ಇಂದಿನ ಯುಗದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದು, ಸಂಸಾರಿಕ ಜೀವನಕ್ಕೆ ಹೆಚ್ಚಿನ ಆಸಕ್ತಿಯನ್ನು ತೋರದೆ ತಮ್ಮ ವೃತಿಜೀವನ, ಗುರಿ ಸಾಧನೆಯ ಕಡೆಗೆ ಹೆಚ್ಚಿನ ಒಲವನ್ನು ತೋರುತ್ತಾರೆ. ಇದರಿಂದಾಗಿ ಮದುವೆ ಹಾಗೂ ಗರ್ಭಧಾರಣೆಗೆ ವಿಳಂಬ ಮಾಡುತ್ತಾರೆ. ಆದರೆ 35 ವರ್ಷ ವಯಸ್ಸಿನ ನಂತರ ಗರ್ಭಧಾರಣೆ(Pregnancy) ಯನ್ನು ಬಯಸುವುದು ಅಷ್ಟು ಸುಲಭವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ. ಏಕೆಂದರೆ ವಯಸ್ಸಾದಂತೆ, ಮಹಿಳೆಯ ಫಲವತ್ತತೆಯ ಸಾಮರ್ಥ್ಯದ ಜೊತೆಗೆ ಮೊಟ್ಟೆಯ ಗುಣಮಟ್ಟ ಕಡಿಮೆಯಾಗುತ್ತದೆ.ಈ ಕಾರಣದಿಂದಾಗಿ, ಕೆಲವು ಸಂದರ್ಭಗಳಲ್ಲಿ ಮಹಿಳೆಯರು ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ ಮತ್ತು ಐವಿಎಫ್ ಅನ್ನು ಆಶ್ರಯಿಸಬೇಕಾಗುತ್ತದೆ. ಇದರ ಹೊರತಾಗಿಯೂ ಗರ್ಭಧರಿಸಿದರೆ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗಿಂತ ಎರಡು ಪಟ್ಟು ಗರ್ಭಪಾತದ ಸಾಧ್ಯತೆಯಿದೆ. ಮತ್ತೊಂದೆಡೆ ಮಗು ಹುಟ್ಟಿದ್ದರೆ ಬಾಲ್ಯದಲ್ಲಿಯೇ ಮಗು ಕೆಲವು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ದೆಹಲಿಯ ಸ್ತ್ರೀರೋಗತಜ್ಞ ಡಾ.ಚಂಚಲ್ ಶರ್ಮಾ ಎಚ್ಚರಿಸುತ್ತಾರೆ.
ವೈದ್ಯರ ಪ್ರಕಾರ 35 ವರ್ಷದ ನಂತರ ಮಹಿಳೆಯರು ಗರ್ಭಿಣಿಯಾಗುವ ಸಾಧ್ಯತೆ ಕೇವಲ 15 ರಿಂದ 30 ಪ್ರತಿಶತ ಎಂದು ಹೇಳುತ್ತಾರೆ. ಮಹಿಳೆಯು ಗರ್ಭಿಣಿಯಾಗಿದ್ದರೂ ಸಹ, ಮಗುವಿಗೆ ಆನುವಂಶಿಕ ಕಾಯಿಲೆಯ ಅಪಾಯವಿದೆ. 32 ನೇ ವಯಸ್ಸಿಗಿಂತ ಮೊದಲು ಗರ್ಭಧಾರಣೆಯ ಬಗ್ಗೆ ಯೋಜಿಸಬೇಕು. ಏಕೆಂದರೆ ಈ ವಯಸ್ಸಿನಲ್ಲಿ ಗರ್ಭಿಣಿಯಾಗುವ ಸಂಭವನೀಯತೆಯು 80 ಪ್ರತಿಶತದವರೆಗೆ ಇರುತ್ತದೆ.
ಇದನ್ನೂ ಓದಿ: ಹದಿಹರೆಯದವರಲ್ಲಿ ಪಿಸಿಓಎಸ್ನ ಆರಂಭಿಕ ಚಿಹ್ನೆಗಳು ಹೀಗಿರುತ್ತದೆ
35 ವರ್ಷದ ನಂತರ ಗರ್ಭಧಾರಣೆಯನ್ನು ಯೋಜಿಸುವ ಮಹಿಳೆಯರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗಿಂತ ಎರಡು ಪಟ್ಟು ಗರ್ಭಪಾತದ ಸಾಧ್ಯತೆಯಿದೆ ಎಂದು ದೆಹಲಿಯ ಸ್ತ್ರೀರೋಗತಜ್ಞ ಡಾ.ಚಂಚಲ್ ಶರ್ಮಾ ಹೇಳುತ್ತಾರೆ. ಈ ವಯಸ್ಸಿನಲ್ಲಿ, ಸ್ಥೂಲಕಾಯತೆಯು ಮಹಿಳೆಯರಲ್ಲಿ ವೇಗವಾಗಿ ಹೆಚ್ಚಾಗುತ್ತದೆ, ಇದರಿಂದಾಗಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವೂ ಹೆಚ್ಚಾಗುತ್ತದೆ. ವಯಸ್ಸು ಹೆಚ್ಚಾದಂತೆ ಸಾಮಾನ್ಯ ಹೆರಿಗೆಯಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಿ ಸೆಕ್ಷನ್ ಸರ್ಜರಿ ಮಾಡಬೇಕಾಗುತ್ತದೆ. ಇದರಿಂದಾಗಿ ಅಪಾಯ ಹೆಚ್ಚು.
ಡಾ. ಚಂಚಲ್ ಶರ್ಮಾ ಅವರು, 35 ವರ್ಷದ ನಂತರ ನೀವು ಗರ್ಭಿಣಿಯಾಗಿದ್ದರೆ, ಮಗುವಿಗೆ ಕೆಲವು ಕಾಯಿಲೆಗಳ ಅಪಾಯವಿದೆ ಎಂದು ಹೇಳುತ್ತಾರೆ. ಟೈಪ್ 1 ಮಧುಮೇಹದಂತಹ ಅನುವಂಶಿಕ ಕಾಯಿಲೆಗಳ ಅಪಾಯವಿದೆ. ಕೆಲವು ಸಂದರ್ಭಗಳಲ್ಲಿ ಮಗು ಡೌನ್ ಸಿಂಡ್ರೋಮ್(ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ದೋಷ) ನಂತಹ ಕಾಯಿಲೆಗೆ ಬಲಿಯಾಗಬಹುದು. ಈ ಕಾಯಿಲೆಯಿಂದಾಗಿ, ಮಗುವಿಗೆ ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥತೆ ಅಥವಾ ಥೈರಾಯ್ಡ್ ಅಪಾಯವಿದೆ, ಆದರೂ ಇದು ಎಲ್ಲಾ ಸಂದರ್ಭಗಳಲ್ಲಿ ಸಂಭವಿಸುವುದಿಲ್ಲ. 35 ವರ್ಷ ವಯಸ್ಸಿನ ನಂತರ, ಪ್ರತಿ 150 ಮಕ್ಕಳಲ್ಲಿ ಒಬ್ಬರು ಈ ರೋಗಗಳ ಅಪಾಯದಲ್ಲಿದ್ದಾ. ಅಂತಹ ಪರಿಸ್ಥಿತಿಯಲ್ಲಿ, ತಡವಾಗಿ ಮಗುವನ್ನು ಯೋಜಿಸದಂತೆ ಮಹಿಳೆಯರಿಗೆ ಸಲಹೆ ನೀಡಲಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:21 pm, Tue, 26 September 23