Smallpox: ಬಿಹಾರದ 35 ಕುಟುಂಬಗಳ 100 ಕ್ಕೂ ಹೆಚ್ಚು ಜನರಲ್ಲಿ ಸಿಡುಬು ಪತ್ತೆ
ಬಿಹಾರದ ಸುಪೌಲ್ ಜಿಲ್ಲೆಯ ತ್ರಿವೇಣಿಗಂಜ್ ಗ್ರಾಮದಲ್ಲಿ 35 ಕುಟುಂಬಗಳ 100 ಕ್ಕೂ ಹೆಚ್ಚು ಜನರು ಸಿಡುಬು ಸೋಂಕಿಗೆ ಒಳಗಾಗಿದ್ದಾರೆ. ಸೋಂಕಿತರಲ್ಲಿ ಮಕ್ಕಳು ಮತ್ತು ವೃದ್ಧರೂ ಸೇರಿದ್ದಾರೆ ಎಂಬುದು ತಿಳಿದುಬಂದಿದೆ.
ಬಿಹಾರದ ಸುಪೌಲ್ ಜಿಲ್ಲೆಯ ತ್ರಿವೇಣಿಗಂಜ್ ಗ್ರಾಮದಲ್ಲಿ 35 ಕುಟುಂಬಗಳ 100 ಕ್ಕೂ ಹೆಚ್ಚು ಜನರು ಸಿಡುಬು ಸೋಂಕಿಗೆ ಒಳಗಾಗಿದ್ದಾರೆ. ಸೋಂಕಿತರಲ್ಲಿ ಮಕ್ಕಳು ಮತ್ತು ವೃದ್ಧರೂ ಸೇರಿದ್ದಾರೆ. ಆರೋಗ್ಯ ಇಲಾಖೆಯಿಂದ ಯಾವುದೇ ವೈದ್ಯಕೀಯ ಚಿಕಿತ್ಸೆ ಸಿಕ್ಕಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಸೋಂಕು ಹರಡುತ್ತಿದ್ದರೂ ಜಿಲ್ಲಾ ಆರೋಗ್ಯ ಇಲಾಖೆಗೆ ಸೋಮವಾರದವರೆಗೆ ರೋಗ ಹರಡುವ ಬಗ್ಗೆ ಮಾಹಿತಿ ಇರಲಿಲ್ಲ ಎಂಬುದು ತಿಳಿದುಬಂದಿದೆ. ಮಂಗಳವಾರ ವೈದ್ಯಕೀಯ ತಂಡವೊಂದು ಗ್ರಾಮಕ್ಕೆ ಆಗಮಿಸಿದೆ. ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳನ್ನು ಗುರುತಿಸಲು ಆರೋಗ್ಯ ಇಲಾಖೆಗೆ ಸಹಾಯ ಮಾಡಿದ್ದೇವೆ ಎಂದು ತ್ರಿವೇಣಿಗಂಜ್‌ನ ವಾರ್ಡ್ ಸಂಖ್ಯೆ 4 ರ ನಿವಾಸಿ ಮೊಹಮ್ಮದ್ ಇಸ್ಮೈಲ್ ಹೇಳಿದ್ದಾರೆ.
ರೋಗದ ಬಗ್ಗೆ ತಿಳಿದ ತಕ್ಷಣ, ಸೋಂಕಿತರಿಗೆ ಚಿಕಿತ್ಸೆ ನೀಡಲು ನಾವು ಗ್ರಾಮಕ್ಕೆ ವೈದ್ಯಕೀಯ ತಂಡವನ್ನು ಕಳುಹಿಸಿದ್ದೇವೆ. ಪ್ರಸ್ತುತ ರೋಗಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸುಪೌಲ್‌ನ ಸಿವಿಲ್ ಸರ್ಜನ್ ಡಾ ಮಿಹಿರ್ ಕುಮಾರ್ ಹೇಳಿದ್ದಾರೆ. ಜೆಹಾನಾಬಾದ್ ಸಂಸದ ಚಂದೇಶ್ವರ್ ಪ್ರಸಾದ್ ಚಂದ್ರವಂಶಿ ಅವರ ಪುತ್ರನ ಮಾಲೀಕತ್ವದ ಸಂಸ್ಥೆಗೆ ಪ್ಲಮ್ ಗುತ್ತಿಗೆ ನೀಡಿದ್ದಕ್ಕಾಗಿ ಬಿಹಾರದ ನಿತೀಶ್ ಕುಮಾರ್ ಸರ್ಕಾರವನ್ನು ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಒಂದು ತಿಂಗಳು ಅನ್ನ ಸೇವಿಸದಿದ್ದರೆ, ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? ತಜ್ಞರು ಹೇಳುವುದೇನು?
ತೀವ್ರ ಅಸ್ವಸ್ಥರು, ಗರ್ಭಿಣಿಯರು ಮತ್ತು ಶಿಶುಗಳಿಗೆ ಮೀಸಲಾದ ರಾಜ್ಯದ ಉಚಿತ ಆಂಬ್ಯುಲೆನ್ಸ್ ಸೇವೆಗಾಗಿ 1,600 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಮುಖ್ಯಮಂತ್ರಿ ಜೆಡಿಯುಗೆ ಸೇರಿದ ಚಂದ್ರವಂಶಿ ಅವರ ಮಗನಿಗೆ ನೀಡಲಾಗಿದೆ ಎಂದು ಅವರು ಪತ್ರಿಕೆಯ ವರದಿಯನ್ನು ಉಲ್ಲೇಖಿಸಿದರು. ಸರ್ಕಾರವು ಸಂಸದರಿಗೆ ಅನುಕೂಲವಾಗುವಂತೆ ರೋಗ ಪರಿಸ್ಥಿತಿಯನ್ನು ನಿರ್ಲಕ್ಷಿಸಿ ಕಂಪನಿಗೆ ಗುತ್ತಿಗೆ ನೀಡಿರುವುದು ಕಂಡುಬರುತ್ತದೆ. ಇದು ರಾಜ್ಯದ ಜನರ ಮೇಲೆ ನಡೆಯುತ್ತಿರುವ ಅನ್ಯಾಯ ಎಂದು ಪ್ರಸಾದ್ ಆರೋಪಿಸಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: