ಮಾನಸಿಕ ಒತ್ತಡದಿಂದ ಮೈಗ್ರೇನ್ ಬರುತ್ತಾ?

|

Updated on: Sep 22, 2023 | 4:23 PM

What is Migraine: ಮೈಗ್ರೇನ್ ಹೊಂದಿರುವ 5 ಜನರಲ್ಲಿ 4 ಜನರು ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ. ಹಾಗೇ, ಅತಿಯಾದ ಒತ್ತಡದ ನಂತರ ವಿಶ್ರಾಂತಿ ಪಡೆದಾದ ಬಳಿಕವೂ ಈ ಮೈಗ್ರೇನ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಮೈಗ್ರೇನ್ ತಲೆನೋವಿನ ಲಕ್ಷಣಗಳು ಹೀಗಿವೆ.

ಮಾನಸಿಕ ಒತ್ತಡದಿಂದ ಮೈಗ್ರೇನ್ ಬರುತ್ತಾ?
ಮೈಗ್ರೇನ್
Image Credit source: iStock
Follow us on

ತಲೆಯ ಒಂದು ಭಾಗದಲ್ಲಿ ಆಗಾಗ ವಿಪರೀತ ತಲೆನೋವು ಕಾಣಿಸಿಕೊಳ್ಳುವುದನ್ನು ಮೈಗ್ರೇನ್ ಎನ್ನಲಾಗುತ್ತದೆ. ಈ ಮೈಗ್ರೇನ್ ತಲೆನೋವಿಗೆ ಕಾರಣವೇನು ಎಂದು ತಜ್ಞರಿಗೂ ಖಚಿತವಾಗಿ ತಿಳಿದಿಲ್ಲ. ಆದರೆ 5ರಲ್ಲಿ 4 ಜನರು ಮಾನಸಿಕ ಒತ್ತಡ ಹೆಚ್ಚಾದಾಗ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಮೈಗ್ರೇನ್ ಒಂದು ನರವೈಜ್ಞಾನಿಕ ಸ್ಥಿತಿಯಾಗಿದ್ದು ಅದು ನಿಮ್ಮ ತಲೆಯ ಒಂದು ಅಥವಾ ಎರಡೂ ಬದಿಗಳಲ್ಲಿ ವಿಪರೀತ ನೋವು ಉಂಟುಮಾಡಬಹುದು. ನೋವು ಹೆಚ್ಚಾಗಿ ಬುರುಡೆಯ ಸುತ್ತಲೂ ಅಥವಾ ಒಂದು ಕಣ್ಣಿನ ಹಿಂದೆ ಕಂಡುಬರುತ್ತದೆ. ಈ ನೋವು ಗಂಟೆಗಳಿಂದ ದಿನಗಳವರೆಗೆ ಇರುತ್ತದೆ.

ಮೈಗ್ರೇನ್ ಬಂದಾಗ ಉಂಟಾಗುವ ಇತರ ರೋಗಲಕ್ಷಣಗಳು ವಾಕರಿಕೆ, ವಾಂತಿ ಮತ್ತು ಬೆಳಕನ್ನು ನೋಡಲು ಸಾಧ್ಯವಾಗದಿರುವುದು. ಅಮೇರಿಕನ್ ಹೆಡ್ಏಕ್ ಸೊಸೈಟಿಯ ಪ್ರಕಾರ, ಮೈಗ್ರೇನ್ ಹೊಂದಿರುವ 5 ಜನರಲ್ಲಿ 4 ಜನರು ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ. ಹಾಗೇ, ಅತಿಯಾದ ಒತ್ತಡದ ನಂತರ ವಿಶ್ರಾಂತಿ ಪಡೆದಾದ ಬಳಿಕವೂ ಈ ಮೈಗ್ರೇನ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: Home remedies for migraine: ನಿಮ್ಮ ಪಾದಗಳನ್ನು ಬಿಸಿ ನೀರಿನಲ್ಲಿ ನೆನೆಸುವುದರಿಂದ ಮೈಗ್ರೇನ್ ಕಡಿಮೆಯಾಗುತ್ತಾ?

ಮೆದುಳಿನಲ್ಲಿನ ಸಿರೊಟೋನಿನ್‌ನಂತಹ ಕೆಲವು ರಾಸಾಯನಿಕಗಳ ಮಟ್ಟದಲ್ಲಿನ ಬದಲಾವಣೆಗಳಿಂದ ಮೈಗ್ರೆನ್ ಉಂಟಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಸಿರೊಟೋನಿನ್ ನೋವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒತ್ತಡವು ನಿಮಗೆ ಮೈಗ್ರೇನ್ ಪ್ರಚೋದಕವಾಗಿದ್ದರೆ, ನಿಮ್ಮ ಒತ್ತಡವನ್ನು ಕಡಿಮೆ ಮಾಡುವ ಮಾರ್ಗಗಳನ್ನು ಕಂಡುಹಿಡಿಯುವುದು ಅಗತ್ಯ. ಒತ್ತಡವನ್ನು ಕಡಿಮೆ ಮಾಡುವುದರಿಂದ ನಿಮ್ಮ ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು ಎಂದು ಅಮೇರಿಕನ್ ಮೈಗ್ರೇನ್ ಫೌಂಡೇಶನ್ ಹೇಳುತ್ತದೆ.

ಮೈಗ್ರೇನ್ ಬರುವ ಮೊದಲು ನೀವು ಒತ್ತಡದ ಲಕ್ಷಣಗಳನ್ನು ಗಮನಿಸಬಹುದು. ಒತ್ತಡದ ಸಾಮಾನ್ಯ ಲಕ್ಷಣಗಳೆಂದರೆ:

– ಹೊಟ್ಟೆ ಉರಿ

– ಸ್ನಾಯು ನೋವು

– ಸಿಡುಕುತನ

– ಆಯಾಸ

– ಎದೆ ನೋವು

– ತೀವ್ರ ರಕ್ತದೊತ್ತಡ

– ದುಃಖ ಅಥವಾ ಖಿನ್ನತೆಯ ಭಾವನೆ

– ಏಕಾಗ್ರತೆಯ ಕೊರತೆ

ಇದನ್ನೂ ಓದಿ: Migraine Headache: ಮೈಗ್ರೇನ್ ತಲೆ ನೋವಿನ ಕಿರಿಕಿರಿಯಿಂದ ಮುಕ್ತಿಗೆ ಇಲ್ಲಿದೆ ಸರಳ ಪರಿಹಾರ

ಮೈಗ್ರೇನ್‌ನ ಕೆಲವು ಲಕ್ಷಣಗಳು ಮೈಗ್ರೇನ್ ಶುರುವಾಗುವುದಕ್ಕೂ ಒಂದು ದಿನ ಅಥವಾ ಎರಡು ದಿನಗಳ ಮೊದಲು ಪ್ರಾರಂಭವಾಗಬಹುದು. ಇದನ್ನು ಪ್ರೋಮೋನಿಟರಿ ಹಂತ ಅಥವಾ ಪ್ರೋಡ್ರೋಮ್ ಹಂತ ಎಂದು ಕರೆಯಲಾಗುತ್ತದೆ. ಈ ಹಂತದ ಲಕ್ಷಣಗಳೆಂದರೆ:

– ಆಯಾಸ

– ಅತಿಯಾಗಿ ತಿನ್ನಬೇಕೆನಿಸುವುದು

– ಮನಸ್ಥಿತಿ ಬದಲಾವಣೆಗಳು

– ಬೆಳಕನ್ನು ನೋಡಲಾಗದೆ ಇರುವುದು

– ಆಕಳಿಕೆ

– ಮುಖ, ತೋಳುಗಳು ಅಥವಾ ಕಾಲುಗಳಲ್ಲಿ ಜುಮ್ಮೆನ್ನುವುದು

– ಮಾತನಾಡಲು ತೊಂದರೆ

– ಕಣ್ಣು ಮಂಜಾಗುವುದು

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ