ಹೆರಿಗೆ ಬಳಿಕ ಮಹಿಳೆಯರಲ್ಲಿ ಹೆಚ್ಚುತ್ತಿದೆ ಶಾಶ್ವತ ಆರೋಗ್ಯ ಸಮಸ್ಯೆ
ಹೆರಿಗೆಯ ಬಳಿಕ ಹೆಣ್ಣಿನ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಆಕೆಯ ಆರೋಗ್ಯದಲ್ಲೂ ಏರಿಳಿತಗಳು ಆಗುತ್ತವೆ. ಮಕ್ಕಳಾದ ನಂತರ ಹೆಣ್ಣಿನ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವೊಂದು ಹೇಳಿದೆ.
ಪ್ರತಿ ವರ್ಷ ಕನಿಷ್ಠ 40 ಮಿಲಿಯನ್ ಮಹಿಳೆಯರು ಹೆರಿಗೆಯಿಂದ ಉಂಟಾಗುವ ದೀರ್ಘಕಾಲದ ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂದು ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನ ತಿಳಿಸಿದೆ. ಪ್ರಸವದ ನಂತರದ ಪರಿಸ್ಥಿತಿಗಳ ಹೆಚ್ಚಿನ ಹೊರೆಯನ್ನು ಮಹಿಳೆ ಅನುಭವಿಸುತ್ತಾಳೆ. ಇದು ಜನ್ಮ ನೀಡಿದ ನಂತರದ ತಿಂಗಳುಗಳು ಅಥವಾ ವರ್ಷಗಳಲ್ಲಿಯೂ ಮುಂದುವರೆಯುತ್ತದೆ ಎಂದು ಹೇಳಲಾಗಿದೆ.
ತಾಯ್ತನವೆನ್ನುವುದು ಹೆಣ್ಣಿನ ಪಾಲಿಗೆ ಬಹುದೊಡ್ಡ ಜವಾಬ್ದಾರಿ. ಈ ಜವಾಬ್ದಾರಿಯನ್ನು ನಿರ್ವಹಿಸಲು ಆಕೆ ಹಲವು ತ್ಯಾಗಗಳನ್ನು ಕೂಡ ಮಾಡಬೇಕಾಗುತ್ತದೆ. ಹೆರಿಗೆಯ ಬಳಿಕ ಹೆಣ್ಣಿನ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಆಕೆಯ ಆರೋಗ್ಯದಲ್ಲೂ ಏರಿಳಿತಗಳು ಆಗುತ್ತವೆ. ಮಕ್ಕಳಾದ ನಂತರ ಹೆಣ್ಣಿನ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವೊಂದು ಹೇಳಿದೆ.
ಇದನ್ನೂ ಓದಿ: 30ರ ನಂತರ ಮಹಿಳೆಯರು ಅನುಸರಿಸಬೇಕಾದ ಕೆಲವು ಆಹಾರ ಸಲಹೆಗಳು
ಮಹಿಳೆ ಎದುರಿಸುವ ದೈಹಿಕ ಸಮಸ್ಯೆಗಳಲ್ಲಿ ಲೈಂಗಿಕ ಸಂಭೋಗದ ಸಮಯದಲ್ಲಿ ಉಂಟಾಗುವ ನೋವು (ಡಿಸ್ಪಾರುನಿಯಾ), ಮೂರನೇ ಒಂದು ಭಾಗದಷ್ಟು (35%) ಪ್ರಸವಾನಂತರದ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಬೆನ್ನು ನೋವು (32%), ಗುದದಲ್ಲಿ ನೋವು (19%), ಮೂತ್ರ ವಿಸರ್ಜನೆ ಮಾಡುವಾಗ ನೋವು (8-31%), ಆತಂಕ (9 -24%), ಖಿನ್ನತೆ (11-17%), ಪೆರಿನಿಯಲ್ ನೋವು (11%), ಹೆರಿಗೆಯ ಭಯ (ಟೋಕೋಫೋಬಿಯಾ) (6-15%) ಮತ್ತು 2ನೇ ಮಗುವಾಗದಿರುವುದು (11%) ಈ ಸಮಸ್ಯೆಗಳು ಸಾಮಾನ್ಯವಾಗಿವೆ ಎಂದು ಅಧ್ಯಯನ ಹೇಳಿದೆ.
ಇದನ್ನೂ ಓದಿ: Postpartum Depression: ಬಾಣಂತಿ ಸನ್ನಿ ಎಂದರೇನು?; ಹೆರಿಗೆ ಬಳಿಕವೂ ಬೇಕು ಪ್ರೀತಿ, ಕಾಳಜಿ
ಮಗುವಿನ ಜನನದ ನಂತರ ಮಹಿಳೆಯರು ದೈನಂದಿನ ಜೀವನದಲ್ಲಿ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಆದರೆ ಅವುಗಳು ಹೆಚ್ಚಾಗಿ ಬೇರೆಯವರ ಗಮನಕ್ಕೆ ಬರುವುದಿಲ್ಲ. ಅವುಗಳನ್ನು ಗುರುತಿಸುವವರು ಕೂಡ ಕಡಿಮೆ. ಇಂತಹ ಸಂದರ್ಭದಲ್ಲಿ ಆ ಮಹಿಳೆಗೆ ಕೌನ್ಸಿಲಿಂಗ್ ಅಥವಾ ಆಪ್ತರ ಜೊತೆ ಆಗಾಗ ಮಾತುಕತೆ ನಡೆಸುವುದು, ಸಮಯ ಕಳೆಯುವುದು ಅಗತ್ಯ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ