ಮಳೆಗಾಲದಲ್ಲಿ ಡೆಂಗ್ಯೂ ರೋಗ ಹರಡಬಹುದು ಎಚ್ಚರ! ರೋಗ ಬಾರದಂತೆ ತಡೆಗಟ್ಟುವ ಕ್ರಮಗಳನ್ನು ತಿಳಿಯಿರಿ

ಸಾಮಾನ್ಯವಾಗಿ ಡೆಂಗ್ಯೂ ರೋಗ ಲಕ್ಷಣಗಳಲ್ಲಿ ಹೆಚ್ಚು ಜ್ವರ ಕಾಣಿಸಿಕೊಳ್ಳುತ್ತದೆ. ಮನುಷ್ಯರಿಗೆ ಕಾಣಿಸಿಕೊಳ್ಳುವ ಸಣ್ಣ ಜ್ವರವು ತೀವ್ರ ಮಟ್ಟಕ್ಕೆ ಏರಿ ಹೆಚ್ಚಿನ ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳಿರುತ್ತದೆ. ಹಾಗಿರುವಾಗ ಡೆಂಗ್ಯೂ ವೈರಸ್​ನ ರೋಗ ಲಕ್ಷಣಗಳು ಯಾವುವು ಎಂಬುದನ್ನು ನಿಮ್ಮ ಗಮನದಲ್ಲಿರಲಿ.

ಮಳೆಗಾಲದಲ್ಲಿ ಡೆಂಗ್ಯೂ ರೋಗ ಹರಡಬಹುದು ಎಚ್ಚರ! ರೋಗ ಬಾರದಂತೆ ತಡೆಗಟ್ಟುವ ಕ್ರಮಗಳನ್ನು ತಿಳಿಯಿರಿ
ಸಾಂದರ್ಭಿಕ ಚಿತ್ರ
TV9kannada Web Team

| Edited By: shruti hegde

Jul 20, 2021 | 12:08 PM

ಮಳೆಗಾಲ ಅದಾಂಕ್ಷಣ ಖುಷಿಯಾಗುವುದಂತೂ ಸತ್ಯ. ಆದರೆ ಅದಕ್ಕಿಂತ ಮುಖ್ಯವಾಗಿ ರೋಗಗಳು ಹರಡುವ ಭಯವೇ ಹೆಚ್ಚು. ಈ ಸಮಯದಲ್ಲಿ ಸಾಂಕ್ರಾಮಿಕ ವೈರಸ್​ಗಳು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ ಎಂದು ವೈದ್ಯರು ಹೇಳುತ್ತಾರೆ. ಅವುಗಳಲ್ಲಿ ಡೆಂಗ್ಯೂ(Dengue) ಕೂಡಾ ಒಂದು. ಡೆಂಗ್ಯೂ ರೋಗಕ್ಕೆ ಇಲ್ಲಿಯವರೆಗೆ ಯಾವುದೇ ಔಷಧ(Medicine) ಲಭ್ಯವಾಗಿಲ್ಲ. ಹಾಗಾಗಿ ಈ ಸಮಯದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲದು. ನಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿಯಿಂದ ಇರುವುದು ಒಳ್ಳೆಯದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ ಪ್ರತೀ ವರ್ಷ 100-400 ಮಿಲಿಯನ್​ ಡೆಂಗ್ಯೂ ಪ್ರಕರಣಗಳು ದಾಖಲಾಗುತ್ತವೆ. ಕೊರೊನಾ ಹಾವಳಿಯ ಮಧ್ಯೆ ಡೆಂಗ್ಯೂ ವೈರಸ್​ ನಿಯಂತ್ರಣಕ್ಕಾಗಿ ನಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿವಹಿಸಲೇಬೇಕು.

ಡೆಂಗ್ಯೂ ರೋಗ ಲಕ್ಷಣಗಳು ಸಾಮಾನ್ಯವಾಗಿ ಡೆಂಗ್ಯೂ ರೋಗ ಲಕ್ಷಣಗಳಲ್ಲಿ ಹೆಚ್ಚು ಜ್ವರ ಕಾಣಿಸಿಕೊಳ್ಳುತ್ತದೆ. ಮನುಷ್ಯರಿಗೆ ಕಾಣಿಸಿಕೊಳ್ಳುವ ಸಣ್ಣ ಜ್ವರವು ತೀವ್ರ ಮಟ್ಟಕ್ಕೆ ಏರಿ ಹೆಚ್ಚಿನ ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳಿರುತ್ತದೆ. ಹಾಗಿರುವಾಗ ಡೆಂಗ್ಯೂ ವೈರಸ್​ನ ರೋಗ ಲಕ್ಷಣಗಳು ಯಾವುವು ಎಂಬುದನ್ನು ನಿಮ್ಮ ಗಮನದಲ್ಲಿರಲಿ.

*ಜ್ವರ *ಶೀತ *ತಲೆನೋವು *ಸ್ನಾಯು ಸೆಳೆತ *ವಾಂತಿ *ಕೀಲು ನೋವು *ಕಣ್ಣು ನೋವು

ಅತಿಯಾದ ಡೆಂಗ್ಯೂ ರೋಗ ಲಕ್ಷಣಗಳಿಂದ ರಕ್ತಸ್ರಾವ, ರಕ್ತದೊತ್ತಡ, ಹೊಟ್ಟೆ ನೋವಿನಂತಹ ಸಮಸ್ಯೆಗಳು ತೀರ್ವಗೊಳ್ಳಬಹುದು. ಹಾಗಿರುವಾಗ ಡೆಂಗ್ಯೂ ರೋಗ ಬಾರದಂತೆ ತಡೆಗಟ್ಟುವ ಕ್ರಮಗಳ ಕುರಿತಾಗಿ ಹೆಚ್ಚಿನ ಕಾಳಜಿ ಉತ್ತಮ.

ಮಳೆಗಾಲದ ಸಮಯದಲ್ಲಿ ಡೆಂಗ್ಯೂ ತಡೆಗಟ್ಟುಲು ಅನುಸರಿಸುವ ಕ್ರಮಗಳು ನೀವು ವಾಸವಾಗಿರುವ ಸುತ್ತ-ಮುತ್ತಲಿನ ಜಾಗ ಸ್ವಚ್ಛವಾಗಿರಲಿ ಮಳೆಗಾಲದ ಸಮಯದಲ್ಲಿ ನಿಮ್ಮ ಮನೆಯ ಸುತ್ತ- ಮುತ್ತಲು ನೀರು ನಿಂತಿರುತ್ತದೆ. ನೀರು ನಿಂತ ಜಾಗದಲ್ಲಿ ಸೊಳ್ಳೆಗಳು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಇದು ನಿಮ್ಮ ಆರೋಗ್ಯವನ್ನು ಕೆಡಿಸುತ್ತದೆ. ಜತೆಗೆ ಸೊಳ್ಳೆಗಳು ಕಚ್ಚಿ ಡೆಂಗ್ಯೂ ರೋಗ ಬರುವ ಲಕ್ಷಣಗಳು ಹೆಚ್ಚಾಗಿರುತ್ತದೆ. ಆದ್ದರಿಂದ ನಿಮ್ಮ ಸುತ್ತ- ಮುತ್ತಲಿನ ಜಾಗವನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳಿ.

ಒಳ್ಳೆಯ ಆಹಾರ ಸೇವಿಸಿ ಮಳೆಗಾಲದ ಸಮಯದಲ್ಲಿ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲೇ ಬೇಕು. ಆಗ ಮಾತ್ರ ವೈರಸ್​ ವಿರುದ್ಧ ನಿಮ್ಮ ದೇಹ ಹೋರಾಡಲು ಸಹಾಯಕವಾಗುತ್ತದೆ. ಹಾಗಿರುವಾಗ ಪೌಷ್ಟಿಕಾಂಶಯುಕ್ತ ಆಹಾರವನ್ನೇ ಹೆಚ್ಚು ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದರ ಜತೆಗೆ ಒಳ್ಳೆಯ ಆಹಾರವು ನಿಮ್ಮದಾಗಿರಲಿ.

ಮನೆಯೊಳಗೆ ಸೊಳ್ಳೆಗಳು ಬಾತರದಂತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಿ ರಾತ್ರಿಯ ಹೊತ್ತಿನಲ್ಲಿ ಸೊಳ್ಳೆಗಳು ಮನೆಯನ್ನು ಪ್ರವೇಶಿಸುತ್ತದೆ. ಹಾಗಾಗಿ ಸಂಜೆಯಾಗುತ್ತಿದ್ದಂತೆಯೇ ಮನೆಯ ಕಿಟಕಿಗಳನ್ನು ಮುಚ್ಚಿ. ಸೊಳ್ಳೆ ಬತ್ತಿ, ಸೊಳ್ಳೆ ಪರದೆಗಳನ್ನು ಬಳಸಿ. ಇದು ಸೊಳ್ಳೆಗಳ ಕಾಟದಿಂದ ನಿಮ್ಮನ್ನು ರಕ್ಷಿಸುತ್ತದೆ.

ನಿಮ್ಮ ಆರೋಗ್ಯ ನಿಮ್ಮ ಕಾಳಜಿ ರೋಗಗಳು ಬಂದ ಮೇಲೆ ಪರಿಹಾರ ಕ್ರಮಗಳನ್ನು ಹುಡುಕುವುದು ಅನಿವಾರ್ಯ. ಆದರೆ ಅದಕ್ಕೂ ಮೊದಲು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡರೆ ರೋಗ ಬಾರದಂತೆ ಎಚ್ಚರವಹಿಸಬಹುದು. ಈ ಕೆಲವು ವಿಷಯಗಳನ್ನು ಪಾಲಿಸುವ ಮೂಲಕ ಡೆಂಗ್ಯೂ ರೋಗ ಬಾರದಂತೆ ತಡೆಗಟ್ಟಬಹುದು. ರೋಗ ಲಕ್ಷಣಗಳು ಕಂಡು ಬಂದರೆ ಯಾವುದೇ ಆಲಸ್ಯ ತೋರದೆ ಹತ್ತಿರದ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ.

ಇದನ್ನೂ ಓದಿ:

ಡೆಂಗ್ಯೂ, ಮಲೇರಿಯಾ ಮತ್ತು ಕೊರೊನಾ ವೈರಸ್​ ಸೋಂಕನ್ನು ತಪ್ಪಿಸುವುದು ಹೇಗೆ?

Health Tips: ಮಾನ್ಸೂನ್​ನಲ್ಲಿ ನಿಮ್ಮ ಆರೋಗ್ಯವನ್ನು ಹೇಗೆ ರಕ್ಷಿಸಿಕೊಳ್ಳಬಹುದು? ಇಲ್ಲಿದೆ ಮಾಹಿತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada