National Cancer Awareness Day 2024: ನಿಮ್ಮವರೊಂದಿಗೆ ಈ ರೀತಿ ಸಂದೇಶ ಹಂಚಿಕೊಂಡು ಕ್ಯಾನ್ಸರ್ ದಿನದ ಕುರಿತು ಜಾಗೃತಿ ಮೂಡಿಸಿ
ಕ್ಯಾನ್ಸರ್ ಒಂದು ಮಹಾಮಾರಿ. ಮೊದಲು ಕ್ಯಾನ್ಸರ್ ಬಂದರೆ ಸತ್ತೇ ಹೋಗುತ್ತಾರೆ ಎನ್ನುವ ಹೆದರಿಕೆಯಿತ್ತು. ಆದರೆ ಈಗ ಅದರ ಅಗತ್ಯವಿಲ್ಲ. ಕ್ಯಾನ್ಸರ್ ಯಾವ ಹಂತದಲ್ಲಿದೆ ಎನ್ನುವುದರ ಮೇಲೆ ಆ ರೋಗಿಯ ಸಾವು ಬದುಕು ಅವಲಂಬಿತವಾಗಿರುತ್ತದೆ. ಹಾಗಾಗಿ ಜನರಿಗೆ ಈ ಕುರಿತು ಅರಿವು ಮೂಡಿಸುವುದರ ಜೊತೆಗೆ ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದು ಅವಶ್ಯವಾಗಿದೆ ಈ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿವರ್ಷ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸವೇನು? ಆಚರಣೆ ಮಾಡುವ ಉದ್ದೇಶವೇನು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ಯಾನ್ಸರ್ ಎಂಬ ಹೆಸರೇ ಭಯ ಹುಟ್ಟಿಸುತ್ತದೆ. ಇದೊಂದು ಮಹಾಮಾರಿ. ಮೊದಲು ಕ್ಯಾನ್ಸರ್ ಬಂದರೆ ಸತ್ತೇ ಹೋಗುತ್ತಾರೆ ಎನ್ನುವ ಹೆದರಿಕೆಯಿತ್ತು. ಆದರೆ ಈಗ ಅದರ ಅಗತ್ಯವಿಲ್ಲ. ಕ್ಯಾನ್ಸರ್ ಯಾವ ಹಂತದಲ್ಲಿದೆ ಎನ್ನುವುದರ ಮೇಲೆ ಆ ರೋಗಿಯ ಸಾವು ಬದುಕು ಅವಲಂಬಿತವಾಗಿರುತ್ತದೆ. ಹಾಗಾಗಿ ಜನರಿಗೆ ಈ ಕುರಿತು ಅರಿವು ಮೂಡಿಸುವುದರ ಜೊತೆಗೆ ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದು ಅವಶ್ಯವಾಗಿದೆ ಈ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿವರ್ಷ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸವೇನು? ಆಚರಣೆ ಮಾಡುವ ಉದ್ದೇಶವೇನು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ಯಾನ್ಸರ್ ಜಾಗೃತಿ ದಿನದ ಇತಿಹಾಸ:
ಮೊದಲ ಬಾರಿಗೆ ಸೆಪ್ಟೆಂಬರ್ 2014 ರಂದು ಆಗಿನ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರ ಸಚಿವರಾದ ಡಾ. ಹರ್ಷವರ್ಧನ್ ಅವರು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನಕ್ಕೆ ಚಾಲನೆ ನೀಡಿದರು. ಹಾಗಾಗಿ ಭಾರತದಲ್ಲಿ ಕಳೆದ ಹತ್ತು ವರ್ಷಗಳಿಂದ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ರೇಡಿಯಂ ಮತ್ತು ಪೊಲೊನಿಯಂ ಅನ್ನು ಅನ್ವೇಷಣೆ ಮಾಡಿದ ಮೇಡಮ್ ಕ್ಯೂರಿ ಅವರ ಹುಟ್ಟಿದ ದಿನವಾದ್ದರಿಂದ ಅವರ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಣೆ ಮಾಡಲಾಗುತ್ತದೆ. ಮೇಡಮ್ ಕ್ಯೂರಿ ಅವರ ಸಂಶೋಧನೆಗಾಗಿ 1911 ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು.
ಕ್ಯಾನ್ಸರ್ ಜಾಗೃತಿ ದಿನದ ಆಚರಣೆಯ ಉದ್ದೇಶ:
ಕ್ಯಾನ್ಸರ್ ಬಂದಾಗ ಅದನ್ನು ಆರಂಭಿಕ ಹಂತದಲ್ಲೆಯೇ ಪತ್ತೆ ಹಚ್ಚಿದರೆ ರೋಗಿಯನ್ನು ಬದಕಿಸುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ತಡವಾದಷ್ಟು ಮನುಷ್ಯನ ದೇಹವನ್ನು ಆವರಿಸುತ್ತದೆ. ಹೀಗಾಗಿ ಕ್ಯಾನ್ಸರ್ ಬಗ್ಗೆ ಸರಿಯಾದ ರೀತಿಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಈ ಆಚರಣೆಯ ಮೂಲ ಉದ್ದೇಶ ಆರಂಭದಲ್ಲೇ ರೋಗವನ್ನು ಪತ್ತೆ ಹಚ್ಚುವುದು ಮತ್ತು ಅದಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡುವುದಾಗಿದೆ.
ಇದನ್ನೂ ಓದಿ: ಉಗುರು ಸುಲಭವಾಗಿ ಮುರಿಯುತ್ತಿದೆಯೇ? ಹಾಗಿದ್ರೆ ದೇಹದಲ್ಲಿ ಈ ಪೋಷಕಾಂಶಗಳ ಕೊರತೆಯಾಗಿದೆ ಎಂದರ್ಥ
ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಸಂದೇಶಗಳು:
- ಬದುಕಿನಲ್ಲಿ ಎಷ್ಟೇ ಅಡೆತಡೆ ಬಂದರೂ ಅದನ್ನು ನಿವಾರಿಸುವ ಶಕ್ತಿ ನಿಮಗಿದೆ. ಆದ್ದರಿಂದ ಅನಾರೋಗ್ಯ ನಿಮ್ಮ ಜೀವನವನ್ನು ಆಳಲು ಬಿಡಬೇಡಿ. ಇಂದೇ ಜಾಗೃತರಾಗಿ.
- ವಿಶ್ವ ಕ್ಯಾನ್ಸರ್ ದಿನದ ಬಗ್ಗೆ ಹೆಚ್ಚಿನ ಅರಿವು ಮೂಡಿಸೋಣ. ನಮ್ಮ ಜೀವನದಿಂದ ಕ್ಯಾನ್ಸರ್ ನಿರ್ಮೂಲನೆ ಮಾಡೋಣ.
- ಕ್ಯಾನ್ಸರ್ ವ್ಯಕ್ತಿಯ ಜೀವನವನ್ನು ತೆಗೆದುಕೊಳ್ಳುವುದಲ್ಲದೆ ಕುಟುಂಬದ ಸಂತೋಷವನ್ನು ಹಾಳು ಮಾಡುತ್ತದೆ. ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಮುನ್ನ ಜಾಗೃತರಾಗಿ.
- ಕ್ಯಾನ್ಸರ್ ನಿಂದ ಬದುಕುಳಿದ ಜನರ ಪ್ರಮಾಣವು ಅದರಿಂದ ಸಾಯುವ ವ್ಯಕ್ತಿಗಳ ಸಂಖ್ಯೆಗಿಂತ ಹೆಚ್ಚಾಗಿದೆ. ನಿಮ್ಮ ಕನಸುಗಳನ್ನು ಎಂದಿಗೂ ಬಿಟ್ಟುಕೊಡಬೇಡಿ.
- ಜೀವನದಲ್ಲಿ ಕ್ಯಾನ್ಸರ್ ತೊಲಗಿಸಲು ಸತತ ಪ್ರಯತ್ನ ಮಾಡಬೇಕು. ಯುದ್ಧ ಮಾಡಿ ವಿಜಯಶಾಲಿಯಾಗಬೇಕು.
- ಕ್ಯಾನ್ಸರ್ ಗೆ ಚಿಕಿತ್ಸೆ ಇದೆ. ನಿಮಗೆ ಬೇಕಾಗಿರುವುದು ಆತ್ಮವಿಶ್ವಾಸ ಮತ್ತು ನಿಮ್ಮವರ ಬೆಂಬಲವಷ್ಟೇ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ