ಆಯುರ್ವೇದ ಆಧುನಿಕ ರೋಗಗಳಿಗೆ ಪರಿಣಾಮಕಾರಿಯಾದ ಪರಿಹಾರ: ಡಾ. ಸಂಹಿತಾ
ಪ್ರಸ್ತುತ ಕಾಲಘಟ್ಟದಲ್ಲಿ ದಿನೇ ದಿನೇ ಜೀವನಶೈಲಿ ಸಂಬಂಧಿತ ರೋಗಗಳು ಹಾಗೂ ಮಾನಸಿಕ ಒತ್ತಡ ಹೆಚ್ಚುತ್ತಿರುವುದನ್ನು ನಾವು ಕಾಣಬಹುದಾಗಿದ್ದು, ಈ ಎಲ್ಲಾ ಆರೋಗ್ಯದ ಅಸಮತೋಲನಗಳಿಗೆ ಆಯುರ್ವೇದದಲ್ಲಿ ಸಹಜ ಹಾಗೂ ದೀರ್ಘಕಾಲೀನ ಪರಿಹಾರ ಮಾರ್ಗಗಳಿವೆ. ಆದರೆ ಇದರ ಪೂರ್ಣ ಪ್ರಯೋಜನವನ್ನು ಪಡೆಯಲು ಜನಸಾಮಾನ್ಯರು ಆಯುರ್ವೇದ ಶಿಕ್ಷಣದ ವೈಜ್ಞಾನಿಕ ಹಾಗೂ ಸಾಮಾಜಿಕ ಪ್ರಾಮುಖ್ಯತೆಯ ಬಗ್ಗೆ ಹೆಚ್ಚು ಅರಿವು ಹೊಂದಿರುವುದು ಅವಶ್ಯಕವಾಗಿದೆ. ಈ ವಿಷಯದ ಕುರಿತು ಡಾ. ಸಂಹಿತಾ ಉಲ್ಲೋಡು ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.

ಆಯುರ್ವೇದ (Ayurveda) ಎಂಬುದು ಭಾರತದ ಪುರಾತನ ಚಿಕಿತ್ಸಾ ಪದ್ಧತಿ ಎಂಬುದು ಬಹುತೇಕರಿಗೆ ತಿಳಿದ ವಿಚಾರ. ಆದರೆ ಇದು ಕೇವಲ ರೋಗ ನಿವಾರಣೆಯ ವಿಧಾನವಾಗಿಲ್ಲ ಬದಲಾಗಿ ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಒತ್ತಿ ಹೇಳುವ ಸಮಗ್ರ ಜೀವನಶೈಲಿಯಾಗಿದೆ. ಅದರಲ್ಲಿಯೂ ಪ್ರಸ್ತುತ ಕಾಲಘಟ್ಟದಲ್ಲಿ ದಿನೇ ದಿನೇ ಜೀವನಶೈಲಿ ಸಂಬಂಧಿತ ರೋಗಗಳು ಹಾಗೂ ಮಾನಸಿಕ ಒತ್ತಡ ಹೆಚ್ಚುತ್ತಿರುವುದನ್ನು ನಾವು ಕಾಣಬಹುದಾಗಿದ್ದು, ಈ ಎಲ್ಲಾ ಆರೋಗ್ಯದ ಅಸಮತೋಲನಗಳಿಗೆ ಆಯುರ್ವೇದದಲ್ಲಿ ಸಹಜ ಹಾಗೂ ದೀರ್ಘಕಾಲೀನ ಪರಿಹಾರ ಮಾರ್ಗಗಳಿವೆ. ಆದರೆ ಇದರ ಪೂರ್ಣ ಪ್ರಯೋಜನವನ್ನು ಪಡೆಯಲು ಜನಸಾಮಾನ್ಯರು ಆಯುರ್ವೇದ ಶಿಕ್ಷಣದ ವೈಜ್ಞಾನಿಕ ಹಾಗೂ ಸಾಮಾಜಿಕ ಪ್ರಾಮುಖ್ಯತೆಯ ಬಗ್ಗೆ ಹೆಚ್ಚು ಅರಿವು ಹೊಂದಿರುವುದು ಅವಶ್ಯಕವಾಗಿದೆ. ಈ ವಿಷಯದ ಕುರಿತು ಬೆಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ (SDM Institute of Ayurveda & Hospital) ಸಂಹಿತಾ ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಹಿತಾ ಉಲ್ಲೋಡು ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.
ವೈಜ್ಞಾನಿಕ ಶಿಕ್ಷಣದ ಮೂಲಭೂತ ರಚನೆ
ಭಾರತದಲ್ಲಿ ಆಯುರ್ವೇದ ಶಿಕ್ಷಣವು ತನ್ನದೇ ಇತಿಹಾಸವನ್ನು ಹೊಂದಿದೆ ಹಾಗೂ ಆಯುಷ್ ಸಚಿವಾಲಯ ಹಾಗೂ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಆಯೋಗದಂತಹ ಸಂಸ್ಥೆಗಳ ಮಾನ್ಯತೆಯನ್ನು ಪಡೆದಿದೆ. ಆಯುರ್ವೇದ ಶಿಕ್ಷಣವು ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಆಂಡ್ ಸರ್ಜರಿ (BAMS), ಸ್ನಾತಕೋತ್ತರ ಮತ್ತು ಸಂಶೋಧನಾ ಕೋರ್ಸುಗಳು ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಹಾಗೂ ಆಧುನಿಕ ವಿಜ್ಞಾನದ ಸಂಯೋಜಿತ ಅಧ್ಯಯನವನ್ನು ನೀಡುತ್ತದೆ.
ತಪ್ಪು ಕಲ್ಪನೆಯನ್ನು ದೂರ ಮಾಡುತ್ತೆ
ಅನಾಟಮಿ , ಫಿಸಿಯೋಲಾಜಿ, ಪ್ಯಾಥಾಲಜಿ, ಫಾರ್ಮಕಾಲಜಿ ಮತ್ತು ಕ್ಲಿನಿಕಲ್ ತರಬೇತಿಯನ್ನು ಒಳಗೊಂಡ ಆಯುರ್ವೇದ ಶಿಕ್ಷಣ ಕೇವಲ ಪಾರಂಪರಿಕ ಕಲೆಯಷ್ಟೇ ಅಲ್ಲ ಅದು ಸಾಕ್ಷ್ಯಾಧಾರಿತ ಆರೋಗ್ಯ ಶಾಸ್ತ್ರವಾಗಿದೆ. ಇಂದಿನ ದಿನಗಳಲ್ಲಿ ಆಯುರ್ವೇದ ಕ್ಷೇತ್ರ ನಕಲಿ ಹಾಗೂ ಅರ್ಹತೆಯಿಲ್ಲದ ಚಿಕಿತ್ಸಾಗಾರ, ಹೀಗೆ ನಾನಾ ರೀತಿಯ ಸಾಕಷ್ಟು ಸವಾಲನ್ನು ಎದುರಿಸುತ್ತಿದೆ. ಜನರು ಆಯುರ್ವೇದ ಶಿಕ್ಷಣದ ವ್ಯವಸ್ಥೆಯ ಬಗ್ಗೆ ಅರಿವು ಹೊಂದಿರದಿದ್ದರೆ ಅವರು ತಪ್ಪು ಚಿಕಿತ್ಸೆ ಅಥವಾ ಸುರಕ್ಷಿತವಲ್ಲದ ವಿಧಾನಗಳಿಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಆಯುರ್ವೇದದ ಶಿಕ್ಷಣದ ಅರಿವು ಜನರಲ್ಲಿ ನಂಬಿಕೆ ಹಾಗೂ ನೈತಿಕತೆಯನ್ನು ಬಲಪಡಿಸುತ್ತದೆ. ಹಾಗೆಯೇ ಆಯುರ್ವೇದವು ಬರಿಯ ಮನೆಮದ್ದಲ್ಲ , ವಿಜ್ಞಾನದಾರಿತವಲ್ಲ ಎಂಬ ತಪ್ಪು ಕಲ್ಪನೆಯನ್ನು ದೂರ ಮಾಡುತ್ತದೆ. ಸಂಶೋಧನೆ, ವೈದ್ಯಕೀಯ ತರಬೇತಿ, ಪ್ರಯೋಗಾಲಯ ಕಾರ್ಯ ಆಯುರ್ವೇದ ಶಿಕ್ಷಣದ ಅವಿಭಾಜ್ಯ ಭಾಗವಾಗಿದೆ ಎಂಬ ಅರಿವು ಮೂಡಿದಾಗ ಜನರಿಗೆ ಆಯುರ್ವೇದ ಆಧುನಿಕ ರೋಗಗಳಿಗೆ ಪರಿಣಾಮಕಾರಿಯಾದ ಪರಿಹಾರವೆಂಬುದು ಮನವರಿಕೆಯಾಗುತ್ತದೆ.
ಆಯುರ್ವೇದ ಶಿಕ್ಷಣದ ಅರಿವು ಜನರಲ್ಲಿ ಸ್ವಯಂ ಆರೈಕೆ ಹಾಗೂ ರೋಗಗಳು ಬಾರದಂತೆ ತಡೆಗಟ್ಟುವ ಆರೋಗ್ಯ ಸಂಸ್ಕೃತಿಯನ್ನು ಬೆಳೆಸುತ್ತದೆ. ದಿನಚರ್ಯೆ (ದೈನಂದಿನ ನಿಯಮ) ಋತುಚರ್ಯೆ (ಋತುಗಳಿಗೆ ತಕ್ಕಂತ ಜೀವನಶೈಲಿ) ಮತ್ತು ವೈಯಕ್ತಿಕ ಆಹಾರ ಕರ್ಮಗಳ ಮಾರ್ಗದರ್ಶನ ವೃತ್ತಿಯನ್ನು ಸಂತೋಲನಾಯುತ ಹಾಗೂ ಆರೋಗ್ಯಕರ ಜೀವನದತ್ತ ನಡೆಸುತ್ತದೆ ಹಾಗೆಯೇ ಇಂತಹ ಅರಿವು ಜನರಲ್ಲಿ ರಾಸಾಯನಿಕಯುಕ್ತ ಔಷಧಿಗಳ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




