National Deworming Day: ಜಂತು ಹುಳವಿನ ಕಾಟದಿಂದ ಮುಕ್ತಿ ಪಡೆಯಲು ಈ ಸಲಹೆ ಪಾಲಿಸಿ

ಕರುಳಿನಲ್ಲಿರುವ ಈ ಕೆಲವು ಜಂತುಗಳು ಮನುಷ್ಯನ ಆಹಾರ, ರಕ್ತ ಹಂಚಿಕೊಳ್ಳುವುದರಿಂದ ಆ ವ್ಯಕ್ತಿಯಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ನಿತ್ರಾಣ ಉಂಟಾಗಬಹುದು. ಇದು ದೊಡ್ಡವರಿಗೆ ಮಾತ್ರವಲ್ಲ ಬದಲಾಗಿ ಮಕ್ಕಳಲ್ಲಿ ರಕ್ತಹೀನತೆ ಹಾಗೂ ಅವರ ಭೌದ್ಧಿಕ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ಜೊತೆಗೆ ಅವರ ಸ್ಮರಣಶಕ್ತಿ ಕಡಿಮೆಯಾಗಬಹುದು. ಹಾಗಾಗಿ ಈ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ. ಹಾಗಾದರೆ ಈ ಆರೋಗ್ಯ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ ತಿಳಿದುಕೊಳ್ಳಿ.

National Deworming Day: ಜಂತು ಹುಳವಿನ ಕಾಟದಿಂದ ಮುಕ್ತಿ ಪಡೆಯಲು ಈ ಸಲಹೆ ಪಾಲಿಸಿ
National Deworming Day
Edited By:

Updated on: Feb 09, 2025 | 10:54 AM

ಜಂತು ಹುಳವಿನ ಬಾಧೆಯಿಂದ ಬಳಲದವರಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ವರದಿಗಳ ಪ್ರಕಾರ ಪ್ರಪಂಚದ ಶೇ. 24ರಷ್ಟು ಜನರಲ್ಲಿ ಜಂತು ಹುಳ, ಬಾಧೆ ಇರುವ ಸಾದ್ಯತೆ ಇದೆ. ಜೊತೆಗೆ ಒಂದರಿಂದ ಹದಿನಾಲ್ಕು ವರ್ಷದ ಒಳಗಿನ ಸರಿ ಸುಮಾರು ಶೇ. 68ರಷ್ಟು ಮಕ್ಕಳಲ್ಲಿ ಇದರ ಬಾಧೆ ಇರಬಹುದು ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಕರುಳಿನಲ್ಲಿರುವ ಈ ಕೆಲವು ಜಂತುಗಳು ಮನುಷ್ಯನ ಆಹಾರ, ರಕ್ತ ಹಂಚಿಕೊಳ್ಳುವುದರಿಂದ ಆ ವ್ಯಕ್ತಿಯಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ನಿತ್ರಾಣ ಉಂಟಾಗಬಹುದು. ಇದು ದೊಡ್ಡವರಿಗೆ ಮಾತ್ರವಲ್ಲ ಬದಲಾಗಿ ಮಕ್ಕಳಲ್ಲಿ ರಕ್ತಹೀನತೆ ಹಾಗೂ ಅವರ ಭೌದ್ಧಿಕ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ಜೊತೆಗೆ ಅವರ ಸ್ಮರಣಶಕ್ತಿ ಕಡಿಮೆಯಾಗಬಹುದು. ಹಾಗಾಗಿ ಈ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ. ಹಾಗಾದರೆ ಈ ಆರೋಗ್ಯ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ ತಿಳಿದುಕೊಳ್ಳಿ.

ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಕಡಿಮೆಗೊಳಿಸಲು ಹಾಗೂ ಜಂತು ಹುಳುಗಳ ಬಾಧೆಯಿಂದ ಮಕ್ಕಳನ್ನು ರಕ್ಷಿಸಲು ಫೆಬ್ರವರಿ ಮತ್ತು ಆಗಸ್ಟ್ ತಿಂಗಳಲ್ಲಿ ಮಕ್ಕಳಿಗೆ ಆಲ್ ಬೆಂಡಾಜೋಲ್ ಎಂಬ ಜಂತುಹುಳು ನಿವಾರಣಾ ಮಾತ್ರೆ ನೀಡುವ ಮೂಲಕ ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹೊಟ್ಟೆ ಹುಳಗಳ ನಿರ್ಮೂಲನೆಗಾಗಿ ಸರಕಾರವು ಈ ದಿನವನ್ನು ಆಚರಣೆ ಮಾಡುತ್ತದೆ. ಜಂತುಹುಳು ನಿರ್ಮೂಲನೆಗೆ ಮಾತ್ರೆ ಸೇವಿಸುವುದು ಮಾತ್ರವಲ್ಲದೆ, ಶೌಚಾಲಯಕ್ಕೆ ಹೋಗಿ ಬಂದ ನಂತರ ಹಾಗೂ ಊಟಕ್ಕೆ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಇದನ್ನು ಮಕ್ಕಳಿಗೆ ಪೋಷಕರು ಕಲಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಈ ಸಮಸ್ಯೆಗೆ ಚಿಕಿತ್ಸೆ ಹೇಗೆ?

ಜಂತು ಹುಳ ನಿವಾರಣೆಗಾಗಿ, ವಯಸ್ಸಿಗೆ ಅನುಗುಣವಾಗಿ ಸೂಕ್ತ ಪ್ರಮಾಣದ ಡೋಸೇಜ್‌ ಪ್ರಕಾರ ಅಲ್ಬೆಂಡಜೋಲ್‌ (Albendazole) ಮಾತ್ರೆಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಈ ಹುಳುಗಳಲ್ಲಿ ಜಂತುಹುಳು, ಲಾಡಿ ಹುಳು, ಕೊಕ್ಕೆಹುಳು, ಚಿಲುಮಿ ಹುಳು ಹಾಗೂ ಚಾಟಿ ಹುಳು ಎಂಬ ವಿವಿಧ ಪ್ರಕಾರಗಳಿವೆ. ಇವುಗಳಿಗೆ ಒಂದು ಡೋಸ್‌ ಅಲ್ಬೆಂಡಜೋಲ್‌ (400 ಎಂ.ಜಿ.) ಮಾತ್ರೆ ನೀಡುವ ಮೂಲಕ ಮನುಷ್ಯನ ಕರುಳಿನಲ್ಲಿರುವ ಈ ಎಲ್ಲಾ ಹುಳುಗಳನ್ನು ನಿರ್ಮೂಲನೆ ಮಾಡಬಹುದು. ಒಂದರಿಂದ ಎರಡು ವರ್ಷದ ಮಕ್ಕಳಿಗೆ ಕೇವಲ ಅರ್ಧ ಮಾತ್ರೆಯನ್ನು ನೀಡಬೇಕು ಹಾಗೂ ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಒಂದು ಪೂರ್ತಿ ಮಾತ್ರೆಯನ್ನು ನೀಡಬೇಕು. ಮೂರು ವರ್ಷದವರೆಗಿನ ಮಕ್ಕಳಿಗೆ ಮಾತ್ರೆಯನ್ನು ಪುಡಿ ಮಾಡಿ ಶುದ್ಧವಾದ ನೀರನಲ್ಲಿ ಸೇರಿಸಿ ಕುಡಿಸುವುದು. ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಈ ಮಾತ್ರೆಯನ್ನು ಚೀಪಿ ತಿನ್ನಿಸಬೇಕು ಎಂದು ಹೇಳಲಾಗುತ್ತದೆ. ಆದರೆ ಈ ಮಾತ್ರೆಗಳನ್ನು ವೈದ್ಯರ ಸಲಹೆಯನುಸಾರ ತೆಗೆದುಕೊಳ್ಳಿ. ಯಾವುದೇ ಕಾರಣಕ್ಕೂ ನೀವಾಗಿಯೇ ಈ ಮಾತ್ರೆಗಳ ಸೇವನೆ ಮಾಡಬೇಡಿ.

ಇದನ್ನೂ ಓದಿ: ಹುರಿದ ಅಗಸೆ ಬೀಜದಲ್ಲಿ ಉತ್ತಮ ಆರೋಗ್ಯ, ಅದರಲ್ಲಿದೆ 7 ಪ್ರಯೋಜನಗಳು

ತಡೆಗಟ್ಟುವುದು ಹೇಗೆ?

ಬಯಲಿನಲ್ಲಿ ಮಲ ವಿಸರ್ಜನೆ ಮಾಡಬೇಡಿ, ಮನೆಯ ಹೊರಗೆ ಪಾದರಕ್ಷೆಯನ್ನು ಧರಿಸದೆಯೇ ಹೋಗಬೇಡಿ. ಇದರ ಜೊತೆಗೆ ಒಂದು ಸಲ ಈ ಮಾತ್ರೆ (ಅಲ್ಬೆಂಡಜೋಲ್‌) ಸೇವನೆಯ ಅನಂತರ ಕರುಳಿನಲ್ಲಿರುವ ಹುಳುಗಳು ನಾಶಗೊಂಡರೂ ಪುನಃ 8ರಿಂದ 10 ವಾರಗಳಲ್ಲಿ ಹೊಸ ಹುಳುಗಳು ಕರುಳಿನಲ್ಲಿ ಕಾಣಿಸಿಕೊಳ್ಳಬಹುದು. ಹಾಗಾಗಿ ಪ್ರತೀ ಆರು ತಿಂಗಳಿಗೊಮ್ಮೆ ಹುಳ ನಿವಾರಣ ಮಾತ್ರೆಗಳನ್ನು ಸೇವಿಸುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ