Deepavali 2022: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಧುಮೇಹಿಗಳು ಸಿಹಿ ತಿನಿಸುಗಳ ಬಗ್ಗೆ ಎಚ್ಚರವಹಿಸಿ

ಹಬ್ಬ ಆಚರಣೆಗಳು, ಸಂಭ್ರಮ ಸಡಗರಗಳ ಸಂದರ್ಭದಲ್ಲಿ ಪಾರ್ಟಿಗಳು ಸಹಜ. ಅಂತಹ ಸಂದರ್ಭದಲ್ಲಿ ಮಧುಮೇಹದಿಂದ ಬಳಲುತ್ತಿರುವವರು  ಕುಡಿತದಿಂದ ಸ್ವಲ್ಪಮಟ್ಟಿಗೆ ದೂರವಿರುವುದು ಉತ್ತಮ.

Deepavali 2022: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಧುಮೇಹಿಗಳು ಸಿಹಿ ತಿನಿಸುಗಳ ಬಗ್ಗೆ ಎಚ್ಚರವಹಿಸಿ
Sweets
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Oct 24, 2022 | 1:37 PM

ಒತ್ತಡದ ಜೀವನ, ಬದಲಾದ ಆಹಾರ ಪದ್ಧತಿಯಿಂದಾಗಿ ದೇಹದಲ್ಲಿನ ರೋಗ ನಿರೋಧಕ ಶಕ್ತಿಯು ಕಾಲ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ.ಇದು ಸಾಕಷ್ಟು ರೋಗಗಳು ನಿಮ್ಮ ದೇಹವನ್ನು ಸೇರಲು ದಾರಿ ಮಾಡಿಕೊಡುತ್ತದೆ. ಇಂದು ಭಾರತದಲ್ಲಿ ಮಧುಮೇಹ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಹಬ್ಬಗಳ ಸಂದರ್ಭದಲ್ಲಿ ಮಧುಮೇಹಿಗಳು ಆಹಾರ ಸೇವನೆಯಲ್ಲಿ ಪಾಲಿಸಬೇಕಾದ ಪ್ರಮುಖ ಅಂಶಗಳ ಕುರಿತು ಆರೋಗ್ಯ ತಜ್ಞರು ನೀಡಿರುವ ಸಲಹೆ ಇಲ್ಲಿವೆ.

ಹಬ್ಬಗಳ ಸಂದರ್ಭದಲ್ಲಿ ಸಿಹಿ ತಿನಸುಗಳ ಸೇವನೆಯಲ್ಲಿ ಮಿತಿ ಇರಲಿ, ಆರೋಗ್ಯವನ್ನು ಕಾಪಾಡಿಕೊಳ್ಳುವ ಅಂದರೆ ನಿಮ್ಮ ದೇಹದಲ್ಲಿ ಸಕ್ಕರೆಯ ಅಂಶವನ್ನು ಸಾಕಷ್ಟು ಮಿತಿಯಲ್ಲಿಡಲು, ನಿಮ್ಮ ಆಹಾರದ ಕ್ಯಾಲೊರಿಗಳನ್ನು ಕಡಿತಗೊಳಿಸಿ, ಆಹಾರ ಪದ್ಧತಿಯಲ್ಲಿ ಎಚ್ಚರವಿರಲಿ ಎಂದು ಮ್ಯಾಕ್ಸ್ ಹೆಲ್ತ್‌ಕೇರ್ ನ ಮಧುಮೇಹ ತಜ್ಞರಾದ ಡಾ ಅಂಬ್ರಿಶ್ ಮಿಥಾಲ್ ರವರು ಇಂಡಿಯನ್ ಎಕ್ಸ್ ಪ್ರೆಸ್ಸ್ ನೊಂದಿಗೆ ಹಂಚಿಕೊಂಡಿದ್ದಾರೆ.

ಹಬ್ಬಗಳ ಸಮಯದಲ್ಲಿ ಸಿಹಿ ತಿಂಡಿ ತಿನಸುಗಳೇ ಹಬ್ಬದ ವಿಶೇಷ, ಬಾಯಲ್ಲಿ ನಿರೂರುವುದು ಸರ್ವೇ ಸಮಾನ್ಯ. ಆದ್ದರಿಂದ ನಾನು ನನ್ನ ರೋಗಿಗಳಿಗೆ ನೀಡುವ ಸಲಹೆಯೆಂದರೆ ನೀವು ಯಾವುದೇ ರೀತಿಯ ಸಿಹಿತಿಂಡಿಗಳನ್ನು ತೆಗೆದುಕೊಂಡರೂ, ಅದು ಹೆಚ್ಚುವರಿ ಸಕ್ಕರೆ ಇರದ ಆಹಾರ ನೋಡಿ ಸೇವಿಸುವುದು ಉತ್ತಮ. ಇದ್ದರಿಂದ ಸಕ್ಕರೆಯ ಮಟ್ಟದಲ್ಲಿ ಮಿತಿ ಇರುತ್ತದೆ ಎಂದು ಅವರು ಸಲಹೆ ನೀಡುತ್ತಾರೆ.

ಈ ದೀಪಾವಳಿಗೆ ಆದಷ್ಟೂ ಮನೆಯಲ್ಲಿಯೇ ಸಿಹಿ ತಿನಸುಗಳನ್ನು ತಯಾರಿಸಿ. ಆಂದರೆ ಕಡಿಮೆ ಕ್ಯಾಲೋರಿ ಅಥವಾ ಸಕ್ಕರೆಮುಕ್ತ ಸಿಹಿತಿಂಡಿಗಳು. ಯಾಕೆಂದರೆ ಮಧುಮೇಹದಿಂದ ಬಳಲುತ್ತಿದ್ದವರಿಗೆ ಅಥವಾ ಯಾವುದೇ ರೋಗದಿಂದ ಬಳಲುತ್ತಿರುವವರಿಗೆ ಯಾವುದೇ ಕಲಬೆರಕೆಗಳಿಲ್ಲದ ಆಹಾರವನ್ನು ನೀಡುವುದು ಅತ್ಯಂತ ಅಗತ್ಯ. ಇದು ಅವರ ದೇಹದಲ್ಲಿನ ರೋಗವನ್ನು ಸೀಮಿತದಲ್ಲಿಡಲು ಸಹಾಯ ಮಾಡುತ್ತದೆ.

ಇಂದು ಮನೆಯಲ್ಲಿಯೇ ತಿಂಡಿ ತಿನಸುಗಳನ್ನು ತಯಾರಿಸುವ ಬದಲಾಗಿ, ಅತ್ಯಂತ ಸುಲಭವಾಗಿ ಅಂಗಡಿಗಳಲ್ಲಿ ಸಿಗುವ ಆಹಾರವನ್ನು ಖರೀದಿಸುವವರೇ ಹೆಚ್ಚು. ಇಂತಹ ತಿಂಡಿಗಳಲ್ಲಿ ಕಡಿಮೆ ಕ್ಯಾಲೋರಿ ಅಥವಾ ಸಕ್ಕರೆಮುಕ್ತ ಸಿಹಿತಿಂಡಿಗಳು ಎಂದು ಕೂಡ ನಮೂದಿಸಿದ್ದರೂ ಕೂಡ, ಅದರೆ ಕುರಿತು ನಿಮ್ಮಲ್ಲಿ ಖಚಿತತೆ ಇಲ್ಲ. ಎಷ್ಟು ಸಮಯಗಳ ಹಿಂದೆ ಪ್ಲಾಸ್ಟಿಕ್ ಗಳಲ್ಲಿ ಪ್ಯಾಕ್ ಮಾಡಲಾಗಿದ್ದು, ಇದು ದೇಹಕ್ಕೆ ವಿಷಕಾರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳುತ್ತಾರೆ.

ಹಬ್ಬ ಆಚರಣೆಗಳು, ಸಂಭ್ರಮ ಸಡಗರಗಳ ಸಂದರ್ಭದಲ್ಲಿ ಪಾರ್ಟಿಗಳು ಸಹಜ. ಅಂತಹ ಸಂದರ್ಭದಲ್ಲಿ ಮಧುಮೇಹದಿಂದ ಬಳಲುತ್ತಿರುವವರು  ಕುಡಿತದಿಂದ ಸ್ವಲ್ಪಮಟ್ಟಿಗೆ ದೂರವಿರುವುದು ಉತ್ತಮ. ಸಾಮಾನ್ಯವಾಗಿ, ಮಧುಮೇಹದಿಂದ ಬಳಲುತ್ತಿರುವವರು ಆಲ್ಕೋಹಾಲ್ ತ್ಯಜಿಸಲುಬೇಕು ಎಂದು ಸಲಹೆ ನೀಡುತ್ತಾರೆ.

ಆಲ್ಕೋಹಾಲ್ ಯಾಕೆ ತ್ಯಜಿಸಲುಬೇಕು? ಎಂಬ ಪ್ರಶ್ನೆಗೆ  ಡಾ ಮಿಥಾಲ್ ನೀಡಿರುವ ಸಲಹೆಗಳು ಈ ಕೆಳಗಿನಂತಿವೆ:

ಆಲ್ಕೋಹಾಲ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ. ಇದಲ್ಲದೇ ಕುಡಿತದ ಮತ್ತಿನಲ್ಲಿ ನಡವಳಿಕೆಯಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ ಮತ್ತು ಸ್ಪಷ್ಟವಾಗಿ ಯೋಚಿಸಲು ಕಷ್ಟವಾಗುತ್ತದೆ. ಇದ್ದರಿಂದಾಗಿ ಆಹಾರ ಸೇವನೆಯಲ್ಲಿ ಬೇಜಾವಬ್ದಾರಿತನಕ್ಕೆ ಕಾರಣವಾಗಿತ್ತದೆ.

ಆದಾಗ್ಯೂ, ಆಲ್ಕೋಹಾಲ್ ಕಡಿಮೆ ರಕ್ತದ ಸಕ್ಕರೆ ಮತ್ತು ದೇಹದ ಅಂಗಗಳಿಗೆ ಹಾನಿಯಾಗುವಂತಹ ದೀರ್ಘಾವಧಿಯ ಅಪಾಯವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಅದರ ಜೊತೆಗೆ ಮಧುಮೇಹ ರೋಗದಿಂದ ಬಳಲುತ್ತಿರುವವರು ಪ್ರತಿದಿನ ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸುವುದು ಅಗತ್ಯ. ಯಾವುದೇ ಕಾರಣಕ್ಕೂ ಆಹಾರ ಬಿಡಲು, ಅಂದರೆ ಉಪವಾಸ ಮಾಡಲು ಹೋಗಬೇಡಿ.

ಯಾವುದೇ ವ್ಯಕ್ತಿಯು ಆಲ್ಕೊಹಾಲ್ ಸೇವಿಸಿದ ನಂತರ, ಅದರ ಅಪಾಯವು 24 ಗಂಟೆಗಳವರೆಗೆ ಇರುತ್ತದೆ. ಇದ್ದರಿಂದ ನೀವು ರಾತ್ರಿಯ ಊಟದೊಂದಿಗೆ ಆಲ್ಕೋಹಾಲ್ ಸೇವಿಸಿದ್ದರೆ, ಮಲಗುವ ಮೊದಲು ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸುವುದು ಅಗತ್ಯ.

ಇದ್ದನ್ನು ಓದಿ:

ಆದ್ದರಿಂದ ಈ ಹಬ್ಬದ ಸಮಯದಲ್ಲಿ ಉಡುಗೊರೆಗಳನ್ನು ನೀಡುವಾಗ ಅದರಲ್ಲಿ ಸಿಹಿತಿಂಡಿಗಳನ್ನು ನೀಡುವ ಬದಲಾಗಿ ಹಣ್ಣುಗಳನ್ನು ನೀಡುವ ಹೊಸ ಬದಲಾವಣೆ ಮಾಡಿ. ಇವುಗಳು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಎಂಬುದು ತಜ್ಞರಾದ ಡಾ ಅಂಬ್ರಿಶ್ ಮಿಥಾಲ್ ರವರು ಸಲಹೆ ನೀಡುತ್ತಾರೆ.

(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Mon, 24 October 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್