ಮಲಗಿರುವಾಗ ಬಾಯಿಯ ಮೂಲಕ ಉಸಿರಾಡುವ ಅಭ್ಯಾಸ ನಿಮಗಿದ್ಯಾ, ಹಾಗಿದ್ರೆ ಈ ಸ್ಟೋರಿ ತಪ್ಪದೆ ಓದಿ

ಕೆಲವೊಮ್ಮೆ ಮೂಗಿನ ಮೂಲಕವಲ್ಲ ಬಾಯಿಯ ಮೂಲಕ ಉಸಿರಾಡುತ್ತೇವೆ. ಆದರೆ ಸ್ವಾಭಾವಿಕವಾಗಿ ಮೂಗಿನ ಮೂಲಕ ಉಸಿರಾಡುವ ನಾವು ಕೆಲವು ಸಂದರ್ಭಗಳಲ್ಲಿ, ಬಾಯಿಯ ಮೂಲಕ ಉಸಿರಾಡುತ್ತೇವೆ. ಇದಕ್ಕೆ ಕಾರಣಗಳು ಸಾಕಷ್ಟಿದ್ದರೂ ಕೂಡ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಅದರಲ್ಲಿಯೂ ಈ ಅಭ್ಯಾಸವು ಆಗಾಗ ಕಂಡುಬಂದರೆ ಅಥವಾ ನಿರಂತರವಾಗಿ ಮುಂದುವರಿದರೆ, ಅದು ಸಾಮಾನ್ಯವಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಲಗಿರುವಾಗ ಬಾಯಿಯ ಮೂಲಕ ಉಸಿರಾಡುವ ಅಭ್ಯಾಸ ನಿಮಗಿದ್ಯಾ, ಹಾಗಿದ್ರೆ ಈ ಸ್ಟೋರಿ ತಪ್ಪದೆ ಓದಿ
Mouth Breathing And Lung Health

Updated on: Nov 11, 2025 | 3:00 PM

ಸಾಮಾನ್ಯವಾಗಿ ನೀವು ನೋಡಿರಬಹುದು ಕೆಲವರು ನಿದ್ರೆ ಮಾಡುವ ಸಮಯದಲ್ಲಿ ಮೂಗಿನ ಮೂಲಕ ಉಸಿರಾಡುವ ಬದಲು ತಮ್ಮ ಬಾಯಿಯ ಮೂಲಕ ಉಸಿರಾಡುತ್ತಾರೆ. ಇದನ್ನು ಬಾಯಿ ಉಸಿರಾಟ ಎಂದು ಕರೆಯಲಾಗುತ್ತದೆ. ಶೀತ, ಅಲರ್ಜಿ ಅಥವಾ ಸೈನಸ್ (Sinus) ಸಮಸ್ಯೆಗಳಿಂದಾಗಿ ಮೂಗು ಮುಚ್ಚಿಕೊಂಡಾಗ ಈ ರೀತಿಯಾಗುತ್ತದೆ. ಈ ರೀತಿ ಗಾಳಿಯ ಹರಿವನ್ನು ತಡೆಯುವುದರಿಂದ ಬಾಯಿಯ ಮೂಲಕ ಉಸಿರಾಡುತ್ತಾರೆ. ಮೂಗಿನ ಮೂಲಕ ಸಾಕಷ್ಟು ಗಾಳಿಯು ಹಾದುಹೋಗಲು ಸಾಧ್ಯವಾಗದಿದ್ದಾಗ, ದೇಹವು ಗಾಳಿಯನ್ನು ಒಳಗೆ ಬಿಡಲು ತುರ್ತು ಆಯ್ಕೆಯಾಗಿ ಬಾಯಿಯನ್ನು ತಕ್ಷಣವೇ ಬಳಸುತ್ತದೆ. ಇದೊಂದು ಸಾಮಾನ್ಯ ಪ್ರಕ್ರಿಯೆ. ಆದರೆ ಈ ಅಭ್ಯಾಸವು ಆಗಾಗ ಕಂಡುಬಂದರೆ ಅಥವಾ ನಿರಂತರವಾಗಿ ಮುಂದುವರಿದರೆ, ಅದು ಸಾಮಾನ್ಯವಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬಾಯಿಯ ಮೂಲಕ ಉಸಿರಾಡುವುದು ದೇಹದ ತಕ್ಷಣದ ಅಗತ್ಯಗಳಿಗೆ ಅನುಗುಣವಾಗಿರುವುದರಿಂದ, ಅದು ಸಾಂದರ್ಭಿಕವಾಗಿ ಕಂಡುಬಂದರೆ ಅದನ್ನು ದೊಡ್ಡ ಅಪಾಯವೆಂದು ಪರಿಗಣಿಸುವುದು ಸರಿಯಲ್ಲ. ಆದರೆ ಒಬ್ಬ ವ್ಯಕ್ತಿ ಪ್ರತಿದಿನ ರಾತ್ರಿ ಮಲಗಿರುವಾಗ ನಿರಂತರವಾಗಿ ಬಾಯಿಯ ಮೂಲಕ ಉಸಿರಾಡಿದರೆ, ಅದು ದೇಹಕ್ಕೆ ಒಳ್ಳೆಯದಲ್ಲ. ಇದರಿಂದ ಗಂಟಲು ಪದೇ ಪದೇ ಒಣಗುತ್ತದೆ, ತ್ವರಿತ ಆಯಾಸವಾಗುತ್ತದೆ, ದುರ್ವಾಸನೆ, ನಿದ್ರೆಯ ಮಾದರಿಯಲ್ಲಿ ಅಡಚಣೆ, ಮಕ್ಕಳ ಮುಖದ ರಚನೆಯಲ್ಲಿ ಬದಲಾವಣೆಗಳು ಮತ್ತು ಎಚ್ಚರವಾದಾಗ ತಲೆಯಲ್ಲಿ ಭಾರ ಅಥವಾ ನೋವು ಮುಂತಾದ ಕೆಲವು ಲಕ್ಷಣಗಳು ಕ್ರಮೇಣ ಕಾಣಿಸಿಕೊಳ್ಳುತ್ತವೆ. ಅನೇಕರಿಗೆ ರಾತ್ರಿ ಸಮಯದಲ್ಲಿ ಬಾಯಿಯ ಮೂಲಕ ಉಸಿರಾಡುವುದು ತಿಳಿದಿರುವುದಿಲ್ಲ. ಆದರೆ ಇದು ನಿಮ್ಮ ಗಮನಕ್ಕೆ ಬಂದರೆ ಅಥವಾ ಬೇರೆಯವರು ಹೇಳಿದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಅದರಲ್ಲಿಯೂ ದೈನಂದಿನ ಜೀವನದಲ್ಲಿ ಈ ಸಮಸ್ಯೆ ಮುಂದುವರಿದರೆ, ಅದನ್ನು ನಿರ್ಲಕ್ಷಿಸಬೇಡಿ.

ಇದನ್ನೂ ಓದಿ: ಚಿಕ್ಕ ಮಕ್ಕಳ ಕೆಮ್ಮು ಬೇಗ ಕಡಿಮೆ ಆಗಬೇಕು ಅಂದ್ರೆ ಆಯುರ್ವೇದದಲ್ಲಿ ತಿಳಿಸಿರುವ ಈ ಮದ್ದನ್ನೊಮ್ಮೆ ಟ್ರೈ ಮಾಡಿ

ಬಾಯಿಯ ಮೂಲಕ ಉಸಿರಾಡುವುದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆಯೇ?

ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಅಜಿತ್ ಕುಮಾರ್ ಅವರು ಹೇಳುವ ಪ್ರಕಾರ, ಬಾಯಿಯ ಮೂಲಕ ಉಸಿರಾಡುವುದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ನಮ್ಮ ಮೂಗು ನೈಸರ್ಗಿಕ ಫಿಲ್ಟರ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದು ಗಾಳಿಯನ್ನು ಶೋಧಿಸಿ, ಬೆಚ್ಚಗಾಗಿಸುತ್ತದೆ ಮತ್ತು ಸಾಕಷ್ಟು ತೇವಾಂಶದೊಂದಿಗೆ ಶ್ವಾಸಕೋಶಕ್ಕೆ ತಲುಪಿಸುತ್ತದೆ. ಆದರೆ, ಬಾಯಿಯ ಮೂಲಕ ಉಸಿರಾಡುವಾಗ ಗಾಳಿ ಫಿಲ್ಟರ್ ಆಗುವುದಿಲ್ಲ ಅದರ ಬದಲಾಗಿ ನೇರವಾಗಿ ಶ್ವಾಸಕೋಶವನ್ನು ತಲುಪುತ್ತದೆ. ಹೀಗಾಗಿ ಗಾಳಿಯಲ್ಲಿರುವ ಧೂಳು, ಕಣಗಳು ಮತ್ತು ರೋಗಕಾರಕ ಸೂಕ್ಷ್ಮಜೀವಿಗಳು ನೇರವಾಗಿ ಬಾಯಿಯನ್ನು ಪ್ರವೇಶಿಸುತ್ತವೆ. ಇದು ವಾಯು ಮಾರ್ಗಗಳಲ್ಲಿ ಕಿರಿಕಿರಿಯನ್ನು ಹೆಚ್ಚಿಸುತ್ತದೆ ಮತ್ತು ಕಾಲಾನಂತರದಲ್ಲಿ, ನಿರಂತರ ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಮತ್ತು ಆಗಾಗ ಸೋಂಕುಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಸ್ತಮಾ ಅಥವಾ ಅಲರ್ಜಿ ಇರುವವರಿಗೆ, ಬಾಯಿಯಿಂದ ಉಸಿರಾಡುವ ಅಭ್ಯಾಸವು ಇನ್ನಷ್ಟು ಹಾನಿಕಾರಕವಾಗಿದೆ. ಆದ್ದರಿಂದ, ಇದನ್ನು ಸಾಮಾನ್ಯ ಅಭ್ಯಾಸವೆಂದು ಪರಿಗಣಿಸಿ ನಿರ್ಲಕ್ಷಿಸುವುದು ಸರಿಯಲ್ಲ ಎಂದು ಹೇಳುತ್ತಾರೆ.

ತಡೆಗಟ್ಟಲು ಇಲ್ಲಿದೆ ಕೆಲವು ಸಲಹೆಗಳು:

  • ಮೂಗು ಕಟ್ಟಿಕೊಂಡಿದ್ದರೆ, ಬಿಸಿ ನೀರಿನ ಹಬೆ ತೆಗೆದುಕೊಳ್ಳಿ.
  • ಮಲಗುವಾಗ ನಿಮ್ಮ ದಿಂಬು ಸ್ವಲ್ಪ ಎತ್ತರದಲ್ಲಿರಲಿ.
  • ನಿಮಗೆ ಅಲರ್ಜಿ ಅಥವಾ ಸೈನಸ್ ಸಮಸ್ಯೆಗಳಿದ್ದರೆ, ವೈದ್ಯರನ್ನು ಭೇಟಿ ಮಾಡಲು ಮರೆಯದಿರಿ.
  • ಗಂಟಲು ಒಣಗದಂತೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ