ಮಧುಮೇಹಿಗಳು(Diabetics) ಸೇವಿಸಬಹುದಾದ ಕೆಲವೊಂದಿಷ್ಟು ಹಣ್ಣುಗಳಲ್ಲಿ ಹಲಸು ಕೂಡ ಒಂದು. ಇದು ವಿಟಮಿನ್ ಎ ಮತ್ತು ಸಿ, ರೈಬೋಫ್ಲಾವಿನ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ ಎಂದು ಮುಂಬೈನ ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆಯ ಆಹಾರ ತಜ್ಞರಾದ ಡಾ ಜಿನಾಲ್ ಪಟೇಲ್ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಧುಮೇಹವು ದೀರ್ಘಕಾಲದ ಆರೋಗ್ಯದ ಸಮಸ್ಯೆಯಾಗಿದ್ದು, ಭಾರತದಲ್ಲಿ 20 ಮತ್ತು 70 ವರ್ಷ ವಯಸ್ಸಿನ ಸುಮಾರು 8.7 ಪ್ರತಿಶತದಷ್ಟು ಮಧುಮೇಹಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ, ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್ ಹೇರಳವಾಗಿದ್ದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.
ಆದ್ದರಿಂದ ನೀವು ಕೂಡ ಅತ್ಯಂತ ಸುಲಭವಾಗಿ ಆರೋಗ್ಯಕರವಾದ ಹಲಸಿನ ಹಣ್ಣಿನ ಲಡ್ಡು ತಯಾರಿಸಿ.
ಬೇಕಾಗುವ ಪದಾರ್ಥಗಳು:
3 ಕಪ್ ಬಾದಾಮಿ ಅನ್ನ
3 ಕಪ್ ಹಲಸಿನ ಹಣ್ಣಿನ ಹಿಟ್ಟು
ಅರ್ಧ ಕಪ್ ಆಲಿವ್ ಎಣ್ಣೆ
2 ಚಮಚ ಶುಂಠಿ ಪುಡಿ
1 ಚಮಚ – ಕರಿಮೆಣಸು
1 ಚಮಚ – ಏಲಕ್ಕಿ ಪುಡಿ
2 ಕಪ್ ಶುದ್ಧ ಮೇಪಲ್ ಸಿರಪ್
1 ಚಮಚ – ತುಪ್ಪ
ಇದನ್ನು ಓದಿ: ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯದಿರಿ ಅದರಿಂದಲೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ
ಹಲಸಿನ ಲಡ್ಡು ಮಾಡುವ ವಿಧಾನ:
ಮೊದಲಿಗೆ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ಹಲಸಿನ ಹಿಟ್ಟನ್ನು ಹುರಿಯಿರಿ. ನಿಮಗೆ ಹಲಸಿನ ಹಿಟ್ಟು ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ. ಹಿಟ್ಟು ಕಂದು ಬಣ್ಣ ಬರುವ ವರೆಗೆ ಹುರಿಯಿರಿ. ಕಂದು ಬಣ್ಣ ಬಂದ ಮೇಲೆ ತಣ್ಣಗಾಗಲು ಪಕ್ಕಕ್ಕೆ ಇಡಿ.
ತಣ್ಣಗಾದ ನಂತರ, ಬಾದಾಮಿ ಅನ್ನ ಮತ್ತು ಸಿಹಿಕಾರಕ(ಸಕ್ಕರೆಯನ್ನು ಬಳಸದೇ ಮಾಡಿರುವ)ವನ್ನು ಹೊರತುಪಡಿಸಿ ಉಳಿದ ಪದಾರ್ಥಗಳನ್ನು ಮಿಶ್ರಣ ಮಾಡಿ. ಇಲ್ಲಿ ಬಾದಾಮಿ ಅನ್ನ ಅಂದರೆ ಹಸಿ ಬಾದಾಮಿಯನ್ನು ರುಬ್ಬಿ ಬೇಯಿಸಿರುವುದು.
ಈ ಮಿಶ್ರಣ ಸಂಪೂರ್ಣವಾಗಿ ತಣ್ಣಗಾದ ನಂತರ, ಸಿಹಿಕಾರಕವನ್ನು ಸೇರಿಸಿ ಮತ್ತು ಬಾದಾಮಿ ಅನ್ನ ಸೇರಿಸಿ ಸಣ್ಣ ಸಣ್ಣದಾಗಿ ಲಡ್ಡುಗಳನ್ನು ಮಾಡಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: