
ನಿಮಗೆ ಮಧುಮೇಹವಿರಲಿ ಅಥವಾ ಇಲ್ಲದಿರಲಿ, ಆರೋಗ್ಯಕರ ಆಹಾರವು ಯಾವಾಗಲೂ ನಿಮ್ಮ ದೇಹಕ್ಕೆ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಆದರೆ ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಆದ್ದರಿಂದ, ಮಧುಮೇಹ ಆಹಾರವು ಹೆಚ್ಚಾಗಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳಂತಹ ಆಹಾರಗಳನ್ನು ಒಳಗೊಂಡಿರುತ್ತದೆ. ಸಿಹಿ ತಿಂಡಿಗಳು ಮತ್ತು ಮಾಂಸಾಹಾರ ತಪ್ಪಿಸುವುದು ಉತ್ತಮ. ಮಧುಮೇಹಿಗಳು ಬೆಳಿಗ್ಗೆ ಉತ್ತಮ ಪಾನೀಯಗಳನ್ನು ಸೇವಿಸುವ ಮೂಲಕ ಅವರು ತಮ್ಮ ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸಬಹುದು. ಹಾಗಾದರೆ ಯಾವ ರೀತಿಯ ಪಾನೀಯಗಳು ಒಳ್ಳೆಯದು? ಈ ಬಗ್ಗೆ ತಜ್ಞರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ನೀವು ಮಧುಮೇಹಿಗಳಾಗಿದ್ದರೆ, ನಿಮ್ಮ ದಿನವನ್ನು ಕೆಲವು ಅತ್ಯುತ್ತಮ ಪಾನೀಯಗಳೊಂದಿಗೆ ಪ್ರಾರಂಭಿಸಬಹುದು. ಆದರೆ ಇವುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವ ಮೊದಲು ನಿಮ್ಮ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ.
ಸ್ವಲ್ಪ ನಿಂಬೆಯೊಂದಿಗೆ ಒಂದು ಲೋಟ ಬೆಚ್ಚಗಿನ ನೀರು ನಿರ್ವಿಷೀಕರಣಕ್ಕೆ ಸಹಾಯ ಮಾಡುತ್ತದೆ ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ, ಇದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ಲಕ್ನೋದ ರೀಜೆನ್ಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಂತರಿಕ ಔಷಧ ಸಲಹೆಗಾರ ಡಾ. ಡಿ.ಪಿ. ಸಿಂಗ್ ಹೇಳಿದ್ದಾರೆ.
ದಾಲ್ಚಿನ್ನಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಎಂದು ತಿಳಿದು ಬಂದಿದೆ, ಆದ್ದರಿಂದ ದಾಲ್ಚಿನ್ನಿಗಳನ್ನು ಚಹಾ ಕುದಿಸುವಾಗ ಹಾಕಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹಾಗಲ ಕಾಯಿಯಲ್ಲಿ ಇನ್ಸುಲಿನ್ ಕ್ರಿಯೆಯನ್ನು ಅನುಕರಿಸುವ ಸಂಯುಕ್ತಗಳಿವೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಇದನ್ನು ಸೇವಿಸುವುದು ವಿಶೇಷವಾಗಿ ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ.
ಮೆಂತ್ಯ ಬೀಜಗಳಲ್ಲಿ ಕರಗುವ ಫೈಬರ್ ಸಮೃದ್ಧವಾಗಿದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಆ ನೀರನ್ನು ಕುಡಿಯಬಹುದು.
ಭಾರತೀಯ ನೆಲ್ಲಿಕಾಯಿ ಎಂದೂ ಕರೆಯಲ್ಪಡುವ ಆಮ್ಲಾ ವಿಟಮಿನ್ ಸಿ ಸಮೃದ್ಧ ಹಣ್ಣು, ಇದು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಇದು ಮಧುಮೇಹಿಗಳಿಗೆ ಒಳ್ಳೆಯ ಆಯ್ಕೆಯಾಗಿದೆ.
ಅಲೋವೆರಾ ಚರ್ಮಕ್ಕೆ ಒಳ್ಳೆಯದು, ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಹೈಪೊಗ್ಲೈಸೆಮಿಕ್ ಪರಿಣಾಮಗಳನ್ನು ಸಹ ಹೊಂದಿದೆ, ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಪ್ರಮಾಣದ ಅಲೋವೆರಾ ರಸವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ತುಳಸಿ ಎಲೆಗಳು ಮಧುಮೇಹ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ, ಆದ್ದರಿಂದ ತಾಜಾ ತುಳಸಿ ಎಲೆಗಳನ್ನು ಚಹಾದಲ್ಲಿ ಹಾಕಿ, ಸ್ವಲ್ಪ ಕುದಿಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಆರೋಗ್ಯಕರ ಸ್ಮೂಥಿಯನ್ನು ತಯಾರಿಸಲು ನೀವು ಕೇಲ್ ಅಥವಾ ಪಾಲಕ್ ನಂತಹ ಹಸಿರು ತರಕಾರಿಗಳನ್ನು ಪ್ರೋಟೀನ್ ಪುಡಿಯೊಂದಿಗೆ ಬಳಸಬಹುದು. ಇದು ನಿಮ್ಮನ್ನು ಹೈಡ್ರೇಟ್ ಆಗಿರಿಸುವುದರ ಹೊರತಾಗಿ ಹೆಚ್ಚುವರಿ ಫೈಬರ್ ಮತ್ತು ಪೋಷಕಾಂಶಗಳನ್ನು ನೀಡುತ್ತದೆ.
ಖಾಲಿ ಹೊಟ್ಟೆಯಲ್ಲಿ, ಈ ಪಾನೀಯಗಳ ಪರಿಣಾಮಕಾರಿತ್ವವು ಹೆಚ್ಚಾಗುತ್ತದೆ ಏಕೆಂದರೆ ಅವುಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸಲು ಹೊಟ್ಟೆಯಲ್ಲಿ ಬೇರೆ ಯಾವುದೇ ಆಹಾರಗಳಿರುವುದಿಲ್ಲ. ಹಾಗಾಗಿ ದೇಹವು ಪೋಷಕಾಂಶಗಳು ಮತ್ತು ಸಂಯುಕ್ತಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳಬಹುದು. ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಕಾರಣವಾಗಬಹುದು ಎಂದು ಡಾ. ಡಿ.ಪಿ. ಸಿಂಗ್ ಹೇಳುತ್ತಾರೆ.
ಇದನ್ನೂ ಓದಿ:ಮಧುಮೇಹ ನಿಯಂತ್ರಣಲ್ಲಿಟ್ಟುಕೊಳ್ಳಲು ಸಹಕಾರಿ ಈ ಒಣಹಣ್ಣುಗಳು
ಸಾಮಾನ್ಯವಾಗಿ ಸೋಡಾ ಮತ್ತು ಸಿಹಿಯಾದ ಚಹಾ, ಸಕ್ಕರೆ ಬೆರೆಸಿದ ಪಾನೀಯಗಳನ್ನು ನಿಮ್ಮ ಆಹಾರದಿಂದ ತೆಗೆದು ಹಾಕಬೇಕು. ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಬಹುದು. ಈ ಪಾನೀಯಗಳಲ್ಲಿ ಖಾಲಿ ಕ್ಯಾಲೊರಿಗಳು ಹೆಚ್ಚಾಗಿರುತ್ತವೆ ಮತ್ತು ಕಡಿಮೆ ಪೌಷ್ಠಿಕಾಂಶದ ಮೌಲ್ಯವನ್ನು ನೀಡುತ್ತವೆ. ಮಧುಮೇಹಿಗಳು ತಪ್ಪಿಸಬೇಕಾದ ಅಥವಾ ಮಿತವಾಗಿ ಸೇವಿಸಬೇಕಾದ ಕೆಲವು ಪಾನೀಯಗಳು ಇಲ್ಲಿವೆ.
ಅತಿಯಾದ ಆಲ್ಕೋಹಾಲ್ ಸೇವನೆಯು ಕೆಲವು ಸಂದರ್ಭಗಳಲ್ಲಿ ಮಧುಮೇಹ ಔಷಧಿಗಳಿಗೆ ಅಡ್ಡಿಯಾಗಬಹುದು. ಮದ್ಯವನ್ನು ಮಿತವಾಗಿ ಕುಡಿಯುವುದು ಮತ್ತು ಮಾರ್ಗದರ್ಶನಕ್ಕಾಗಿ ವೈದ್ಯರನ್ನು ಸಂಪರ್ಕಿಸುವುದು ತುಂಬಾ ಮುಖ್ಯ.
ಎನರ್ಜಿ ಡ್ರಿಂಕ್ಸ್ ಹೆಚ್ಚಾಗಿ ಸಕ್ಕರೆ ಮತ್ತು ಕೆಫೀನ್ ನಿಂದ ತುಂಬಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಹೆಚ್ಚುವರಿ ಸಿರಪ್ಗಳು, ಸಕ್ಕರೆ ಮತ್ತು ವಿಪ್ಪಡ್ ಕ್ರೀಮ್ನೊಂದಿಗೆ ಕಾಫಿಯಲ್ಲಿ ಕ್ಯಾಲೊರಿಗಳು ಮತ್ತು ಸಕ್ಕರೆ ಹೆಚ್ಚಾಗಬಹುದು, ಇದು ರಕ್ತದಲ್ಲಿನ ಸಕ್ಕರೆಯ ಏರಿಕೆಗೆ ಕಾರಣವಾಗುತ್ತದೆ.
ನೈಸರ್ಗಿಕ ಮತ್ತು ಸಂಸ್ಕರಿಸದ ಪಾನೀಯಗಳಿಗೆ ಅಂಟಿಕೊಳ್ಳುವುದು ಸಾಮಾನ್ಯವಾಗಿ ಮಧುಮೇಹ ನಿರ್ವಹಣೆಗೆ ಉತ್ತಮ ಆಯ್ಕೆಯಾಗಿದೆ. ನೀವು ಉತ್ತಮ ಪ್ರಮಾಣದ ನೀರನ್ನು ಸಹ ಕುಡಿಯಬೇಕು ಏಕೆಂದರೆ ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದಾಗ, ನೀವು ನಿರ್ಜಲೀಕರಣಕ್ಕೆ ಒಳಗಾಗಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ