Eye Care: ಕಣ್ಣುಗಳ ಆರೋಗ್ಯ ಕಾಪಾಡಲು ಹೀಗೆ ಮಾಡಿ

| Updated By: ಝಾಹಿರ್ ಯೂಸುಫ್

Updated on: Aug 08, 2021 | 5:41 PM

Health Tips In Kannada: ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಗಂಭೀರ ರೋಗಗಳು ನಿಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತವೆ.

Eye Care: ಕಣ್ಣುಗಳ ಆರೋಗ್ಯ ಕಾಪಾಡಲು ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
Follow us on

ಮನುಷ್ಯನ ಅತ್ಯಂತ ಪ್ರಮುಖ ಅಂಗಗಳಲ್ಲಿ ಕಣ್ಣುಗಳು ಕೂಡ ಸೇರಿವೆ. ಹೀಗಾಗಿಯೇ ನಯನಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸ ಬೇಕಾಗುತ್ತದೆ. ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ಗ್ಯಾಜೆಟ್​ಗಳ ವೀಕ್ಷಣೆಯಿಂದ ಕಣ್ಣುಗಳ ಮೇಲೆ ದುಷ್ಫರಿಣಾಮಗಳು ಬೀರುತ್ತವೆ. ಇದರಿಂದ ದೃಷ್ಟಿದೋಷದ ಸಮಸ್ಯೆ ಕಾಡಬಹುದು. ಆದರೆ ಆರಂಭದಿಂದಲೂ ಕಣ್ಣುಗಳ ಬಗ್ಗೆ ವಿಶೇಷ ಕಾಳಜಿವಹಿಸಿದರೆ ದೃಷ್ಟಿ ಹೀನದಂತಹ ಸಮಸ್ಯೆಯಿಂದ ಪಾರಾಗಬಹುದು. ಹೀಗೆ ನಯನಗಳನ್ನು ಆರೋಗ್ಯವಾಗಿಡಲು ಕೆಳಗೆ ನೀಡಲಾದ ಸಲಹೆಗಳನ್ನು ಅನುಸರಿಸಬಹುದು.

ಪೌಷ್ಟಿಕ ಆಹಾರ ಸೇವಿಸಿ:
ನಿಮ್ಮ ಜೀವನಶೈಲಿಯನ್ನು ಆರೋಗ್ಯಕರವಾಗಿಡಲು ಉತ್ತಮ ಆಹಾರ ಪದ್ಧತಿ ಬಹಳ ಮುಖ್ಯ. ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಅನೇಕ ಸಮಸ್ಯೆಗಳನ್ನು ದೂರ ಮಾಡಬಹುದು. ಇದರಲ್ಲಿ, ವಿಟಮಿನ್ ಎ, ಸಿ, ಇ, ಖನಿಜಗಳು, ಸತು, ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿ. ಇದು ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ, ತರಕಾರಿಗಳು, ಸಮುದ್ರಾಹಾರ ಮತ್ತು ಗಿಡಮೂಲಿಕೆಗಳು ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವ ಮೂಲಕ ಕಣ್ಣಿನ ಆರೋಗ್ಯವನ್ನು ಹೆಚ್ಚಿಸಬಹುದು.

ಕ್ಯಾರೊಟಿನಾಯ್ಡ್​ಗಳು ಕಣ್ಣುಗಳಿಗೆ ಪ್ರಯೋಜನಕಾರಿ:
ಕಣ್ಣಿನ ದೃಷ್ಟಿ ಹೆಚ್ಚಿಸಲು, ಕ್ಯಾರೋಟಿನ್ ಹೊಂದಿರುವ ವಸ್ತುಗಳನ್ನು ಸೇವಿಸಬೇಕು. ಇದು ನಮ್ಮ ರೆಟಿನಾದಲ್ಲಿ ಇರುವ ಕ್ಯಾರೊಟಿನಾಯ್ಡ್‌ಗಳಲ್ಲಿರುವ ಲುಟೀನ್ ಮತ್ತು ಕ್ಸಾಂಥೈನ್ ಅನ್ನು ಹೆಚ್ಚಿಸುತ್ತದೆ. ಕ್ಯಾರೋಟಿನಾಯ್ಡ್​ಗಳನ್ನು ಪಡೆಯಲು ಹಸಿರು ಎಲೆಗಳ ತರಕಾರಿಗಳು ಮತ್ತು ಮೊಟ್ಟೆಗಳನ್ನು ಹೆಚ್ಚಾಗಿ ಸೇವಿಸಿ. ಕ್ಯಾರೊಟಿನಾಯ್ಡ್​ ಕಣ್ಣುಗಳಲ್ಲಿನ ವರ್ಣದ್ರವ್ಯದ ಸಾಂದ್ರತೆಯನ್ನು ಸುಧಾರಿಸುವಲ್ಲಿ ಸಹ ಪ್ರಯೋಜನಕಾರಿ. ಇಂತಹ ಆಹಾರ ಪದ್ಧತಿಯನ್ನು ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ:
ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಗಂಭೀರ ರೋಗಗಳು ನಿಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತವೆ. ಆಪ್ಟಿಕ್ ನರದ ಉರಿಯೂತದಂತಹ ಕೆಲವು ಪರಿಸ್ಥಿತಿಗಳು ದೃಷ್ಟಿಯ ಮೇಲೆ ಪರಿಣಾಮ ಬೀರಬಹುದು. ಅದಕ್ಕಾಗಿಯೇ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ.

ಕಣ್ಣುಗಳ ಸುರಕ್ಷತೆ:
ಮೊಬೈಲ್ ಹಾಗೂ ಲ್ಯಾಪ್ ಟಾಪ್ ಮುಂದೆ ಗಂಟೆಗಟ್ಟಲೇ ಸಮಯ ಕಳೆಯುವವರೇ ಹೆಚ್ಚು. ಆದಾಗ್ಯೂ, ಇದು ನಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಕನ್ನಡಕಗಳನ್ನು ಧರಿಸಬಹುದು. ಕಂಪ್ಯೂಟರ್ ಗ್ಲಾಸ್​ಗಳು ಈಗ ಎಲ್ಲೆಡೆ ಲಭ್ಯ. ಇದಲ್ಲದೆ ಬಿಸಿಲಿಗೆ ಕಾಲಿಡುವ ಮುನ್ನ ಸನ್ ಗ್ಲಾಸ್ ಧರಿಸಿ. UV A ಮತ್ತು UV B ಯ ಹಾನಿಕಾರಕ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಇಂತಹ ಸನ್​ಗ್ಲಾಸ್​ಗಳು ಅತ್ಯಗತ್ಯ.

20-20-20 ನಿಯಮ ಅನುಸರಿಸಿ:
ಕಂಪ್ಯೂಟರ್​ನಲ್ಲಿ ಕೆಲಸ ಮಾಡುವಾಗ 20-20-20 ಸೂತ್ರವನ್ನು ಅನುಸರಿಸಿ. ಇದರರ್ಥ ಪ್ರತಿ ನಿಮಿಷವೂ ನಿಮ್ಮ ಕಣ್ಣುಗಳಿಂದ 20 ಅಡಿ ದೂರದಲ್ಲಿರುವ ಯಾವುದನ್ನಾದರೂ 20 ಸೆಕೆಂಡುಗಳ ಕಾಲ ನೋಡಿ. ಇದರಿಂದ ಸಮಯಕ್ಕೆ ಸರಿಯಾಗಿ ವಿರಾಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಕಣ್ಣಿನ ಒತ್ತಡವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: Health Tips: ಕೊತ್ತಂಬರಿ ನೆನೆಸಿದ ನೀರು ಕುಡಿದ್ರೆ ಸಿಗುವ ಆರೋಗ್ಯಕರ ಪ್ರಯೋಜನ ಒಂದಾ ಎರಡಾ..!

ಇದನ್ನೂ ಓದಿ: Health Tips: ನೀವು ಹಸಿ ಹಾಲು ಕುಡಿತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

(know these natural tips to improve eye vision)