ಸಾಮಾನ್ಯವಾಗಿ ಅಡುಗೆಯಲ್ಲಿ ಮಸಾಲೆ ಪದಾರ್ಥವಾಗಿ ಅರಿಶಿಣವನ್ನು ಬಳಸುತ್ತೇವೆ. ಮುಖದ ಕಾಂತಿಯನ್ನೂ ಸಹ ಹೆಚ್ಚಿಸಿಕೊಳ್ಳಲು ನೈಸರ್ಗಿಕ ಅರಿಶಿಣವನ್ನು ತೇಯ್ದು ಮುಖಕ್ಕೆ ಹಚ್ಚಿಕೊಳ್ಳುತ್ತೇವೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣ ಮತ್ತು ಉರಿಯೂತ ಹೋಗಲಾಡಿಸುವ ಗುಣಲಕ್ಷಣಗಳನ್ನು ಹೊಂದಿದೆ. ಕೊರೊನಾ ಸಮಯದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅರಿಶಿಣವನ್ನು ಬಳಸುತ್ತಿದ್ದಾರೆ. ಅರಿಶಿಣವು ಅರೋಗ್ಯಕ್ಕೆ ಎಷ್ಟು ಪ್ರಯೋಜನಗಳನ್ನು ನೀಡುತ್ತದೆಯೋ, ಅತಿಯಾದ ಬಳಕೆ ಅಷ್ಟೇ ಹಾನಿಯನ್ನುಂಟು ಮಾಡುತ್ತದೆ.
ಅರಿಶಿಣವನ್ನು ಹೆಚ್ಚು ಸೇವಿಸುವುದರಿಂದ ದೇಹದಲ್ಲಿನ ಕಬ್ಬಿಣ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹದಲ್ಲಿ ಕಬ್ಬಿಣದ ಕೊರತೆ ಕಾಣಲು ಆರಂಭಗೊಳ್ಳುತ್ತದೆ. ಕಬ್ಬಿಣವು ಖನಿಜವಾಗಿದ್ದು ಅದು ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ತಯಾರಿಸಲು ಸಹಾಯಕವಾಗಿದೆ.
ಅರಿಶಿಣದಿಂದ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ಅಡುಗೆ ಪದಾರ್ಥಗಳಲ್ಲಿ ರುಚಿಯನ್ನು ಹೆಚ್ಚಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅರಿಶಿಣವನ್ನು ಬಳಸಬಹುದು. ಆದರೆ ಅತಿಯಾಗಿ ಅರಿಶಿಣ ಬಳಸುವುದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಅರಿಶಿಣವನ್ನು ಅತಿಯಾಗಿ ಸೇವಿಸುವುದರಿಂದ ಯಕೃತ್ತು ಗಾತ್ರ, ಹೊಟ್ಟೆಯಲ್ಲಿ ಹುಣ್ಣು, ಉರಿಯೂತ ಹೆಚ್ಚಾಗುವಂತಹ ಸಮಸ್ಯೆ ಕಾಡತೊಡಗುತ್ತದೆ. ಇದಲ್ಲದೇ ಪಿತ್ತಜನಕಾಂಗ ಮತ್ತು ಕರುಳಿನ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ.
ರಕ್ತಹೀನತೆ, ಮಧುಮೇಹ, ರಕ್ತ ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಾಗಿ ಅರಿಶಿಣ ಸೇವನೆ ಮಾಡುವುದನ್ನು ಆದಷ್ಟು ತಪ್ಪಿಸಿ. ಹಲವು ರೋಗಗಳು ನಮ್ಮ ಆಹಾರ ಕ್ರಮದಿಂದಲೇ ಹುಟ್ಟಿಕೊಳ್ಳುತ್ತವೆ. ಅವುಗಳಿಗೆ ಪರಿಹಾರವೂ ಸಹ ಆಹಾರ ಕ್ರಮ. ಪ್ರತಿನಿತ್ಯ ಪೌಷ್ಠಿಕ ಆಹಾರ ಸೇವಿಸುವುದರ ಜತೆಗೆ ನಿಯಮಿತವಾಗಿ ಆಯುರ್ವೇದದ ಹಿನ್ನೆಲೆಯುಳ್ಳ ಆಹಾರವನ್ನೂ ಸೇವಿಸಬೇಕು. ಬಾಯಿಗೆ ರುಚಿ ಎಂದು ಅತಿಯಾಗಿ ಆಹಾರ ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ಹಾನಿಯುಂಟಾಗಬಹುದು. ಹಿತ-ಮಿತವಾಗಿ ಆಹಾರ ಸೇವಿಸಿ ನಿಮ್ಮ ಆರೋಗ್ಯ ಆರೈಕೆ ಮಾಡಿಕೊಳ್ಳಿ.
ಇದನ್ನೂ ಓದಿ:
Health Tips: ಕೊಬ್ಬರಿ ಎಣ್ಣೆಯ ಅತಿಯಾದ ಬಳಕೆ ಚರ್ಮಕ್ಕೆ ಹಾನಿಕಾರಕ
Health Tips: ಹಲ್ಲು ನೋವಿನ ಸಮಸ್ಯೆಯಿಂದ ನರಳುತ್ತಿದ್ದೀರಾ? ಇಲ್ಲಿದೆ ಪರಿಹಾರ