ಪಟಾಕಿಯಿಂದಾಗುವ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ನಿಮಗೆಷ್ಟು ಗೊತ್ತು?
ಪಟಾಕಿ ಹಾನಿಕಾರಕ ಎಂದು ಎಲ್ಲರಿಗೂ ಗೊತ್ತಿದೆ ಆದರೆ ಪಟಾಕಿ ಉಂಟು ಮಾಡುವ ದೀರ್ಘಕಾಲಿಕ ಆರೋಗ್ಯ ಪರಿಣಾಮಗಳ ಬಗ್ಗೆ ಸಾಕಷ್ಟು ಮಂದಿಗೆ ತಿಳಿದಿಲ್ಲ.
ಪಟಾಕಿ ಹಾನಿಕಾರಕ ಎಂದು ಎಲ್ಲರಿಗೂ ಗೊತ್ತಿದೆ ಆದರೆ ಪಟಾಕಿ ಉಂಟು ಮಾಡುವ ದೀರ್ಘಕಾಲಿಕ ಆರೋಗ್ಯ ಪರಿಣಾಮಗಳ ಬಗ್ಗೆ ಸಾಕಷ್ಟು ಮಂದಿಗೆ ತಿಳಿದಿಲ್ಲ. ಪಟಾಕಿ ಹೊಡೆಯುತ್ತಿದ್ದಂತೆ ತೊಂದರೆಯುಂಟಾಗಿ ತುರ್ತು ಆಸ್ಪತ್ರೆಗೆ ದಾಖಲು ಮಾಡಿರುವುದನ್ನು ನೀವು ನೋಡಿರುತ್ತೀರಿ, ಆದರೆ ಹೆಚ್ಚಿನವರಿಗೆ ಪಟಾಕಿ ಪ್ರಕೃತಿ ಮೇಲಿನ ಹಾಗೂ ದೀರ್ಘಕಾಲಿಕ ಆರೋಗ್ಯದ ಮೇಲಿನ ಪರಿಣಾಮಗಳ ಬಗ್ಗೆ ಅಷ್ಟು ತಿಳಿವಳಿಕೆ ಇರುವುದಿಲ್ಲ ಈ ಕುರಿತು ಶ್ವಾಸಕೋಶ ಶಾಸ್ತ್ರಜ್ಞ ಡಾ. ಅನಿರುದ್ಧ ಉಡುಪ ಅವರು ಟಿವಿ9 ಡಿಜಿಟಲ್ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಪಟಾಕಿ ಒಂದು ಸ್ಫೋಟಕ ಅದು ಬೆಳಕು ಮತ್ತೆ ಶಬ್ದವನ್ನು ಉತ್ಪಾದನೆ ಮಾಡುತ್ತದೆ, ಆದರೆ ಹೀಗೆ ಮಾಡುವುದಕ್ಕೆ ಬೇರೆ ಬೇರೆ ಬೆಳಕು ಬರುವುದಕ್ಕೆ ಕಾರಣ ಏನು? ಇದು ರಾಸಾಯನ ಶಾಸ್ತ್ರ ಹಾಗೂ ಭೌತಶಾಸ್ತ್ರದ ಕಂಬೈನ್ಡ್ ಕಾಂನ್ಸೆಪ್ಟ್.
ಪಟಾಕಿಯಲ್ಲಿ ಹಲವು ರೀತಿಯಾದ ಹೆವಿ ಹಾಗೂ ಸಾಲಿಡ್ ಮೆಟಲ್ಸ್ಗಳನ್ನು ಬಳಕೆ ಮಾಡಿದಾಗ, ಅದು ಒಂದು ಉಷ್ಣಾಂಶಕ್ಕೆ ಹೋದಾಗ ಬಣ್ಣವನ್ನು ತೋರಿಸುತ್ತದೆ. ನಾವು ಪಟಾಕಿ ಹೊಡೆದಾಗ ಅದು ಹೊತ್ತಿಕೊಂಡು ಉರಿದಾಗ ಆ ಲವಣಾಂಶಗಳು ಅಂದರೆ ಹೆವಿ ಮೆಟಲ್ಸ್ಗಳು ಆ ಬಣ್ಣಗಳನ್ನು ಕೊಡುತ್ತವೆ. ಬೇರೆ ಬೇರೆ ಹೆವಿ ಮೆಟಲ್ಸ್ಗಳು ಬೇರೆ ಬೇರೆ ರೀತಿಯ ಬಣ್ಣವನ್ನು ಕೊಡುತ್ತದೆ.
ಸಾಮಾನ್ಯವಾಗಿ ಈ ಹೆವಿ ಮೆಟಲ್ಗಳು ಹೊತ್ತಿ ಉರಿದಾಗ, ಈ ಹೆವಿ ಮೆಟಲ್ಸ್ಗಳು ಸಂಪೂರ್ಣವಾಗಿ ಉರಿದಿಡುವುದಿಲ್ಲ ಅದು ಪ್ರಕೃತಿಗೆ ಬಿಡುಗಡೆಯಾಗುತ್ತದೆ.
ಅದರ ಜತೆಗೆ ಇಂಗಾಲದ ಡೈ ಆಕ್ಸೈಡ್, ಇಂಗಾಲದ ಮೊನಾಕ್ಸೈಡ್, ನೈಟ್ರೋಜನ್ ಗ್ಯಾಸ್, ಸಲ್ಫರ್ ಡೈ ಆಕ್ಸೈಡ್ ಈ ಗ್ಯಾಸ್ಗಳು ಪ್ರಕೃತಿಗೆ ಬಿಡುಗಡೆಯಾಗುತ್ತವೆ.
ಈ ಗ್ಯಾಸ್ಗಳಿಂದ ಗ್ರೀನ್ ಹೌಸ್ ಎಫೆಕ್ಟ್ ಆಗುತ್ತದೆ ಅಂದರೆ ಸೂರ್ಯನಿಂದ ಬಂದಂತಹ ಇನ್ಫ್ರಾರೇಟ್ ರೇಡಿಯೇಷನ್ಗಳನ್ನು ಶೇಖರಿಸಿಟ್ಟುಕೊಳ್ಳುತ್ತದೆ. ಹಾಗಾಗಿ ಉಷ್ಣಾಂಶ ಹೆಚ್ಚಾಗುತ್ತದೆ, ಜತೆಗೆ ಓಜೋನ್ ಪದರದಲ್ಲಿ ತೊಂದರೆಗಳನ್ನು ಕಾಣಬಹುದು.
ಜತೆಗೆ ಈ ಗ್ಯಾಸ್ಗಳು ನಮ್ಮ ಕಣ್ಣು, ಮೂಗು, ಗಂಟಲು, ಶ್ವಾಸಕೋಶಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ ಹಾಗೂ ಬಾವು ಬರಿಸುತ್ತದೆ.
ಜತೆಗೆ ಪಾರ್ಟಿಕಲ್ಸ್ ಸುಟ್ಟಾಗ ಬರುವ ಧೂಳು ಮತ್ತು ಹೊಗೆಯು ಕೂಡ ನಮ್ಮ ಆರೋಗ್ಯಕ್ಕೆ ತೊಂದರೆ ಮಾಡುತ್ತದೆ. ಉಳಿಯುವ ಕಣಗಳು ತುಂಬಾ ಸಣ್ಣದಾಗಿತ್ತವೆ, 10 ಪಾರ್ಟಿಕಲ್ ಮಾಸ್ 10 ಮಿ.ಮೀಟರ್ಗಿಂತ ಕಡಿಮೆ ಅಥವಾ 2.5 ಮೈಕ್ರೋಮೀಟರ್ಗಿಂತಲೂ ಸಣ್ಣ ಇರುವ ಪರ್ಟಿಕ್ಯುಲೇಟ್ ಮ್ಯಾಟರ್ಗಳು ಇರುತ್ತವೆ.
ಇದು ನೇರವಾಗಿ ಶ್ವಾಸಕೋಶದ ಗಾಳಿ ಚೀಲದವರೆಗೂ ಹೋಗುತ್ತದೆ. ಇದು ಸಾಮಾನ್ಯ ಜನರಿಗೂ ಕೂಡ ಉಸಿರಾಟದಲ್ಲಿ ವ್ಯಾತ್ಯಾಸವನ್ನುಂಟು ಮಾಡಬಹುದು.
ಇಲ್ಲದಿದ್ದರೆ ಸ್ವಲ್ಪ ಪ್ರಮಾಣದಲ್ಲಿದ್ದಾಗಲೂ ಕೂಡ ಯಾರಿಗೆ ಶ್ವಾಸಕೋಶದ ತೊಂದರೆ ಇದೆ, ದೀರ್ಘಕಾಲಿಕ ತೊಂದರೆ ಇದೆ, ಅಂಥವರಿಗೆ ತೊಂದರೆಯನ್ನುಂಟು ಮಾಡಬಹುದು. ಜತೆಗೆ ಇದನ್ನು ಬಳಕೆ ಮಾಡುವುದಕ್ಕೋಸ್ಕರ ರಾಸಾಯನಿಕಗಳನ್ನು ಬಳಕೆ ಮಾಡುತ್ತೇವೆ, ಅದರಲ್ಲಿ ಒಂದು ಕೆಮಿಕಲ್ಸ್ ಎಂದರೆ ಪರ್ಕ್ಲೋರೈಡ್ ಅಂದರೆ ಆಕ್ಸಿಡೇಷನ್ ರಿಯಾಕ್ಷನ್ ರಿಯಾಕ್ಷನ್ಗೆ ಸಹಾಯ ಮಾಡುತ್ತದೆ ಅಂದರೆ ಬೆಂಕಿ ಹೊತ್ತಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.
ಇದು ಒಟ್ಟಾರೆಯಾಗಿ ವಾಟರ್ ಸಾಲಿಬಲ್ ಅಂದರೆ ನೀರಿನಲ್ಲಿ ಕರಗುತ್ತದೆ. ಹಾಗಾಗಿ ಇದು ಹತ್ತಿರದ ನೀರಿನ ಮೂಲಗಳಲ್ಲೆಲ್ಲಾ ತುಂಬಿಕೊಳ್ಳುತ್ತದೆ. ಇದರ ನೀರನ್ನು ಕುಡಿದವರಲ್ಲೆಲ್ಲಾ ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣಬಹುದು.
ಹೆಚ್ಚಿನದಾಗಿ ಈ ನೀರಿನ್ನು ಕುಡಿಯುವುದು ಪ್ರಾಣಿಗಳು, ಕೆಲವು ಸಮಯದಲ್ಲಿ ಮನುಷ್ಯರು. ಅವರಲ್ಲಿ ಆರೋಗ್ಯದಲ್ಲಿ ಏರು ಪೇರು ಕಾಣಿಸಿಕೊಳ್ಳಬಹುದು.
ಶಬ್ದ ಮಾಲಿನ್ಯ ಶಬ್ದ ತುಂಬಾ ಜನರಲ್ಲಿ ಆತಂಕವನ್ನುಂಟು ಮಾಡುತ್ತದೆ ಅದರಿಂದ ಪ್ಯಾನಿಕ್ ಅಟ್ಯಾಕ್ಸ್, ವಯಸ್ಸಾದವರಿಗೆ ಹೃದಯ ಸಂಬಂಧಿತ ತೊಂದರೆಗಳು, ಕೆಲವು ಬಾರಿ ಹೃದಯಾಘಾತವಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ.
ಜತೆಗೆ ಪಟಾಕಿ ಹೊಡೆದಾಗ ರೇಡಿಯೋ ಆಕ್ಟೀವ್ ಸಬ್ಸ್ಟೆನ್ಸನ್ ಬಿಡುಗಡೆಯಾಗಿರುತ್ತದೆ. ಅದು ದೀರ್ಘಕಾಲದ ಕ್ಯಾನ್ಸರ್ ಅಪಾಯವನ್ನು ಉಂಟು ಮಾಡಬಹುದು, ಮಕ್ಕಳಲ್ಲಿ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಬೆಂಕಿಯ ಅಪಾಯಗಳು ಹೆಚ್ಚಿನ ಪ್ರಮಾಣದಲ್ಲಿ ಆಗುವ ಸಾಧ್ಯತೆ ಇರುತ್ತದೆ, ಏಕಾಏಕಿ ಬೆಂಕಿ ಹೊತ್ತಿಕೊಳ್ಳಬಹುದು ಇದು ಸುಟ್ಟಗಾಯಗಳು, ಕಣ್ಣು ಹಾಗೂ ಇತರೆ ನಿಮ್ಮ ಅಂಗಗಳಿಗೆ ಹಾನಿಯುಂಟು ಮಾಡಬಹುದು.
ಏರ್ ಕ್ವಾಲಿಟಿ ಇಂಡೆಕ್ಸ್ ಎಂದರೇನು? ಈ ಗಾಳಿಯಲ್ಲಿ ಆಗಿರುವ ವ್ಯತ್ಯಾಸವನ್ನು ಕಂಡುಹಿಡಿಯಲು ಏರ್ ಕ್ವಾಲಿಟಿ ಇಂಡೆಕ್ಸ್ ಬಳಕೆ ಮಾಡುತ್ತೇವೆ, ಸಾಮಾನ್ಯವಾಗಿ ಏರ್ ಕ್ವಾಲಿಟಿ ಇಂಡೆಕ್ಸ್ ಶೂನ್ಯದಿಂದ 500ರವರೆಗೆ ಇರುತ್ತದೆ. ಹಬ್ಬಗಳ ಸಮಯದಲ್ಲಿ ಮಾಲಿನ್ಯ ಹೆಚ್ಚಾದಂತೆ ಏರ್ ಕ್ವಾಲಿಟಿ ಇಂಡೆಕ್ಸ್ 300ರ ಗಡಿ ದಾಟಬಹುದು, ಇದು ಸಾಮಾನ್ಯ ಜನರಿಗೂ ಆರೋಗ್ಯದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುತ್ತದೆ.
ಬಣ್ಣ ಬರಲು ಹಾಕುವ ಲವಣಾಂಶಗಳು, ಜಿಂಕ್, ಮೆಗ್ನೀಸಿಯಂ ಫ್ಯೂಮ್ ಫೀವರ್ ಉಂಟು ಮಾಡುತ್ತದೆ ಅಂದರೆ ಹೊಗೆಯಿಂದ ಜ್ವರ ಬರುವುದುಂಟು, ಕ್ಯಾಡ್ಮಿಯಂ ದೇಹದಲ್ಲಿ ಅನೀಮಿಯಾ ಅಂದರೆ ರಕ್ತಹೀನತೆಯನ್ನು ಸೃಷ್ಟಿಸುತ್ತದೆ.
ಮಾಹಿತಿ: ಶ್ವಾಸಕೋಶ ಶಾಸ್ತ್ರಜ್ಞ ಡಾ. ಅನಿರುದ್ಧ ಉಡುಪ
Published On - 11:43 am, Mon, 24 October 22