ಬೇಸಿಗೆಯಲ್ಲಿ ಸಾಕಷ್ಟು ಜನರಲ್ಲಿ ಹೆಚ್ಚಾಗಿ ಮೈಗ್ರೇನ್ ಸಮಸ್ಯೆ ಕಂಡುಬರುತ್ತದೆ. ಇದು ಕೇವಲ ಸಮಸ್ಯೆಯಾಗಿರದೇ ನಿಮ್ಮ ದೈನಂದಿನ ದಿನಚರಿಯಲ್ಲಿ ಅಡ್ಡಿಯುಂಟು ಮಾಡುತ್ತದೆ. ಬೇಸಿಗೆಯಲ್ಲಿ ಮೈಗ್ರೇನ್ ಸಮಸ್ಯೆ ಉಲ್ಬಣಗೊಳ್ಳಲು ಕಾರಣ ಮತ್ತು ಚಿಕಿತ್ಸೆಯ ಕುರಿತು ಆರೋಗ್ಯ ತಜ್ಞರಾದ ಡಾ ವಿಶಾಖಾ ಶಿವದಾಸನಿ ಮಾಹಿತಿ ನೀಡುತ್ತಾರೆ. ಸಾಮಾನ್ಯವಾಗಿ ತಲೆ ನೋವು ಎಂದಾಕ್ಷಣ ಈ ಮಾತ್ರೆಗಳನ್ನು ತೆಗೆದುಕೊಳ್ಳುವವರೇ ಹೆಚ್ಚು. ಆದರೆ ವಿಶೇಷವಾಗಿ ಬೇಸಿಗೆಯಲ್ಲಿ ಮಾತ್ರೆಗಳನ್ನು ಅತಿಯಾದ ತೆಗೆದುಕೊಳ್ಳುವ ಅಭ್ಯಾಸ ಬಿಟ್ಟು ಬಿಡಿ. ಬದಲಾಗಿ ಸಾಕಷ್ಟು ನೀರು ಕುಡಿಯಿರಿ ಎಂದು ತಜ್ಞರು ಸಲಹೆ ನೀಡುತ್ತಾರೆ. ನೀರಿನ ಜೊತೆಗೆ ಸ್ವಲ್ಪ ಉಪ್ಪು, ಸಕ್ಕರೆ ಹಾಗೂ ನಿಂಬೆ ರಸವನ್ನು ಸೇರಿಸಿ.
ಬೇಸಿಗೆಯಲ್ಲಿ ನಿಮ್ಮ ದೇಹದಕ್ಕೆ ಹೆಚ್ಚು ನೀರು ಬೇಕಾಗಿರುವುದು ನೀವು ಕನಿಷ್ಟ ಪಕ್ಷ 2 ಲೀಟರ್ ನೀರು ಕುಡಿಯುವುದು ಅಗತ್ಯ. ನೀವು ನೀರು ಕಡಿಮೆ ಕುಡಿದಂತೆ ಅದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ದೇಹವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ನಿರ್ಜಲೀಕರಣವು ಮೈಗ್ರೇನ್‌ಗೆ ಕಾರಣವಾಗಬಹುದು ಏಕೆಂದರೆ ಇದು ಮೆದುಳಿಗೆ ಕಡಿಮೆ ರಕ್ತ ಪೂರೈಕೆಗೆ ಕಾರಣವಾಗುತ್ತದೆ, ರಕ್ತನಾಳಗಳು ಕಿರಿದಾಗಲು ಮತ್ತು ನಂತರ ವಿಸ್ತರಿಸಲು ಕಾರಣವಾಗುತ್ತದೆ, ಇದರ ಪರಿಣಾಮವಾಗಿ ತಲೆನೋವು ಮತ್ತು ಮೈಗ್ರೇನ್ ಉಂಟಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ, ಮಗುವಿನ ಜನನದ ನಂತರ ತಾಯಂದಿರಲ್ಲಿ ಕಾಣುವ ಅಪಾಯದ ಅಂಶ? ನಿವಾರಿಸಲು ಇಲ್ಲಿದೆ ಸಲಹೆ
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: