ಬಾಯಿ ಹುಣ್ಣಿನ ಸಮಸ್ಯೆಯಾ? ಬಾಬಾ ರಾಮದೇವ್ ತಿಳಿಸಿದ ಆಯುರ್ವೇದ ಪರಿಹಾರಗಳಿವು…

Ayurvedic remedies for mouth ulcers: ಅನೇಕ ಜನರು ಪದೇ ಪದೇ ಬಾಯಿ ಹುಣ್ಣುಗಳಿಂದ ಬಳಲುತ್ತಿದ್ದಾರೆ. ಗಂಭೀರ ಸಮಸ್ಯೆಗಳಿಗೆ ಎಡೆ ಮಾಡಿಕೊಡುವ ಇದನ್ನು ಹಗುರವಾಗಿ ಪರಿಗಣಿಸಬಾರದು. ಬಾಬಾ ರಾಮದೇವ್ ಬಾಯಿ ಹುಣ್ಣುಗಳನ್ನು ತಡೆಗಟ್ಟಲು ಕೆಲವು ಉಪಯುಕ್ತ ಆಯುರ್ವೇದ ಪರಿಹಾರಗಳನ್ನು ಸೂಚಿಸಿದ್ದಾರೆ. ಬಾಬಾ ರಾಮದೇವ್ ಸೂಚಿಸಿದ ಆಯುರ್ವೇದ ವಿಧಾನಗಳು ಬಾಯಿ ಹುಣ್ಣುಗಳನ್ನು ನಿವಾರಿಸಲು ಮತ್ತು ತಡೆಗಟ್ಟುವಲ್ಲಿ ಪ್ರಯೋಜನಕಾರಿಯಾಗಬಹುದು.

ಬಾಯಿ ಹುಣ್ಣಿನ ಸಮಸ್ಯೆಯಾ? ಬಾಬಾ ರಾಮದೇವ್ ತಿಳಿಸಿದ ಆಯುರ್ವೇದ ಪರಿಹಾರಗಳಿವು...
ಬಾಬಾ ರಾಮದೇವ್

Updated on: Nov 17, 2025 | 4:47 PM

ಬಾಯಿ ಹುಣ್ಣು (Mouth Ulcers) ಬಹಳ ಕಿರಿಕಿರಿ ತರುವಂಥದ್ದು. ಕಳಪೆ ಜೀರ್ಣಕ್ರಿಯೆ (indigestion), ವಿಟಮಿನ್ ಬಿ 12, ಐರನ್ ಅಥವಾ ಫೋಲಿಕ್ ಆ್ಯಸಿಡ್ ಕೊರತೆ, ಅಧಿಕ ದೈಹಿಕ ಉಷ್ಣತೆ, ಒತ್ತಡ, ಮಸಾಲೆಯುಕ್ತ ಅಥವಾ ಹುಳಿ ಆಹಾರಗಳ ಸೇವನೆ, ಧೂಮಪಾನ ಮತ್ತು ನಿದ್ರಾಹೀನತೆ (sleeplessness) ಮೊದಲಾದವುಗಳಿಂದ ಮೌತ್ ಅಲ್ಸರ್ ಉಂಟಾಗಬಹುದು. ಕೆಲವೊಮ್ಮೆ ಹಲ್ಲುಗಳೂ ಕೂಡ ಹುಣ್ಣಿಗೆ ಕಾರಣವಾಗಬಹುದು. ಹವಾಮಾನ ಬದಲಾವಣೆಗಳು ಮತ್ತು ಹಾರ್ಮೋನುಗಳ ಅಸಮತೋಲನವು ಹುಣ್ಣುಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಬಾಬಾ ರಾಮದೇವ್ (Baba Ramdev) ಸೂಚಿಸಿದ ಆಯುರ್ವೇದ ವಿಧಾನಗಳು ಬಾಯಿ ಹುಣ್ಣುಗಳನ್ನು ನಿವಾರಿಸಲು ಮತ್ತು ತಡೆಗಟ್ಟುವಲ್ಲಿ ಪ್ರಯೋಜನಕಾರಿಯಾಗಬಹುದು.

ಬಾಯಿ ಹುಣ್ಣಿಗೆ ಸರಿಯಾಗಿ ಚಿಕಿತ್ಸೆ ನೀಡದೇ ಇದ್ದರೆ, ಈ ಸಮಸ್ಯೆ ಮತ್ತೆ ಮತ್ತೆ ಕಾಣಿಸಿಕೊಂಡು ಪರಿಸ್ಥಿತಿ ಗಂಭೀರ ಹಂತಕ್ಕೆ ಹೋಗಬಹುದು. ಆಹಾರ ನುಂಗುವುದು, ಅಗಿಯುವುದು, ಮಾತನಾಡುವುದು ಕಷ್ಟವಾಗಬಹುದು. ನಗುವುದಕ್ಕೂ ಕಷ್ಟ ಆಗಬಹುದು. ನಿರಂತರ ಹುಣ್ಣು ಬಾಯಿಯ ಸೋಂಕುಗಳಿಗೆ ಕಾರಣವಾಗಬಹುದು. ಬಾಯಿ ದುರ್ವಾಸನೆ ಮತ್ತು ರುಚಿಗೆಡುವುದು ಇತ್ಯಾದಿ ಸಮಸ್ಯೆಗಳನ್ನು ಉಂಟುಮಾಡಬಹುದು. ದೀರ್ಘಕಾಲದವರೆಗೆ ನಿರ್ಲಕ್ಷಿಸಿದರೆ, ಈ ಸ್ಥಿತಿಯು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಹುಣ್ಣಿನ ನೋವು ಮತ್ತು ಕಿರಿಕಿರಿಯಿಂದ ವ್ಯಕ್ತಿಯು ಸರಿಯಾಗಿ ತಿನ್ನಲು ಕಷ್ಟವಾಗಬಹುದು. ಇದು ತೂಕ ನಷ್ಟ ಅಥವಾ ದೌರ್ಬಲ್ಯಕ್ಕೆ ಕಾರಣವಾಗಬಹುದು. ಆದ್ದರಿಂದ, ಬಾಯಿ ಹುಣ್ಣುಗಳನ್ನು ಲಘುವಾಗಿ ಪರಿಗಣಿಸಬಾರದು.

ಇದನ್ನೂ ಓದಿ: ಹೈಬಿಪಿ ನಿಯಂತ್ರಿಸಬಲ್ಲ ಯೋಗಾಸನ ಮತ್ತು ಪ್ರಾಣಾಯಾಮಗಳು: ಬಾಬಾ ರಾಮದೇವ್ ಸಲಹೆ

ಬಾಯಿ ಹುಣ್ಣು ತಡೆಗಟ್ಟಲು ಈ ಆಯುರ್ವೇದ ವಿಧಾನ ಅನುಸರಿಸಿ

ಬಾಯಿ ಹುಣ್ಣುಗಳನ್ನು ನಿವಾರಿಸಲು ಅಲೋವೆರಾ ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ ರಸವನ್ನು ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಅಲೋವೆರಾ ಜೆಲ್ ಅನ್ನು ನೇರವಾಗಿ ಹುಣ್ಣಿಗೆ ಹಚ್ಚುವುದರಿಂದ ಉರಿ, ನೋವು ಮತ್ತು ಊತದಿಂದ ತಕ್ಷಣದ ಪರಿಹಾರ ದೊರೆಯುತ್ತದೆ. ಹೆಚ್ಚುವರಿಯಾಗಿ, ದೇಹವನ್ನು ತಂಪಾಗಿಡಲು ಕಲ್ಲಂಗಡಿ, ಸೌತೆಕಾಯಿ, ತೆಂಗಿನ ನೀರು ಮತ್ತು ಮಜ್ಜಿಗೆಯಂತಹ ತಂಪಾದ ಆಹಾರಗಳನ್ನು ಸೇವಿಸಬೇಕು. ಮಸಾಲೆಯುಕ್ತ, ಹುರಿದ ಮತ್ತು ಅತಿಯಾದ ಹುಳಿ ಆಹಾರವನ್ನು ತಪ್ಪಿಸಿ.

ಸಾಕಷ್ಟು ನೀರು ಕುಡಿಯುವುದು, ಸಮತೋಲಿತ ಆಹಾರವನ್ನು ಸೇವಿಸುವುದು ಮತ್ತು ನಿಯಮಿತವಾಗಿ ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಬಾಯಿ ಹುಣ್ಣುಗಳ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಸಾಕಷ್ಟು ನಿದ್ರೆ ಮಾಡುವುದು ಸಹ ಅತ್ಯಗತ್ಯ. ಏಕೆಂದರೆ ಒತ್ತಡ ಮತ್ತು ನಿದ್ರೆಯ ಕೊರತೆಯು ಬಾಯಿ ಹುಣ್ಣುಗಳ ಪುನಾವರ್ತನೆಗೆ ಕಾರಣವಾಗಬಹುದು. ಹೀಗಾಗಿ, ಆಯುರ್ವೇದ ಪರಿಹಾರಗಳ ಜೊತೆಗೆ ಜೀವನಶೈಲಿಯ ಬದಲಾವಣೆಯೂ ಆದಾಗ, ಬಾಯಿ ಹುಣ್ಣುಗಳನ್ನು ನಿಯಂತ್ರಿಸಬಹುದು.

ಇದನ್ನೂ ಓದಿ: ರಾಗಿ, ಸಜ್ಜೆ ಮಿಶ್ರಿತ ರೊಟ್ಟಿ ಸೂಪರೋ ಸೂಪರ್… ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಬಾಬಾ ರಾಮದೇವ್ ವಿವರಣೆ

ಈ ಅಂಶಗಳನ್ನೂ ಗಮನದಲ್ಲಿರಿಸಿ…

  • ಬಾಯಿಯೊಳಗಿನ ನೈರ್ಮಲ್ಯ ಮುಖ್ಯ. ದಿನಕ್ಕೆ ಎರಡು ಬಾರಿ ಹಲ್ಲುಜ್ಜಿರಿ.
  • ನಾಲಗೆ ಸ್ವಚ್ಛಗೊಳಿಸಿರಿ. ವಸಡೂ ಸ್ವಚ್ಛವಾಗಿರಲಿ
  • ಹೆಚ್ಚು ಹುಳಿ ಹಣ್ಣುಗಳು ಅಥವಾ ತುಂಬಾ ಬಿಸಿಯಾದ ಆಹಾರ ಸೇವನೆ ತಪ್ಪಿಸಿ.
  • ಜೀರ್ಣಕ್ರಿಯೆ ಸುಧಾರಿಸಲು, ಫೈಬರ್ ಭರಿತ ಆಹಾರ ತೆಗೆದುಕೊಳ್ಳಿ.
  • ಧೂಮಪಾನ, ಮದ್ಯಪಾನ ಮತ್ತು ತಂಬಾಕಿನಿಂದ ಸಂಪೂರ್ಣವಾಗಿ ದೂರವಿರಿ.
  • ಹುಣ್ಣು ಅಥವಾ ಗುಳ್ಳೆಗಳು ದೀರ್ಘಕಾಲದವರೆಗೆ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Mon, 17 November 25