ಸೀತಾಫಲ ಹಣ್ಣೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತೆ. ರುಚಿಯಲ್ಲಿ ತುಂಬಾ ಸಿಹಿಯಾದ ಈ ಹಣ್ಣು ಅನೇಕ ಆಗೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಜತೆಗೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಕೆಲವು ಔಷಧಿ ತಯಾರಿಕೆಯಲ್ಲಿಯೂ ಸಹ ಈ ಹಣ್ಣನ್ನು ಬಳಸುತ್ತಾರೆ. ಹಾಗಿರುವಾಗ ಸೀತಾಫಲ ಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ.
ಸಿತಾಫಲವು ವಿಟಮಿನ್ ಸಿ ನಂತಹ ಆಂಟಿ ಆಕ್ಸಿಡೆಂಟ್ಗಳನ್ನು ಹೊಂದಿದೆ. ಇದು ನಿಮ್ಮ ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಷಿಯಮ್ ಮತ್ತು ಮೆಗ್ನೀಶಿಯಂ ಹೃದಯ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ. ಜತೆಗೆ ಹೃದಯ ಸಂಬಂಧಿ ಖಾಯಿಲೆಗಳಿಂದ ರಕ್ಷಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಸೀತಾಫಲದ ಆರೋಗ್ಯ ಪ್ರಯೋಜನಗಳು
ಸೀತಾಫಲ ಹಣ್ಣಿನಲ್ಲಿ ವಿಟಮಿನ್ ಎ ಅಂಶವಿರುತ್ತದೆ. ಇದು ನಿಮ್ಮ ಚರ್ಮ ಮತ್ತು ಕೂದಲು ಆರೋಗ್ಯಕ್ಕೆ ಒಳ್ಳೆಯದು. ಕಣ್ಣಿನ ಆರೋಗ್ಯಕ್ಕೂ ಸಹ ಈ ಹಣ್ಣು ಹೆಚ್ಚು ಉಪಯುಕ್ತ. ಜತೆಗೆ ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ.
ಸೀತಾಫಲದಲ್ಲಿ ಮೆಗ್ನೀಶಿಯಮ್ ಇರುತ್ತದೆ. ಇದು ನಿಮ್ಮ ಅಸ್ವಸ್ಥತೆ, ದೌರ್ಬಲ್ಯದಿಂದ ಪರಿಹಾರ ಪಡೆಯಲು ಸಹಾಯಕವಾಗಿದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕಾರಿ. ಸೀತಾಫಲದಲ್ಲಿ ನೈಸರ್ಗಿಕ ಸಕ್ಕರೆ ಇರುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಸೀತಾಫಲ ಹಣ್ಣಿನಲ್ಲಿ ವಿಟಮಿನ್ ಬಿ6 ಇರುತ್ತದೆ. ಸೀತಾಫಲ ಹಣ್ಣನ್ನು ಸೇವಿಸುವಿದರಿಂದ ನಿಮ್ಮ ಮನಸ್ಥಿತಿ ಸುಧಾರಣೆಗೆ ಸಹಾಯಕ. ಖಿನ್ನತೆಯ ಸಮಸ್ಯೆಯನ್ನು ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ. ವಿಟಮಿನ್ ಸಿ ಅಂಶದಿಂದ ಸಮೃದ್ಧವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಸೀತಾಫಲವು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
ಸೀತಾಫಲ ಹಣ್ಣಿನಲ್ಲಿರುವ ಪೋಷಕಾಂಶಗಳು
ಕ್ಯಾಲೊರಿ- 120ಕೆ
ಪ್ರೋಟೀನ್ 2.50 ಗ್ರಾಂ
ಕಾರ್ಬೋಹೈಡ್ರೇಟ್- 28.34 ಗ್ರಾಂ
ಕ್ಯಾಲ್ಸಿಯಂ- 16ಮಿಗ್ರಾಂ
ಕಬ್ಬಿಣ- 0.43 ಮಿಗ್ರಾಂ
ಮೆಗ್ನೀಶಿಯಂ- 27 ಮಿಗ್ರಾಂ
ರಂಜಕ- 42 ಮಿಗ್ರಾಂ
ಪೊಟ್ಯಾಷಿಯಂ- 459 ಮಿಗ್ರಾಂ
ಸತು- 0.26 ಮಿಗ್ರಾಂ
ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ಬೇಡ. ನಿಮ್ಮ ಸುತ್ತ ಮುತ್ತಲು ಬೆಳೆದಿರುವ ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಅವುಗಳನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಿ.
ಇದನ್ನೂ ಓದಿ:
Health Tips: ಸಾತ್ವಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು
Health Tips: ಅತಿಯಾಗಿ ಬಿಸ್ಕತ್ ತಿನ್ನುವವರೇ ಎಚ್ಚರ!; 60 ಬ್ರ್ಯಾಂಡ್ಗಳ ಬಿಸ್ಕತ್ನಲ್ಲಿವೆ ಕ್ಯಾನ್ಸರ್ಕಾರಕ ಅಂಶ