ದೀರ್ಘಕಾಲಿಕ ಕೊವಿಡ್​ ಬಳಿಕ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರಾ?

| Updated By: shruti hegde

Updated on: Jun 24, 2021 | 2:04 PM

Post Covid Hair Fall: ಸೋಂಕಿಗೆ ಒಳಗಾದವರಲ್ಲಿ ಸರಿಸುಮಾರು 70 ರಿಂದ 80 ರಷ್ಟು ಜನರಿಗೆ ನಕಾರಾತ್ಮಕ ವರದಿಯ ಬಳಿಕವೂ ಕೂದಲುದುರುವ ಸಮಸ್ಯೆ ಕಾಡುತ್ತಿದೆ. ಇದರಿಂದ ಹೊರ ಬರಲು ಸುಮಾರು 2-4 ತಿಂಗಳುಗಳ ಕಾಲ ಸಮಯ ಬೇಕು

ದೀರ್ಘಕಾಲಿಕ ಕೊವಿಡ್​ ಬಳಿಕ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರಾ?
ಸಂಗ್ರಹ ಚಿತ್ರ
Follow us on

ಮಾನಸಿಕ ಒತ್ತಡ ಉಂಟಾದಾಗ ಕೂದಲು ಉದುರುವ ಸಮಸ್ಯೆ ಕಾಡುವುದು ಮಾಮೂಲಿ. ಅನಗತ್ಯ ಚಿಂತೆಯಿಂದ ಮಾನಸಿಕ ಸ್ಥಿತಿ ಹದಗೆಡುತ್ತದೆ. ವಿಪರೀತ ಟೆನ್ಷನ್​ನಿಂದ ದೇಹದ ಸ್ಥಿತಿ ದುರ್ಬಗೊಳ್ಳುತ್ತದೆ. ಅದರಲ್ಲಿಯೂ ಕೊವಿಡ್​-19 ಸಾಂಕ್ರಾಮಿಕ ರೋಗ ಜನರಿಗೆ ಹೆಚ್ಚು ಮಾನಸಿಕ ಒತ್ತಡವನ್ನು ತಂದು ಬಿಟ್ಟಿತು. ಇದರಿಂದ ಜನರು ಹೆಚ್ಚು ಗೊಂದಲಕ್ಕೀಡಾದರು ಹಾಗೂ ದೀರ್ಘಕಾಲಿಕ ಕೊವಿಡ್​ ಬಳಿಕವೂ ಸಹ ಕೂದಲುದುರುವ ಸಮಸ್ಯೆ ಕಾಡತೊಡಗಿತು. ಈ ಸಮಸ್ಯೆಯಿಂದ ಹೊರ ಬರಲು ಕೆಲವೊಂದಿಷ್ಟು ಸಲಹೆಗಳು ಇಲ್ಲಿವೆ. 

ಸೋಂಕಿಗೆ ಒಳಗಾದವರಲ್ಲಿ ಸರಿಸುಮಾರು 70 ರಿಂದ 80 ರಷ್ಟು ಜನರಿಗೆ ನಕಾರಾತ್ಮಕ ವರದಿಯ ಬಳಿಕವೂ ಕೂದಲುದುರುವ ಸಮಸ್ಯೆ ಕಾಡುತ್ತಿದೆ. ಇದರಿಂದ ಹೊರ ಬರಲು ಸುಮಾರು 2-4 ತಿಂಗಳುಗಳ ಕಾಲ ಸಮಯ ಬೇಕು.

ಕೊವಿಡ್​ ಸಾಕಷ್ಟು ತೀವ್ರವಾದ ಒತ್ತಡವನ್ನು ಉಂಟುಮಾಡುತ್ತವೆ. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ನಮ್ಮ ದೇಹವು ಅಥವಾ ಮನಸ್ಥಿತಿ ಒತ್ತಡಕ್ಕೆ ಒಳಗಾದಾಗ ಸುಮಾರು 2ರಿಂದ 3 ತಿಂಗಳ ನಂತರ ಕೂದಲುದುರುವ ಸಮಸ್ಯೆ ಕಾಡತೊಡಗುತ್ತದೆ. ಜತೆಗೆ ಕೊವಿಡ್​ನಿಂದ ಚಿಕಿತ್ಸೆಗೆ ಒಳಗಾದವರು ಅಥವಾ ಹೆಚ್ಚು ಚಿಂತೆಯಲ್ಲಿ ಮುಳುಗಿದವರಿಗೆ ಈ ಸಮಸ್ಯೆ ಕಾಡತೊಡಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಸಾಮಾನ್ಯವಾಗಿ ಕೊವಿಡ್​ ಸಮಯದಲ್ಲಿ ಉದುರಿ ಹೋದ ಕೂದಲುಗಳು ಸುಮಾರು ನಾಲ್ಕರಿಂದ ಆರು ತಿಂಗಳ ಒಳಗೆ ಮತ್ತೆ ಹುಟ್ಟಿಕೊಳ್ಳುತ್ತವೆ. ಅದರ ನಂತರವೂ ಸಹ ಅತಿಯಾಗಿ ಕೂದಲುದುರುವ ಸಮಸ್ಯೆ ಕಾಡುತ್ತಿದ್ದರೆ ಹತ್ತಿರದಲ್ಲಿನ ಚರ್ಮ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಕೊವಿಡ್​ ಬಳಿಕ ಕೂದಲುದುರುವ ಸಮಸ್ಯೆ ತಡೆಗಟ್ಟುವ ಕೆಲವು ಸಲಹೆಗಳು
* ನಿಮ್ಮ ಆಹಾರ ವ್ಯವಸ್ಥೆ ಬದಲಾಗಬೇಕಿದೆ. ಹೆಚ್ಚು ಪ್ರೊಟೀನ್​ಯುಕ್ತ ಆಹಾರವನ್ನು ಸೇವಿಸುವುದು ಉತ್ತಮ.

* ನೀವು ಮಾಂಸಹಾರಿ ಸೇವನೆ ಮಾಡುವವರಾಗಿದ್ದರೆ ಕೋಳಿ, ಮೊಟ್ಟೆ ಮತ್ತು ಮೀನುಗಳಂತಹ ಪೌಷ್ಟಿಕ ಆಹಾರ ನಿಮ್ಮದಾಗಿರಲಿ

*ಸಸ್ಯಹಾರಿಗಳಾದ ನೀವು ಹಸಿರು ಸೊಪ್ಪು, ತರಕಾರಿ, ಹಣ್ಣು-ಹಂಪಲನ್ನು ಹೆಚ್ಚು ಸೇವಿಸಿ

*ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸ ರೂಢಿಯಲ್ಲಿರಲಿ. ವ್ಯಾಯಾಮ ಮಾಡುವುದರಿಂದ ರಕ್ತ ಪರಿಚಲನೆಗೆ ಸಹಾಯವಾಗುತ್ತದೆ.

*ಅನಗತ್ಯ ಚಿಂತೆಗಳನ್ನು ಬಿಟ್ಟು ಹೆಚ್ಚು ಸಮಯ ಮನೆಯವರೊಂದಿಗೆ  ಕಾಲ ಕಳೆಯುವ ಅಭ್ಯಾಸ ಮಾಡಿಕೊಳ್ಳಿ

*ಕೊವಿಡ್​ ಬಳಿಕ ನಿಮ್ಮ ದಿನಚರಿ ನಿಧಾನವಾಗಿರಲಿ. ಒಂದೇ ಬಾರಿ ದೇಹಕ್ಕೆ ಆಯಾಸವನ್ನುಂಟು ಮಾಡುವ ಚಟುವಟಿಕೆಯಿಂದ ಆದಷ್ಟು ದೂರವಿರಿ

ಇದನ್ನೂ ಓದಿ:

Beauty Tips: ಕೂದಲು-ಮುಖದ ಸೌಂದರ್ಯ ಹೆಚ್ಚಿಸುವ ಬೀಟ್​ರೂಟ್​; ಬಳಸುವ ವಿಧಾನ ಇಲ್ಲಿದೆ

ಈರುಳ್ಳಿ ಸಿಪ್ಪೆ ಬಳಸಿ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು ಗೊತ್ತಾ?