Blood Pressure: ಅಧಿಕ ರಕ್ತದೊತ್ತಡ ಸಮಸ್ಯೆಯೇ? ಪರಿಹಾರಕ್ಕಾಗಿ ಇಲ್ಲಿವೆ ಸಲಹೆಗಳು
Health Tips: ನೀವು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ ಆಹಾರದ ಕುರಿತಾಗಿ ಹೆಚ್ಚು ಗಮನವಹಿಸುವುದು ಮುಖ್ಯ. ನೀವು ಸೇವಿಸುವ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ನೀವು ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಹಲವರಲ್ಲಿ ಕಾಡುತ್ತಿದೆ. ಇದು ಸಾಮಾನ್ಯವಾಗಿ 35 ರಿಂದ 40 ವರ್ಷದ ವಯಸ್ಸಿನವರಿಗೆ ಹೆಚ್ಚಿನದಾಗಿ ಈ ಸಮಸ್ಯೆ ಕಾಡುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆಗೆ ಕಾರಣ ಒತ್ತಡ ಮತ್ತು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು. ಸರಿಯಾದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. ಜತೆಗೆ ದೇಹವನ್ನು ಸದೃಢವಾಗಿರಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕಡಿಮೆ ಉಪ್ಪನ್ನು ಸೇವಿಸಿ ಆಹಾರದೊಂದಿಗೆ ಹೆಚ್ಚಿನ ಉಪ್ಪನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುತ್ತದೆ. ಇದು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಇತರ ಗಂಭೀರ ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ ಕಡಿಮೆ ಉಪ್ಪನ್ನು ಬಳಸಿ ಇದರಿಂದ ನಿಮ್ಮ ರಕ್ತದೊತ್ತಡ ಸಮಸ್ಯೆ ನಿಯಂತ್ರಣದಲ್ಲಿರುತ್ತದೆ.
ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ ನೀವು ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿದ್ದರೆ ನೀವು ಕೆಫೀನ್ ಸೇವನೆಯನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಪದೇ ಪದೇ ಕಾಫಿ, ಚಹ ಸೇವಿಸುವ ಅಭ್ಯಾಸವಿದ್ದರೆ ಇದನ್ನು ಕಡಿಮೆ ಮಾಡಿ. ಇದರಿಂದ ನೀವು ರಕ್ತದೊತ್ತಡ ಸಮಸ್ಯೆಯನ್ನು ಬಹುಬೇಗ ನಿಯಂತ್ರಣಕ್ಕೆ ತರಬಹುದು.
ವ್ಯಾಯಾಮ ಪ್ರತಿನಿತ್ಯ ವ್ಯಾಯಾಮ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ. ಪ್ರತಿನಿತ್ಯ 40 ರಿಂದ 45 ನಿಮಿಷ ವ್ಯಾಯಾಮ ಅಭ್ಯಾಸ ಮಾಡಿ. ಇದರಿಂದ ನೀವು ಸದೃಢರಾಗುತ್ತೀರಿ ಜತೆಗೆ ಆರೋಗ್ಯವೂ ಸುಧಾರಿಸುತ್ತದೆ.
ಕುಂಬಳಕಾಯಿ ಬೀಜ ಕುಂಬಳಕಾಯಿ ಬೀಜಗಳಲ್ಲಿ ಅನೇಕ ಪೋಷಕಾಂಶಗಳಿರುತ್ತವೆ. ಪೊಟ್ಯಾಷಿಯಂ, ಮೆಗ್ನೀಶಿಯಮ್ಅನ್ನು ಹೊಂದಿರುತ್ತದೆ. ಇದು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ ಕುಂಬಳಕಾಯಿ ಬೀಜ ಸೇವಿಸಬಹುದು, ಆದರೆ ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ ನೀವು ವೈದ್ಯರಲ್ಲಿ ಸಲಹೆ ಪಡೆಯುವುದು ಮುಖ್ಯ.
ಇದನ್ನೂ ಓದಿ:
Health Tips: ಡ್ರೈ ಫ್ರೂಟ್ಸ್ ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ
Health Tips: ಹೃದಯ ಆರೋಗ್ಯ ಸುಧಾರಣೆಗೆ ಈ ಹಣ್ಣುಗಳ ಸೇವನೆ ಪ್ರಯೋಜನಕಾರಿ