Menstrual cramps: ಮುಟ್ಟಿನ ಸಮಯದಲ್ಲಿ ತೀವ್ರವಾದ ನೋವು ಕಾಡುತ್ತದೆಯೇ, ಈ ಸಲಹೆಗಳನ್ನು ಅನುಸರಿಸಿ
ಮಹಿಳೆಯರು ಪ್ರತಿ ತಿಂಗಳು ತಮ್ಮ ಋತುಚಕ್ರದ ಸಮಯದಲ್ಲಿ ಸಾಮಾನ್ಯವಾಗಿ ನೋವನ್ನು ಅನುಭವಿಸುತ್ತಾರೆ, ಇದರಿಂದಾಗಿ ಅವರು ಎಲ್ಲಿಯೂ ಹೋಗಲು ಇಷ್ಟಪಡುವುದಿಲ್ಲ, ಹೊಟ್ಟೆ ನೋವು, ಸೆಳೆತ ಮತ್ತು ಉಬ್ಬರದಿಂದಾಗಿ, ಏನನ್ನೂ ತಿನ್ನಲು ಬಯಸುವುದಿಲ್ಲ. ಈ ರೀತಿ ಸಮಸ್ಯೆ ನೀವು ಕೂಡ ಅನುಭವಿಸುತ್ತಿದ್ದರೆ ಕೇವಲ ಒಂದು ವಸ್ತುವನ್ನು ಬಳಸುವ ಮೂಲಕ ಮುಟ್ಟಿನ ಸಮಯದಲ್ಲಿ ಉಂಟಾಗುವ ಸಮಸ್ಯೆಗಳಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು.

1. ಕಬ್ಬಿಣಾಂಶ ಭರಿತ ಬೆಲ್ಲವನ್ನು ಸೇವಿಸಿ
ಋತುಚಕ್ರದ ಸಮಯದಲ್ಲಿ ಯಾವುದೇ ರೀತಿಯ ಆಹಾರ ಸೇವನೆ ಮಾಡಲು ಇಷ್ಟವಿಲ್ಲದಿದ್ದರೆ ಒಂದು ತುಂಡು ಬೆಲ್ಲವನ್ನು ತಿನ್ನಿ. ಇದು ನಿಮಗೆ ತಕ್ಷಣದ ಪರಿಹಾರ ನೀಡಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಬೆಲ್ಲದಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶವಿದ್ದು, ಇದರ ಬಳಕೆಯು ಮುಟ್ಟಿನ ಸಮಯದಲ್ಲಿ ಬರುವ ಸೆಳೆತದಿಂದ ಪರಿಹಾರ ನೀಡುತ್ತದೆ. ಇದರೊಂದಿಗೆ, ನೀವು ಪಾಲಕ್, ದಾಳಿಂಬೆ, ಬೀಟ್ರೂಟ್ ಮುಂತಾದ ಕಬ್ಬಿಣಾಂಶ ಭರಿತ ವಸ್ತುಗಳನ್ನು ಸೇವಿಸಬೇಕು.
2. ನೋವನ್ನು ಕಡಿಮೆ ಮಾಡುತ್ತದೆ
ಬೆಲ್ಲದ ಸೇವನೆಯು ಹೊಟ್ಟೆ ನೋವಿನಿಂದ ಮುಕ್ತಿ ನೀಡುತ್ತದೆ. ಬೆಲ್ಲದಲ್ಲಿರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಸ್ನಾಯುಗಳನ್ನು ಸಡಿಲಗೊಳಿಸುತ್ತವೆ ಮತ್ತು ಸೆಳೆತದಿಂದ ಪರಿಹಾರವನ್ನು ನೀಡುತ್ತವೆ.
3. ಮನಸ್ಸನ್ನು ಹಗುರಾಗಿಸುತ್ತದೆ
ಮುಟ್ಟಿನ ಸಮಯದಲ್ಲಿ ಬೆಲ್ಲವನ್ನು ತಿನ್ನುವುದು ನಿಮ್ಮ ಮನಸ್ಥಿತಿಯನ್ನು ಸುಧಾರಿಸಿ, ಹಗುರಾಗಿಸುತ್ತದೆ. ಪದೇ ಪದೇ ಕಿರಿಕಿರಿಯಾಗುವುದನ್ನು ತಪ್ಪಿಸುತ್ತದೆ. ಬೆಲ್ಲದ ಬಳಕೆಯು ದೇಹದಲ್ಲಿ ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ, ಇದರಿಂದಾಗಿ ನೀವು ಮೊದಲಿಗಿಂತ ಹೆಚ್ಚು ಆರಾಮವಾಗಿರುತ್ತೀರಿ.
4. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಅನೇಕ ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಲಬದ್ಧತೆ ಮತ್ತು ಉಬ್ಬರದ ಸಮಸ್ಯೆಯಿಂದ ಬಳಲುತ್ತಾರೆ. ಅವರು ಮುಟ್ಟಿನ ಸಮಯದಲ್ಲಿ ಬೆಲ್ಲವನ್ನು ಸೇವಿಸಬೇಕು ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ.
ಇದನ್ನೂ ಓದಿ: ಗಂಟುನೋವಿಗೆ ಈ ಸೊಪ್ಪು ರಾಮಬಾಣ!
5. ಕಡುಬಯಕೆಯನ್ನು ಕಡಿಮೆ ಮಾಡುತ್ತದೆ
ಈ ಅವಧಿಯಲ್ಲಿ, ಹಾರ್ಮೋನುಗಳಲ್ಲಿನ ಬದಲಾವಣೆಗಳಿಂದಾಗಿ, ಕೆಲವು ಆಹಾರಗಳನ್ನು ತಿನ್ನುವ ಹಂಬಲವಿರುತ್ತದೆ. ಆಗ ಬೆಲ್ಲದ ಸೇವನೆ ಮಾಡುವುದರಿಂದ ಕಡುಬಯಕೆ ಕಡಿಮೆಯಾಗುತ್ತದೆ. ಪೌಷ್ಟಿಕತಜ್ಞರ ಪ್ರಕಾರ, ಋತುಚಕ್ರದ ಪ್ರಾರಂಭವಾಗುವ 4 ರಿಂದ 5 ದಿನಗಳ ಮುಂಚಿತವಾಗಿ ಬೆಲ್ಲವನ್ನು ಸೇವಿಸಲು ಪ್ರಾರಂಭಿಸಿ. ಈ ಬಾರಿ ಬೆಲ್ಲದ ಹ್ಯಾಕ್ ಟ್ರೈ ಮಾಡಿ ನೋಡಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: