ಚಳಿಗಾಲದಲ್ಲಿ, ಪ್ಲೇಟ್‌ಲೆಟ್ ಕಡಿಮೆಯಾಗುವುದಕ್ಕೆ ಕಾರಣವೇನು ಗೊತ್ತಾ? ತಡೆಯಲು ಇಲ್ಲಿದೆ ಸಲಹೆ

ದೇಹದಲ್ಲಿ ಪ್ಲೇಟ್‌ಲೆಟ್‌ ಕಡಿಮೆಯಾಗುವುದರ ಬಗ್ಗೆ ನೀವು ಕೇಳಿರಬಹುದು. ಇದು ರಕ್ತದ ಪ್ರಮುಖ ಭಾಗವಾಗಿದ್ದು, ರಕ್ತ ಹೆಪ್ಪುಗಟ್ಟುವಿಕೆಗೆ ಮತ್ತು ಗಾಯಗೊಂಡಾಗ ಅತಿಯಾದ ರಕ್ತಸ್ರಾವವನ್ನು ತಡೆಯಲು ಕಾರಣವಾಗುತ್ತದೆ. ಆದರೆ ಇದರ ಕೊರತೆಯನ್ನು ಹಗುರವಾಗಿ ಪರಿಗಣಿಸಬಾರದು, ಏಕೆಂದರೆ ಇದರ ಲಕ್ಷಣಗಳು ಗಂಭೀರವಾಗಿರಬಹುದು. ಅಷ್ಟೇ ಅಲ್ಲ, ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾದರೆ, ಸಣ್ಣಪುಟ್ಟ ಗಾಯಗಳು ಸಹ ಗಂಭೀರವಾಗುತ್ತದೆ. ಹಾಗಾದರೆ ದೇಹದಲ್ಲಿ ಪ್ಲೇಟ್‌ಲೆಟ್‌ ಕಡಿಮೆಯಾಗುವುದಕ್ಕೆ ಕಾರಣವೇನು, ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಳಿಗಾಲದಲ್ಲಿ, ಪ್ಲೇಟ್‌ಲೆಟ್ ಕಡಿಮೆಯಾಗುವುದಕ್ಕೆ ಕಾರಣವೇನು ಗೊತ್ತಾ? ತಡೆಯಲು ಇಲ್ಲಿದೆ ಸಲಹೆ
Platelet Count Drops In Winter What To Know
Image Credit source: Getty Images

Updated on: Jan 15, 2026 | 6:28 PM

ಚಳಿಗಾಲದ ಹವಾಮಾನವು ಆರೋಗ್ಯದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ಕೆಲವರ ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ, ಇದನ್ನು ನಿರ್ಲಕ್ಷಿಸುವುದು ಬಹಳ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪ್ಲೇಟ್‌ಲೆಟ್‌ಗಳು (Platelet) ರಕ್ತದ ಪ್ರಮುಖ ಭಾಗವಾಗಿದ್ದು, ರಕ್ತ ಹೆಪ್ಪುಗಟ್ಟುವಿಕೆಗೆ ಮತ್ತು ಗಾಯಗೊಂಡಾಗ ಅತಿಯಾದ ರಕ್ತಸ್ರಾವವನ್ನು ತಡೆಯಲು ಕಾರಣವಾಗುತ್ತದೆ ಎಂಬುದು ನಿಮಗೆ ತಿಳಿದಿರಬಹುದು. ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾದರೆ, ಸಣ್ಣಪುಟ್ಟ ಗಾಯಗಳು ಸಹ ಗಂಭೀರವಾಗುತ್ತದೆ. ಹಾಗಾದರೆ ದೇಹದಲ್ಲಿ ಪ್ಲೇಟ್‌ಲೆಟ್‌ ಕಡಿಮೆಯಾಗುವುದಕ್ಕೆ ಕಾರಣವೇನು, ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಳಿಗಾಲದಲ್ಲಿ ದೇಹದಲ್ಲಿರುವ ಪ್ಲೇಟ್‌ಲೆಟ್‌ ಕಡಿಮೆಯಾಗುವುದಕ್ಕೆ ಕಾರಣವೇನು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ತಿಳಿಸಿರುವ ಮಾಹಿತಿ ಪ್ರಕಾರ, ಶೀತ ವಾತಾವರಣದಲ್ಲಿ, ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ, ಇದು ವೈರಲ್ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ದೇಹದ ರಕ್ತ ವ್ಯವಸ್ಥೆಯು ಪರಿಣಾಮ ಬೀರಬಹುದು ಮತ್ತು ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಚಳಿಗಾಲದಲ್ಲಿ, ಸೂರ್ಯನ ಬೆಳಕು ಸರಿಯಾಗಿ ಸಿಗದಿರುವುದು, ಜೊತೆಗೆ ನೀರು ಕುಡಿಯುವ ಪ್ರಮಾಣ ಕಡಿಮೆಯಾಗಿರುವುದು, ದೈಹಿಕ ಚಟುವಟಿಕೆ ಅಷ್ಟಾಗಿ ಇಲ್ಲದಿರುವುದು ಹೀಗೆ ಹಲವು ಕಾರಣಗಳು ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ಕೆಲವರಲ್ಲಿ, ದೀರ್ಘಕಾಲದ ಕಾಯಿಲೆ ಅಥವಾ ನಿರಂತರ ಔಷಧ ಸೇವನೆಯೂ ಸಹ ಈ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು. ಜೊತೆಗೆ, ಮಕ್ಕಳು, ವೃದ್ಧರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಇರುವವರಲ್ಲಿ ಈ ಅಪಾಯ ಹೆಚ್ಚಾಗಿರುತ್ತದೆ.

ಕಡಿಮೆ ಪ್ಲೇಟ್‌ಲೆಟ್‌ಗಳ ಲಕ್ಷಣಗಳು:

ಪ್ಲೇಟ್‌ಲೆಟ್‌ ಕಡಿಮೆಯಾದಾಗ, ಆಗಾಗ ಮೂಗಿನಿಂದ ರಕ್ತಸ್ರಾವವಾಗುವುದು, ಒಸಡುಗಳಿಂದ ರಕ್ತಸ್ರಾವವಾಗುವುದು ಅಥವಾ ದೇಹದಲ್ಲಿ ನೀಲಿ-ಕಪ್ಪು ಗುರುತುಗಳು ಕಂಡುಬರುತ್ತದೆ. ಆದರೆ ಸಣ್ಣ ಗಾಯವಾದರೂ ಕೂಡ ಬಹಳ ಸಮಯದವರೆಗೆ ರಕ್ತ ಬರುವುದು ಕಳವಳಕ್ಕೆ ಕಾರಣವಾಗಬಹುದು. ಕೆಲವರಲ್ಲಿ ನಿರಂತರವಾಗಿ ದೌರ್ಬಲ್ಯ, ಆಯಾಸ ಮತ್ತು ತಲೆತಿರುಗುವಿಕೆ ಕಂಡುಬರುತ್ತದೆ. ಇನ್ನು ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವವು ಕಡಿಮೆ ಪ್ಲೇಟ್‌ಲೆಟ್‌ಗಳ ಸಂಕೇತವೂ ಆಗಿರಬಹುದು. ಈ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ, ಸ್ಥಿತಿ ಗಂಭೀರವಾಗಬಹುದು.

ಇದನ್ನೂ ಓದಿ: ಒಸಡುಗಳಲ್ಲಿ ರಕ್ತ ಬರುವುದು ಡಯಾಬಿಟಿಸ್ ಬರುವ ಮುನ್ಸೂಚನೆಯೇ? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

ಇದನ್ನು ತಡೆಯುವುದು ಹೇಗೆ?

  • ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ.
  • ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
  • ಚಳಿಗಾಲದಲ್ಲಿಯೂ ಸಹ ಸ್ವಲ್ಪ ಸೂರ್ಯನ ಬೆಳಕನ್ನು ಪಡೆದುಕೊಳ್ಳಲು ಪ್ರಯತ್ನಿಸಿ.
  • ವೈರಲ್ ಸೋಂಕು ಬರದಂತೆ ತಡೆಯಿರಿ.
  • ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಮಾಡುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ