
ಇತ್ತೀಚಿನ ದಿನಗಳಲ್ಲಿ ಜನರು ಪ್ಲಾಸ್ಟಿಕ್ ಕವರ್ ಮತ್ತು ಬಾಟಲಿಗಳ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಆದರೆ ಇದರಿಂದ ಪ್ಲಾಸ್ಟಿಕ್ ಮುಕ್ತ ಭಾರತ ನಮ್ಮದಾಗುತ್ತದೆ ಎಂಬುದು ತಪ್ಪು ಕಲ್ಪನೆ. ಮೈಕ್ರೋಪ್ಲಾಸ್ಟಿಕ್ ಕಣಗಳು ಈಗಾಗಲೇ ಎಲ್ಲೆಡೆ ಹರಡಿದ್ದು, ನಾವು ದಿನನಿತ್ಯ ಬಳಸುವ ಉಪ್ಪಿನಿಂದ ಹಿಡಿದು ಕುಡಿಯುವ ನೀರಿನವರೆಗೆ ಈ ಮೈಕ್ರೋಪ್ಲಾಸ್ಟಿಕ್‌ಗಳು (Microplastics) ನಮ್ಮ ಆಹಾರವನ್ನು ಪ್ರವೇಶಿಸಿದೆ. ಹಾಗಾಗಿ ಈ ಬಗ್ಗೆ ಇನ್ನಾದರೂ ಗಮನಹರಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾದರೆ ಮೈಕ್ರೋಪ್ಲಾಸ್ಟಿಕ್ ಕಣಗಳು ಹೇಗೆ ನಮ್ಮ ಆಹಾರದಲ್ಲಿ ಸೇರಿಕೊಳ್ಳುತ್ತದೆ, ಅವುಗಳಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ, ಅದನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ತಿಳಿಯುವುದು ಬಹಳ ಅನಿವಾರ್ಯ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.
5 ಮಿಲಿಮೀಟರ್‌ಗಿಂತ ಚಿಕ್ಕದಾದ ಪ್ಲಾಸ್ಟಿಕ್ ಕಣಗಳನ್ನು ಮೈಕ್ರೋಪ್ಲಾಸ್ಟಿಕ್ ಎನ್ನಲಾಗುತ್ತದೆ. ಕೈಗಾರಿಕಾ ತ್ಯಾಜ್ಯ, ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ಆಹಾರ ಸಂಗ್ರಹಣೆ, ಜಲ ಮಾಲಿನ್ಯ ಹೀಗೆ ನಾನಾ ರೀತಿಯ ಕಾರಣಗಳಿಂದ, ಅವು ನಮ್ಮ ಆಹಾರ ಸರಪಳಿಯನ್ನು ಪ್ರವೇಶಿಸುತ್ತಿವೆ. ಪ್ಯಾಕ್ ಮಾಡಿದ ಆಹಾರಗಳಲ್ಲಿ ಅವುಗಳ ಸಾಂದ್ರತೆ ಹೆಚ್ಚಾಗಿದ್ದು ಇವುಗಳನ್ನು ತಡೆಗಟ್ಟಲು, ಆಹಾರ ಶೇಖರಣಾ ವಿಧಾನಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ.
ಮೀನು ಮತ್ತು ಸೀಗಡಿ ತಿನ್ನಲು ಇಷ್ಟಪಡುವವರು ಸೀಗಡಿಗಳಂತಹ ಚಿಪ್ಪುಗಳನ್ನು ಹೊಂದಿರುವ ಜೀವಿಗಳು ಸಮುದ್ರದಿಂದ ಹೆಚ್ಚು ಮೈಕ್ರೋಪ್ಲಾಸ್ಟಿಕ್‌ಗಳನ್ನು ಹೀರಿಕೊಳ್ಳುತ್ತವೆ. ಹಾಗಾಗಿ ಚಿಕ್ಕ ಮಿನುಗಳಿಗಿಂತ ದೊಡ್ಡ ಮೀನುಗಳ ಆಯ್ಕೆ ಮಾಡುವುದು ಸುರಕ್ಷಿತವಾಗಿದೆ.
ಅಡುಗೆಯಲ್ಲಿ ಬಳಸುವ ಸಮುದ್ರದ ಉಪ್ಪಿನಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಹೊಂದಿರುತ್ತದೆ. ಹಾಗಾಗಿ ಅಯೋಡಿಕರಿಸಿದ ಉಪ್ಪು ಅಥವಾ ಸಾಕಷ್ಟು ಶುದ್ಧೀಕರಿಸಿದ ಉಪ್ಪನ್ನು ಆಯ್ಕೆ ಮಾಡುವುದು ಒಳ್ಳೆಯದು. ಸಾಧ್ಯವಾದಷ್ಟು ನೈಸರ್ಗಿಕ ವಿಧಾನಗಳನ್ನು ಬಳಸಿ ತಯಾರಿಸಿದ ಉಪ್ಪಿಗೆ ಆದ್ಯತೆ ನೀಡುವುದು ಸೂಕ್ತ.
ಅನೇಕರು ಪ್ರಯಾಣ ಮಾಡುವಾಗ ಪ್ಲಾಸ್ಟಿಕ್ ಬಾಟಲಿಗಳನ್ನು ಖರೀದಿಸಿ ಅದರಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುತ್ತಾರೆ. ಆದರೆ ಆ ಬಾಟಲಿಗಳಿಂದ ಮೈಕ್ರೋಪ್ಲಾಸ್ಟಿಕ್‌ಗಳು ನೀರಿನಲ್ಲಿ ಬೆರೆತುಹೋಗಿರುತ್ತದೆ. ಬದಲಾಗಿ, ಕಾರ್ಬನ್ ಅಥವಾ ಯುಎಫ್ ಫಿಲ್ಟರ್‌ಗಳ ಮೂಲಕ ಫಿಲ್ಟರ್ ಮಾಡಿದ ನೀರನ್ನು ಕುಡಿಯುವುದು ಉತ್ತಮ. ಈ ನೀರನ್ನು ಸಂಗ್ರಹಿಸಲು, ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ಸ್ಟೇನ್‌ಲೆಸ್ ಸ್ಟೀಲ್ ಬಾಟಲಿಗಳು ಅಥವಾ ಮಣ್ಣಿನ ಮಡಕೆಗಳನ್ನು ಬಳಸಬಹುದು.
ಇದನ್ನೂ ಓದಿ: ಪಾದಗಳು ತಣ್ಣಗಾಗುವುದಕ್ಕೆ ಮಧುಮೇಹ ಕಾರಣವೇ? ಇಲ್ಲಿದೆ ಸ್ಪಷ್ಟ ಮಾಹಿತಿ
ಜೇನುತುಪ್ಪವನ್ನು ಶುದ್ಧೀಕರಿಸಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪ್ಯಾಕ್ ಮಾಡುವ ಪ್ರಕ್ರಿಯೆಯಲ್ಲಿ, ಪ್ಲಾಸ್ಟಿಕ್ ಕಣಗಳು ಅದರೊಳಗೆ ಹೋಗುತ್ತವೆ. ಆದ್ದರಿಂದ, ಗಾಜಿನ ಜಾಡಿಗಳಲ್ಲಿ ಲಭ್ಯವಿರುವ ಜೇನುತುಪ್ಪವನ್ನು ಮಾತ್ರ ಬಳಸಬೇಕು. ಅದೇ ರೀತಿ, ಟೀ ಬ್ಯಾಗ್‌ಗಳ ಬಗ್ಗೆಯೂ ಬಹಳ ಜಾಗರೂಕರಾಗಿರಬೇಕು. ನೈಲಾನ್‌ನಿಂದ ಮಾಡಿದ ಟೀ ಬ್ಯಾಗ್‌ಗಳು ಬಿಸಿ ನೀರಿನಲ್ಲಿ ಮುಳುಗಿಸಿದಾಗ ಮೈಕ್ರೋಪ್ಲಾಸ್ಟಿಕ್‌ಗಳನ್ನು ಬಿಡುಗಡೆ ಮಾಡುತ್ತವೆ. ಅದಕ್ಕಾಗಿಯೇ ಚಹಾ ಪುಡಿಗಳನ್ನು ನೇರವಾಗಿ ನೀರಿನಲ್ಲಿ ಕುದಿಸುವುದು ಆರೋಗ್ಯಕರ.
ಮೈಕ್ರೋಪ್ಲಾಸ್ಟಿಕ್‌ಗಳು ನಮ್ಮ ಕಣ್ಣಿಗೆ ಕಾಣದೆ ಆರೋಗ್ಯ ಹಾಳು ಮಾಡುತ್ತದೆ. ಹಾಗಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ, ನಾವು ಇಂತಹ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಬಹುದು. ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಗಾಜು ಅಥವಾ ಸ್ಟೀಲ್ ಪಾತ್ರೆಗಳನ್ನು ಬಳಸುವುದರಿಂದ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ