AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಾಮವಾಗಿ ನಿದ್ರೆ ಮಾಡಲು ಬಯಸಿದರೆ, ಮಲಗುವ ಮುನ್ನ ಕಾಲಿಗೆ ಸಾಕ್ಸ್‌ ಧರಿಸಿ

ನಾವು ಆರೋಗ್ಯವಂತರಾಗಿರಲು ಉತ್ತಮ ನಿದ್ರೆಯೂ ತುಂಬಾನೇ ಮುಖ್ಯ. ಇಂದಿನ ಈ ಒತ್ತಡದ ಜೀವನಶೈಲಿಯಲ್ಲಿ ಉತ್ತಮ ನಿದ್ರೆ ಪಡೆಯುವ ಸಲುವಾಗಿ ಹಲವರು ಧ್ಯಾನ ಮಾಡುವಂತಹದ್ದು, ಕಣ್ಣಿಗೆ ಮಾಸ್ಕ್‌ ಹಾಕಿ ಮಲಗುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಅದೇ ರೀತಿ ಕಾಲಿಗೆ ಸಾಕ್ಸ್‌ ಹಾಕಿ ಮಲಗುವುದರಿಂದಲೂ ಮಗುವಿನಂತೆ ಆರಾಮವಾಗಿ ನಿದ್ದೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಉತ್ತಮ ನಿದ್ದೆ ಪಡೆಯಲು ಬಯಸಿದ್ರೆ ನೀವು ಕೂಡ ಮಲಗುವ ಮುನ್ನ ಕಾಲಿಗೆ ಸಾಕ್ಸ್‌ ಧರಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಅರಾಮವಾಗಿ ನಿದ್ರೆ ಮಾಡಲು ಬಯಸಿದರೆ, ಮಲಗುವ ಮುನ್ನ ಕಾಲಿಗೆ ಸಾಕ್ಸ್‌ ಧರಿಸಿ
ಸಾಂದರ್ಭಿಕ ಚಿತ್ರ Image Credit source: Unsplash
ಮಾಲಾಶ್ರೀ ಅಂಚನ್​
|

Updated on: Nov 09, 2025 | 6:55 PM

Share

ಉತ್ತಮ ನಿದ್ರೆ ನಮ್ಮನ್ನು ಆರೋಗ್ಯವಾಗಿಡುವಲ್ಲಿ, ಕ್ರಿಯಾಶೀಲರನ್ನಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿ ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆದರೆ ಇಂದಿನ ಒತ್ತಡದ ಜೀವನಶೈಲಿಯ ಕಾರಣದಿಂದಾಗಿ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಣ್ಣು ಮುಚ್ಚಿ ಮಲಗಿದ್ರು ಕೂಡ ನಿದ್ರೆ ಹತ್ತಲ್ಲ ಎಂದು ಹಲವರು ಹೇಳುತ್ತಿರುತ್ತಾರೆ. ಇನ್ನೂ ಉತ್ತಮ ನಿದ್ರೆ ಪಡೆಯಲು ಕೆಲವರು ಧ್ಯಾನ ಮಾಡುವುದು, ಮಲಗುವಾಗ ಕಣ್ಣಿಗೆ ಮಾಸ್ಕ್‌ ಧರಿಸುವುದು, ಈ ಅಭ್ಯಾಸಗಳನ್ನು ಪಾಲಿಸುತ್ತಿರುತ್ತಾರೆ. ಇದಲ್ಲದೆ ಉತ್ತಮ ನಿದ್ರೆ ಪಡೆಯಲು ಸಾಕ್ಸ್‌ (wearing socks) ಧರಿಸುವುದು ಕೂಡ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ, ಹೌದು ಮಲಗುವ ಮುನ್ನ ಕಾಲಿಗೆ ಸಾಕ್ಸ್‌ ಧರಿಸುವುದರಿಂದ ಮಗುವಿನಂತೆ ಆರಾಮವಾಗಿ ನಿದ್ರೆ ಮಾಡಬಹುದಂತೆ. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗಿದರೆ ಏನಾಗುತ್ತದೆ?

ವರ್ಜೀನಿಯಾದ ನ್ಯಾಷನಲ್ ಸ್ಲೀಪ್ ಫೌಂಡೇಶನ್‌ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಸಾಕ್ಸ್ ಧರಿಸಿ ಮಲಗುವ ಜನರು ವೇಗವಾಗಿ ನಿದ್ರಿಸುತ್ತಾರೆ ಮತ್ತು ಹೆಚ್ಚು ಸಮಯ ನಿದ್ರಿಸುತ್ತಾರೆ. ಸ್ಯಾನ್ ಫ್ರಾನ್ಸಿಸ್ಕೋದ ಬಯೋಮೆಡಿಕಲ್ ವಿಜ್ಞಾನಿ ಡಾ. ಬೀಕಿನ್ ಲುವೊ ಅವರ ಪ್ರಕಾರ ನಿದ್ದೆ ಮಾಡುವಾಗ  ಪಾದಗಳನ್ನು ಬೆಚ್ಚಗಾಗಿಸುವುದರಿಂದ ನಿದ್ರೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.  ಒಟ್ಟಾರೆಯಾಗಿ ಸಾಕ್ಸ್‌ ಧರಿಸುವುದರಿಂದ ಚೆನ್ನಾಗಿ ನಿದ್ರೆ ಮಾಡಬಹುದಂತೆ. ಅದಕ್ಕಾಗಿ ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಅವುಗಳನ್ನು ಸಂಪೂರ್ಣವಾಗಿ ಒಣಗಿಸಿ, ಉತ್ತಮ ಮಾಯಿಶ್ಚರೈಸರ್ ಹಚ್ಚಿ, ನಂತರ ಮಲಗುವ ಮುನ್ನ ಸಾಕ್ಸ್ ಧರಿಸಿದರೆ, ನಿಮಗೆ ಉತ್ತಮ ನಿದ್ರೆ ಬರುತ್ತದೆ ಎಂದು ಹೇಳಲಾಗುತ್ತದೆ.

ಸಾಕ್ಸ್‌ ಧರಿಸುವುದು ನಿದ್ರೆಗೆ ಹೇಗೆ ಸಹಾಯ ಮಾಡುತ್ತದೆ?

ಮಲಗುವ ಮುನ್ನ ಸಾಕ್ಸ್ ಧರಿಸುವುದರಿಂದ ನಿಮ್ಮ ನಿದ್ರೆಯ ಗುಣಮಟ್ಟ ಸುಧಾರಿಸಬಹುದು. ನಿಮ್ಮ ಪಾದಗಳು ಬೆಚ್ಚಗಿರುವಾಗ, ನಿಮ್ಮ ರಕ್ತನಾಳಗಳು ಹಿಗ್ಗುತ್ತವೆ. ಇದು ಉತ್ತಮ ರಕ್ತ ಪರಿಚಲನೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಆದ್ದರಿಂದ, ನೀವು ಮಲಗುವ ಮುನ್ನ ಕಾಲಿಗೆ ಸಾಕ್ಸ್ ಧರಿಸಿದರೆ, ನಿಮಗೆ ಉತ್ತಮ  ನಿದ್ರೆ ಸಿಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲ, ಇದು ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ಅವುಗಳೆಂದರೆ,

  • ಇದು ಪಾದಗಳನ್ನು ಚಳಿಯಿಂದ ರಕ್ಷಿಸುವುದಲ್ಲದೆ, ನೆಮ್ಮದಿಯಿಂದ ಮಲಗಲು ಸಹಾಯ ಮಾಡುತ್ತದೆ.
  • ಸಾಕ್ಸ್‌ ಧರಿಸುವುದರಿಂದ ಹಿಮ್ಮಡಿ ಬಿರುಕು ಮೂಡುವ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.
  • ಸಾಕ್ಸ್‌ ಧರಿಸುವುದರಿಂದ ಪಾದಗಳಲ್ಲಿನ ಊತ ಮತ್ತು ನೋವು ಕಡಿಮೆಯಾಗುತ್ತದೆ.
  • ನಿಯಮಿತವಾಗಿ ಸಾಕ್ಸ್‌ ಧರಿಸುವುದರಿಂದ ಪಾದಗಳು ಸುಂದರವಾಗಿ ಕಾಣುತ್ತದಂತೆ.

ಇದನ್ನೂ ಓದಿ: ರಾತ್ರಿ ಚೆನ್ನಾಗಿ ನಿದ್ರೆ ಬರಲು ಒಂದು ಕೆಲಸ ಮಾಡಿ ಸಾಕು

ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು:

ವೈದ್ಯರ ಪ್ರಕಾರ, ನಿಮ್ಮ ಪಾದಗಳನ್ನು ಬೆಚ್ಚಗಾಗಿಸುವುದರಿಂದ ನಿದ್ರೆ ಸುಧಾರಿಸಬಹುದು, ಆದರೆ ಒಂದಷ್ಟು ವಿಚಾರಗಳ ಬಗ್ಗೆ ಗಮನ ಹರಿಸಬೇಕು. ಅದೇನೆಂದರೆ, ಸಾಕ್ಸ್ ತುಂಬಾ ಬಿಗಿಯಾಗಿದ್ದರೆ ಅಥವಾ ಕೊಳಕಾಗಿದ್ದರೆ, ಬೆವರು ಸಂಗ್ರಹವಾಗಬಹುದು, ಇದು ತುರಿಕೆ, ಚರ್ಮದ ದದ್ದುಗಳು ಅಥವಾ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಅಲ್ಲದೆ ಬಿಗಿಯಾದ ಸಾಕ್ಸ್‌ ಧರಿಸುವುದರಿಂದ ರಕ್ತದ ಹರಿವಿಗೆ ಅಡ್ಡಿಯಾಗಬಹುದು, ಇದು ಪಾದಗಳಲ್ಲಿ ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆಗೆ ಕಾರಣವಾಗಬಹುದು. ಹಾಗಾಗಿ ಮಲಗುವ ಮುನ್ನ  ನೀವು ಸಾಕ್ಸ್ ಧರಿಸಲು ಬಯಸಿದರೆ ಹಗುರವಾದ ಹತ್ತಿ ಸಾಕ್ಸ್ ಧರಿಸಿ. ಬಿಗಿಯಾದ ಸಾಕ್ಸ್‌ಗಳನ್ನು ಧರಿಸಬೇಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ