ಹೆಚ್ಚು ಸೋಡಿಯಂ ಸೇವಿಸುವುದರಿಂದ ಮೈಗ್ರೇನ್ ಕಡಿಮೆಯಾಗುತ್ತಾ?

ಕೆಲವು ಅಧ್ಯಯನಗಳು ಸೋಡಿಯಂ ಮಟ್ಟ ಹೆಚ್ಚಿಸುವುದರಿಂದ ಮೈಗ್ರೇನ್ ಸಮಸ್ಯೆ ಕೊಂಚ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿಸಿದೆ. ನಾವು ಕಡಿಮೆ ಸೋಡಿಯಂ ಸೇವಿಸುವುದರಿಂದ ನಿರ್ಜಲೀಕರಣ ಉಂಟಾಗುತ್ತದೆ.

ಹೆಚ್ಚು ಸೋಡಿಯಂ ಸೇವಿಸುವುದರಿಂದ ಮೈಗ್ರೇನ್ ಕಡಿಮೆಯಾಗುತ್ತಾ?
ಸಾಂದರ್ಭಿಕ ಚಿತ್ರ
Follow us
|

Updated on: Sep 04, 2023 | 4:02 PM

ಇತ್ತೀಚಿನ ದಿನಗಳಲ್ಲಿ ಮೈಗ್ರೇನ್ (Migraine) ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಈ ತೀವ್ರವಾದ ತಲೆನೋವನ್ನು ಸಹಿಸಲು ಅಸಾಧ್ಯವಾಗಿರುತ್ತದೆ. ಕೆಲವರು ಇದಕ್ಕೆ ಔಷಧಿ ಪಡೆಯುತ್ತಾರೆ, ಇನ್ನು ಕೆಲವರು ತನ್ನಷ್ಟಕ್ಕೆ ಗುಣವಾಗುತ್ತದೆ ಎಂದು ನಿರ್ಲಕ್ಷ್ಯ ತೋರುತ್ತಾರೆ. ಮೈಗ್ರೇನ್ ಅಥವಾ ತೀವ್ರ ತಲೆನೋವು (Headache)  ವಿಶ್ವಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿದೆ. ಕೆಲವರು ಸೋಡಿಯಂ ಪ್ರಮಾಣವನ್ನು ಹೆಚ್ಚು ಸೇವಿಸಿದರೆ ಮೈಗ್ರೇನ್ ಬೇಗ ಗುಣವಾಗುತ್ತದೆ ಎಂದು ಸೋಡಿಯಂ ಸೇವನೆಯನ್ನು ಹೆಚ್ಚಿಸುತ್ತಾರೆ.

ಆದರೆ, ಸೋಡಿಯಂ ಸೇವನೆಯಿಂದ ನಿಜಕ್ಕೂ ಮೈಗ್ರೇನ್ ಕಡಿಮೆಯಾಗುತ್ತದಾ? ಎಂಬ ಗೊಂದಲ ಮೂಡುವುದು ಸಹಜ. ಕೆಲವು ಅಧ್ಯಯನಗಳು ಸೋಡಿಯಂ ಮಟ್ಟ ಹೆಚ್ಚಿಸುವುದರಿಂದ ಮೈಗ್ರೇನ್ ಸಮಸ್ಯೆ ಕೊಂಚ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿಸಿದೆ. ಸೋಡಿಯಂ ರಕ್ತದ ಪರಿಮಾಣದ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ರಕ್ತದ ಸಂಚಲನ ವೇಗ ಪಡೆಯುತ್ತದೆ. ಆದರೆ, ಸೋಡಿಯಂ ಸೇವನೆಗೂ, ಮೈಗ್ರೇನ್​ಗೂ ಸಂಬಂಧವಿದೆಯಾ ಎಂಬ ಬಗ್ಗೆ ಯಾವುದೇ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿಲ್ಲ.

ಇದನ್ನೂ ಓದಿ: ಬೇಸಿಗೆಯಲ್ಲಿ ಮೈಗ್ರೇನ್ ಸಮಸ್ಯೆ ಹೆಚ್ಚಾಗಿದೆಯೇ? ತಜ್ಞರು ನೀಡಿರುವ ಸಲಹೆ ಪಾಲಿಸಿ

ಏನಿದು ಮೈಗ್ರೇನ್?: ಮೈಗ್ರೇನ್ ಬಂದಾಗ ವಾಕರಿಕೆ, ವಾಂತಿ, ತಲೆ ತಿರುಗುವಿಕೆ, ಬೆಳಕು ಕಣ್ಣಿಗೆ ಬಿದ್ದಾಗ ಮತ್ತು ದೊಡ್ಡ ಶಬ್ದ ಕೇಳಿದಾಗ ತಲೆ ಸಿಡಿದು ಹೋಗುವ ಅನುಭವವಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ ಮೈಗ್ರೇನ್ ಎಂಬುದು ನರಕ್ಕೆ ಸಂಬಂಧಿಸಿದ ರೋಗವಾಗಿದೆ. ಮೈಗ್ರೇನ್ ಸಮಸ್ಯೆ ಹೊಂದಿರುವ ಜನರು, ತಿಂಗಳಲ್ಲಿ ಹಲವು ಬಾರಿ ಮೈಗ್ರೇನ್ ನೋವು ಅನುಭವಿಸುತ್ತಾರೆ. ಮೈಗ್ರೇನ್‌ ಕೆಲವರಿಗೆ ದೀರ್ಘ ಕಾಲದವರೆಗೆ ತೊಂದರೆ ನೀಡಿದರೆ ಇನ್ನು ಕೆಲವರಿಗೆ ಆಗಾಗ ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: Migraine Headache: ಮೈಗ್ರೇನ್ ತಲೆ ನೋವಿನ ಕಿರಿಕಿರಿಯಿಂದ ಮುಕ್ತಿಗೆ ಇಲ್ಲಿದೆ ಸರಳ ಪರಿಹಾರ

ನಾವು ಕಡಿಮೆ ಸೋಡಿಯಂ ಸೇವಿಸುವುದರಿಂದ ನಿರ್ಜಲೀಕರಣ ಉಂಟಾಗುತ್ತದೆ ಎಂದು ಒಂದು ಸಿದ್ಧಾಂತವು ಸೂಚಿಸುತ್ತದೆ. ಇದರಿಂದ ವ್ಯಕ್ತಿಗಳಲ್ಲಿ ತಲೆನೋವು ಅಥವಾ ಮೈಗ್ರೇನ್ ಹೆಚ್ಚಾಗುತ್ತದೆ. ಆದರೆ, ಅತಿಯಾದ ಸೋಡಿಯಂ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ತಲೆನೋವು ಅಥವಾ ಮೈಗ್ರೇನ್‌ಗಳನ್ನು ಅನುಭವಿಸುವ ವ್ಯಕ್ತಿಗಳು ವೈಯಕ್ತಿಕ ಸಲಹೆಗಾಗಿ ವೈದ್ಯರನ್ನು ಸಂಪರ್ಕಿಸಬೇಕು. ಕೆಲವು ಆಹಾರ ಪದ್ಧತಿಗಳು ಮೈಗ್ರೇನ್ ತಡೆಗಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಅವುಗಳನ್ನು ನಿಮ್ಮ ಡಯೆಟ್​ನಲ್ಲಿ ಸೇರಿಸಿಕೊಳ್ಳುವುದರಿಂದ ನಿಮ್ಮ ಸಮಸ್ಯೆಯಿಂದ ಕೊಂಚ ಮಟ್ಟಿಗಿನ ಮುಕ್ತಿ ಪಡೆಯಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ