Leptospirosis: ಇಲಿಗಳಿಂದ ಹರಡುವ ಈ ರೋಗ ಮೂತ್ರಪಿಂಡದ ಹಾನಿಗೆ ಕಾರಣವಾಗುತ್ತದೆ
ಇಲಿಗಳ ಮಲದಿಂದ ರೋಗದ ವೈರಸ್ ಮಾನವ ದೇಹವನ್ನು ಪ್ರವೇಶಿಸಿದ ನಂತರ, ಜ್ವರ, ದೇಹದ ನೋವು, ವಾಂತಿ, ಅತಿಸಾರ ಅಥವಾ ಕೆಂಪು ದದ್ದುಗಳಂತಹ ರೋಗಲಕ್ಷಣಗಳನ್ನು ಅನುಭವಿಸಬಹುದು. ಈ ರೋಗ ಬೇಗ ಗುಣವಾಗುವುದಿಲ್ಲ. ಇದು ವ್ಯಕ್ತಿಯ ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ದಾಳಿ ಮಾಡುತ್ತದೆ.
ಇಲಿಗಳಿಂದಾಗಿ ಮನುಷ್ಯರಿಗೆ ಮಾರಣಾಂತಿಕ ಕಾಯಿಲೆಗಳು ಬರುತ್ತಿವೆ . ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯಲ್ಲಿ ಇಲಿಗಳ ಹಾವಳಿಯಿಂದ ಲೆಪ್ಟೊಸ್ಪೈರೋಸಿಸ್ ಹರಡುವಿಕೆ ಹೆಚ್ಚಾಗಿದೆ. ಜಬಲ್‌ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಲೆಪ್ಟೊಸ್ಪಿರೋಸಿಸ್ ಇಲಿಗಳ ದೇಹದಲ್ಲಿ ಇರುವ ವೈರಸ್ ನಿಂದ ಉಂಟಾಗುತ್ತದೆ. ಈ ವೈರಾಣುಗಳು ಇಲಿಗಳ ವಿಸರ್ಜನೆಯ ಮೂಲಕವೂ ಮಾನವನ ದೇಹವನ್ನು ಪ್ರವೇಶಿಸಬಹುದು.
ಯಕೃತ್ತು ಮತ್ತು ಮೂತ್ರಪಿಂಡದ ಮೇಲೆ ಹಾನಿ:
ಇಲಿಗಳ ಮಲದಿಂದ ರೋಗದ ವೈರಸ್ ಮಾನವ ದೇಹವನ್ನು ಪ್ರವೇಶಿಸಿದ ನಂತರ, ಜ್ವರ, ದೇಹದ ನೋವು, ವಾಂತಿ, ಅತಿಸಾರ ಅಥವಾ ಕೆಂಪು ದದ್ದುಗಳಂತಹ ರೋಗಲಕ್ಷಣಗಳನ್ನು ಅನುಭವಿಸಬಹುದು. ಈ ರೋಗ ಬೇಗ ಗುಣವಾಗುವುದಿಲ್ಲ. ಇದು ವ್ಯಕ್ತಿಯ ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ದಾಳಿ ಮಾಡುತ್ತದೆ. ಇದರಿಂದಾಗಿ ರೋಗಿಯು ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಾನೆ. ದೇಹ ದುರ್ಬಲವಾಗುತ್ತದೆ. ರಕ್ತವು ರೋಗದಿಂದ ಕಲುಷಿತವಾಗುತ್ತದೆ. ಇದು ಸಾವಿಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಮಲಬದ್ಧತೆಯಿಂದ ಕಂಗೆಟ್ಟಿದ್ದೀರಾ?; ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಈ ಜ್ಯೂಸ್ ಸೇವಿಸಿ
ಈ ರೋಗವನ್ನು ನಿರ್ಲಕ್ಷಿಸಿದರೆ, ರೋಗಿಯು ಒಂದರಿಂದ ಒಂದೂವರೆ ತಿಂಗಳಲ್ಲಿ ಸಾಯಬಹುದು. ಆದ್ದರಿಂದ, ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು ಮತ್ತು ಸರಿಯಾದ ಚಿಕಿತ್ಸೆಯನ್ನು ಪ್ರಾರಂಭಿಸಬೇಕು. ಇತರ ಔಷಧಿಗಳೊಂದಿಗೆ ಪ್ರತಿಜೀವಕ ಔಷಧಿಗಳನ್ನು ತೆಗೆದುಕೊಳ್ಳಬೇಕು, ಈ ರೋಗವು ಸಾಂಕ್ರಾಮಿಕವಲ್ಲ. ಹಾಗಾಗಿ ಸ್ಪರ್ಶದಿಂದ ಹರಡುವುದಿಲ್ಲ. ಈ ರೋಗವನ್ನು ತಡೆಗಟ್ಟಲು, ಇಲಿಗಳು ಮನೆಯೊಳಗೆ ಪ್ರವೇಶಿಸದಂತೆ ಕ್ರಮವಹಿಸಿ,ಅದರ ಮಲವಿಸರ್ಜನೆಯಿಂದ ದೂರವಿರಿ. ಇದೊಂದು ಆನುವಂಶಿಕ ಕಾಯಿಲೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ