಿಂಗ್ ಮಾಡಿಕೊಳ್ಳುವ ಮಹಿಳೆಯರಿಗೆ ಇತರ ಮಹಿಳೆಯರಿಗಿಂತ ಗರ್ಭಾಶಯದ ಕ್ಯಾನ್ಸರ್ ಬರುವ ಅಪಾಯ ಹೆಚ್ಚು ಎಂದು ಎನ್ನುತ್ತಾರೆ ಡಾ.ಅರ್ಪಣಾ ಜೈನ್.
ಕೂದಲು ಸ್ಟ್ರೈಟ್ ಮಾಡಲು ಬಳಸುವ ಕ್ರೀಮ್ ನಲ್ಲಿರುವ ರಾಸಾಯನಿಕಗಳು:
- ಅಮೋನಿಯಂ ಥಿಯೋಗ್ಲೈಕೋಲೇಟ್
- ಬೆಂಜೊ ಫೀನಾಲ್-3
- ಸೈಕ್ಲೋ ಸಿಲೋಕ್ಸೇನ್ಸ್
- ಡೈಥೈಲಮೈನ್
- ಪ್ಯಾರಾಬೆನ್ಸ್ ಫಾರ್ಮಾಲ್ಡಿಹೈಡ್
- ಥಾಲೇಟ್ಸ್
- ಸೋಡಿಯಂ ಹೈಡ್ರಾಕ್ಸೈಡ್
- ಸೋಡಿಯಂ ಥಿಯೊಗ್ಲೈಕೊಲೈಡ್
- ಟ್ರೈಕ್ಲೋಸನ್
ಆರೋಗ್ಯ ತಜ್ಞರು ಹೇಳುವುದೇನು?
ಫೋರ್ಟಿಸ್ ಆಸ್ಪತ್ರೆ ಸ್ತ್ರೀರೋಗ ವಿಭಾಗದ ನಿರ್ದೇಶಕಿ ಡಾ.ಅರ್ಪಣಾ ಜೈನ್ ಹೇಳುವಂತೆ, “ಕೂದಲು ಸ್ಟ್ರೈಟ್ನಿಂಗ್ ಮಾಡಲು ಬಳಸುವ ವಸ್ತುಗಳಲ್ಲೂ ಈ 9 ಬಗೆಯ ರಾಸಾಯನಿಕಗಳಿವೆ. ಇದು ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಾಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಈ ರಾಸಾಯನಿಕಗಳನ್ನು ಪ್ರತಿ ತಿಂಗಳುಗಳು ಕೂದಲಿಗೆ ಅನ್ವಯಿಸಿದರೆ, ಇದು ಕ್ಯಾನ್ಸರ್, ಫೈಬ್ರಾಯ್ಡ್ಗಳು ಮತ್ತು ಎಂಡೊಮೆಟ್ರಿಯೊಸಿಸ್ ಸೇರಿದಂತೆ ಮಹಿಳೆಯರಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ”.
ಇದನ್ನೂ ಓದಿ: ಮಾತ್ರೆಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಏಕೆ ಪ್ಯಾಕ್ ಮಾಡಲಾಗುತ್ತದೆ ಎಂದು ತಿಳಿದಿದೆಯೇ?
ಪ್ಯಾರಾಬೆನ್ಸ್ ಫಾರ್ಮಾಲ್ಡಿಹೈಡ್ನ ಅತಿಯಾದ ಬಳಕೆಯು ಸ್ತ್ರೀ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ. ಪ್ರೌಢಾವಸ್ಥೆಯ ಹುಡುಗಿಯರು ಈ ಪರಿಣಾಮಗಳಿಗೆ ವಿಶೇಷವಾಗಿ ಸೂಕ್ಷ್ಮವಾಗಿರುತ್ತಾರೆ ಮತ್ತು ಕ್ಯಾನ್ಸರ್ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಇದು ಸಂಶೋಧನೆಯಲ್ಲೂ ಬಹಿರಂಗವಾಗಿದೆ.
ವರ್ಷದಲ್ಲಿ ಹಲವು ಬಾರಿ ಹೇರ್ ಸ್ಟ್ರೈಟ್ನಿಂಗ್ ಮಾಡಿಸುವುದು ಅಪಾಯ:
ವರ್ಷಕ್ಕೆ ನಾಲ್ಕಕ್ಕಿಂತ ಹೆಚ್ಚು ಬಾರಿ ಕೂದಲನ್ನು ಸ್ಟ್ರೈಟ್ ಮಾಡಿಕೊಳ್ಳುವ ಮಹಿಳೆಯರಿಗೆ ಇತರ ಮಹಿಳೆಯರಿಗಿಂತ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಅಂತಹ ಮಹಿಳೆಯರಲ್ಲಿ, ಸ್ತನ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯವು ಶೇಕಡಾ 30 ರಷ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ಡಾ.ಅರ್ಪಣಾ ಜೈನ್.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Fri, 5 January 24