Home remedies for migraine: ನಿಮ್ಮ ಪಾದಗಳನ್ನು ಬಿಸಿ ನೀರಿನಲ್ಲಿ ನೆನೆಸುವುದರಿಂದ ಮೈಗ್ರೇನ್ ಕಡಿಮೆಯಾಗುತ್ತಾ?

ಮೈಗ್ರೇನ್ ತಲೆನೋವು ನಿಮ್ಮನ್ನು ದುರ್ಬಲಗೊಳಿಸುತ್ತದೆ ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಗಬಹುದು. ಆದರೆ ನೋವಿನಿಂದ ಪರಿಹಾರ ಪಡೆಯಲು ತ್ವರಿತ ಹ್ಯಾಕ್ ಇದೆ ಎಂಬುದು ನಿಮಗೆ ತಿಳಿದಿದೆಯಾ? ಮೈಗ್ರೇನ್ ಕಡಿಮೆಯಾಗಲು ಈ ಮನೆಮದ್ದನ್ನು ಪ್ರಯತ್ನಿಸಿ.

Home remedies for migraine: ನಿಮ್ಮ ಪಾದಗಳನ್ನು ಬಿಸಿ ನೀರಿನಲ್ಲಿ ನೆನೆಸುವುದರಿಂದ ಮೈಗ್ರೇನ್ ಕಡಿಮೆಯಾಗುತ್ತಾ?
Home remedies for migraine
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Sep 10, 2023 | 5:51 AM

ಇತ್ತೀಚಿನ ದಿನಗಳಲ್ಲಿ ಮೈಗ್ರೇನ್ ಎನ್ನುವುದು ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಹೀಗೆ ತಲೆನೋವು ಬಂದಾಗ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಬದಲು ಅದು ಮರುಕಳಿಸಿದಂತೆ ತಡೆಯುವುದು ಸೂಕ್ತ. ಹಾಗಾಗಿ ಅವು ಕಾಣಿಸಿಕೊಂಡ ಪೂರ್ವದಲ್ಲಿಯೇ ಮನೆ ಮದ್ದು ಮಾಡುವುದರಿಂದ ಮೈಗ್ರೇನ್ ನಿಂದ ಮುಕ್ತಿ ಪಡೆಯಬಹುದು. ಇಲ್ಲವಾದಲ್ಲಿ ಅವು ನಿಮ್ಮ ದಿನವನ್ನು ಹಾಳು ಮಾಡುವುದರ ಜೊತೆಗೆ ನಿಮ್ಮನ್ನು ದುರ್ಬಲಗೊಳಿಸುತ್ತವೆ. ಕೆಲವೊಮ್ಮೆ ನೋವು, ನಿರಂತರ ವಾಕರಿಕೆಯ ಅನುಭವವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಇದಕ್ಕೆಲ್ಲಾ ಸರಳ ಉಪಾಯವಿದೆ. ಏನದು? ಇಲ್ಲಿದೆ ಮಾಹಿತಿ.

ಇತ್ತೀಚೆಗೆ, ಯುನೈಟೆಡ್ ಸ್ಟೇಟ್ಸ್ನ ಮೇರಿಲ್ಯಾಂಡ್ನಲ್ಲಿ ಇಂಟರ್ವೆನ್ಷನಲ್ ಪೇನ್ ಡಾಕ್ಟರ್ ಆಗಿರುವ ಡಾ. ಕುನಾಲ್ ಸೂದ್ ಅವರು ಈ ಬಗ್ಗೆ ಒಂದು ಪೋಸ್ಟ್ ಹಂಚಿಕೊಂಡಿದ್ದು, ತಲೆನೋವು ಕಾಣಿಸಿಕೊಂಡಾಗ, ಬಿಸಿ ನೀರಿನಲ್ಲಿ ಪಾದಗಳನ್ನು ನೆನೆಸುವುದು ಮೈಗ್ರೇನ್ಗೆ ಹೇಗೆ ಪರಿಹಾರ ನೀಡಲಿದೆ ಎಂದು ಹೇಳಿದ್ದಾರೆ.

ಮೈಗ್ರೇನ್ ಗೆ ತ್ವರಿತ ಮನೆಮದ್ದು:

ಮೈಗ್ರೇನ್ ನಂತಹ ತಲೆನೋವು ಅಸ್ವಸ್ಥತೆಗಳು ಅಂಗವೈಕಲ್ಯಕ್ಕೆ ಮೂರನೇ ಸಾಮಾನ್ಯ ಕಾರಣವಾಗಿದೆ ಎಂದು ನಿಮಗೆ ತಿಳಿದಿದೆಯೇ? ಇದು ಬಹಳಷ್ಟು ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ಮೈಗ್ರೇನ್ ತಲೆನೋವು ಮೆದುಳಿನ ಒಂದು ಬದಿಯಲ್ಲಿ ಮಧ್ಯಮದಿಂದ ತೀವ್ರವಾದ ನೋವಿನ ಪುನರಾವರ್ತಿತ ಪ್ರಕ್ರಿಯೆಯಾಗಿದೆ. ವಾಕರಿಕೆ, ಮಸುಕಾದ ದೃಷ್ಟಿ, ಆಯಾಸ, ಮನಸ್ಥಿತಿ ಬದಲಾವಣೆಗಳು, ಬೆಳಕು ಅಥವಾ ಶಬ್ದಕ್ಕೆ ಹೆಚ್ಚಿದ ಸಂವೇದನೆ ಮತ್ತು ಗೊಂದಲಗಳು ಮೈಗ್ರೇನ್ನ ಸಾಮಾನ್ಯ ಲಕ್ಷಣಗಳಾಗಿವೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂರೋಲಾಜಿಕಲ್ ಡಿಸಾರ್ಡರ್ಸ್ ಅಂಡ್ ಸ್ಟ್ರೋಕ್ ಹೇಳಿದೆ.

ಬಹಳಷ್ಟು ಜನರು ಈ ನೋವಿನಿಂದ ಮುಕ್ತಿ ಪಡೆಯಲು ಅನೇಕ ಮನೆಮದ್ದುಗಳನ್ನು ಪ್ರಯತ್ನಿಸಿದ್ದಾರೆ. ಆದರೆ ನಿಮ್ಮ ಪಾದಗಳನ್ನು ಬಿಸಿ ನೀರಿನಲ್ಲಿ ನೆನೆಸುವುದು ಕೂಡ ಮೈಗ್ರೇನ್ ಕಡಿಮೆ ಮಾಡಲು ಇರುವ ಸರಳ ಮನೆಮದ್ದಾಗಿದೆ. ಇದು ಜನರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೇ, ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.

ತಜ್ಞರ ಪ್ರಕಾರ, ಮೈಗ್ರೇನ್ ನೋವು ಮೆದುಳಿನ ಕೋಶಗಳ ಗುಂಪಿನ ಚಟುವಟಿಕೆಯ ಅಲೆಗಳಿಂದ ಉಂಟಾಗುತ್ತದೆ. ಇವು ಸಿರೊಟೋನಿನ್ ನಂತಹ ಕೆಲವು ನರಪ್ರೇಕ್ಷಕಗಳನ್ನು ಪ್ರಚೋದಿಸುತ್ತವೆ, ಇದರಿಂದಾಗಿ ರಕ್ತದ ಅಪಧಮನಿಗಳು ಕಿರಿದಾಗುತ್ತವೆ, ಇದು ನಿಮ್ಮ ತಲೆಯ ಒಂದು ಬದಿಯಲ್ಲಿ ನೋವನ್ನು ಉಂಟುಮಾಡುತ್ತದೆ. ಡಾ. ಸೂದ್ ಅವರು ಹೇಳುವ ಪ್ರಕಾರ, ನಿಮ್ಮ ಪಾದಗಳನ್ನು ಬಿಸಿ ನೀರಿನಲ್ಲಿ ನೆನೆಸುವುದರಿಂದ ರಕ್ತ ಪರಿಚಲನೆ ಸರಿಯಾದ ರೀತಿಯಲ್ಲಿ ಆಗಿ, ನಿಮ್ಮ ಪಾದಗಳಲ್ಲಿನ ರಕ್ತನಾಳಗಳು ಹಿಗ್ಗುತ್ತವೆ ಎಂದು ವಿವರಿಸುತ್ತಾರೆ. ಇದು ರಕ್ತನಾಳಗಳ ಮೇಲಿನ ಒತ್ತಡವನ್ನು ಸರಾಗಗೊಳಿಸುತ್ತದೆ, ನಿಮ್ಮ ತಲೆನೋವನ್ನು ಕಡಿಮೆ ಮಾಡುತ್ತದೆ. ಈ ಹ್ಯಾಕ್ ನಿಜವಾಗಿಯೂ ಕಾರ್ಯನಿರ್ವಹಿಸುತ್ತದೆ. ನೀವು ಮನೆಯಲ್ಲಿಯೇ ಪ್ರಯತ್ನಿಸಿ ನೋಡಿ.

ಮೈಗ್ರೇನ್ ಗೆ ಈ ಮನೆಮದ್ದಿನಿಂದ ಯಾವುದೇ ಅಡ್ಡಪರಿಣಾಮಗಳು ಇವೆಯೇ?

ಬಿಸಿ ನೀರಿನಲ್ಲಿ ಪಾದಗಳನ್ನು ನೆನೆಸುವುದು ವಿಶ್ರಾಂತಿ ಪಡೆಯಲು ಅತ್ಯಂತ ಹಳೆಯ ಮಾರ್ಗಗಳಲ್ಲಿ ಒಂದಾಗಿದೆ. ಆದರೆ ಇದು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುವುದಕ್ಕಿಂತ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇದು ಮೈಗ್ರೇನ್ ನಿಂದ ಪರಿಹಾರ ಕಂಡುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಪಾದಗಳನ್ನು ಬಿಸಿ ನೀರಿನಲ್ಲಿ ನೆನೆಸುವುದು ನಿಜವಾಗಿಯೂ ಸಹಾಯ ಮಾಡುತ್ತದೆ ಮತ್ತು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ ಎಂದು ಡಾ. ಸೂದ್ ಹೇಳುತ್ತಾರೆ. ಆದ್ದರಿಂದ, ನೀವು ಯಾವುದೇ ಚಿಂತೆಯಿಲ್ಲದೆ ಈ ವಿಧಾನವನ್ನು ಮನೆಯಲ್ಲಿ ಮಾಡಬಹುದು. ಮೈಗ್ರೇನ್ ನಿಮ್ಮನ್ನು ಕಾಡುತ್ತಿದ್ದರೆ ಮತ್ತು ನೀವು ನೋವನ್ನು ಶಮನಗೊಳಿಸುವ ಮಾರ್ಗವನ್ನು ಹುಡುಕುತ್ತಿದ್ದರೆ, ನಿಮ್ಮ ಪಾದಗಳನ್ನು ಬಿಸಿ ನೀರಿನಲ್ಲಿ ನೆನೆಸುವುದು ಉತ್ತಮ ಮಾರ್ಗವಾಗಿದೆ. ಈ ಮಾಂತ್ರಿಕ ಪರಿಹಾರವನ್ನು ಪ್ರಯತ್ನಿಸಿ, ಆದರೆ ಆ ಮೊದಲು ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್