
ಇತ್ತೀಚೆಗಿನ ದಿನಗಳಲ್ಲಿ ಮಾರಕ ಕಾಯಿಲೆ ಕ್ಯಾನ್ಸರ್ (cancer) ಪ್ರಕರಣಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಆದರೆ ಈ ಕಾಯಿಲೆ ಇದೆ ಎಂದು ಗೊತ್ತಾಗುವ ಹೊತ್ತಿಗೆಗಾಗಲೇ ಮೂರು, ನಾಲ್ಕನೇ ಹಂತ ತಲುಪಿ ಆಗಿರುತ್ತದೆ. ಹೀಗಾಗಿ ಈ ಕ್ಯಾನ್ಸರ್ ಕಾಯಿಲೆಯನ್ನು ಮುಂಚಿತವಾಗಿ ಪತ್ತೆ ಹಚ್ಚುವುದು ಬಹಳ ಕಷ್ಟಕರ. ಆದರೆ ಈ ಮಾರಕ ಕಾಯಿಲೆಯನ್ನು ವೇಗ ಹಾಗೂ ನಿಖರವಾಗಿ ಪತ್ತೆ ಹಚ್ಚಲು ಎಐ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಈ ತಂತ್ರಜ್ಞಾನವು ಕ್ಯಾನ್ಸರ್ ರೋಗವನ್ನು ಮೊದಲೇ ಗುರುತಿಸಲು, ಕಡಿಮೆ ಸಮಯದಲ್ಲಿ ಕಾಯಿಲೆ ಯಾವ ಹಂತಕ್ಕೆ ತಲುಪಿದೆ ಎಂದು ತಿಳಿದುಕೊಂಡು, ಅದಕ್ಕೆ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ನೀಡಲು ಸಹಾಯ ಮಾಡುತ್ತದೆ. ಆದರೆ ಕ್ಯಾನ್ಸರ್ ಕಾಯಿಲೆ ಪತ್ತೆ ಹಚ್ಚಲು, ಶಸ್ತ್ರ ಚಿಕಿತ್ಸೆಗೆ ಎಐ ತಂತ್ರಜ್ಞಾನ (AI Technology) ಎಷ್ಟು ಪ್ರಯೋಜನಕಾರಿಯಾಗಿದೆ. ಈ ಬಗ್ಗೆ ನವದೆಹಲಿಯ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿಯ ಪ್ರಧಾನ ಸಲಹೆಗಾರ ಡಾ. ಅಕ್ಷತ್ ಮಲಿಕ್ (Dr Akshat Malik, Principal Consultant, Surgical Oncology at Max Hospital, Saket, New Delhi) ಹೇಳೋದೇನು? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಎಐ ಪರಿಕರಗಳು ದಿನನಿತ್ಯದ ಕ್ಯಾನ್ಸರ್ ರೋಗನಿರ್ಣಯದ ಅತ್ಯಗತ್ಯ ಭಾಗವಾಗಿದೆ. ವೈದ್ಯರು ಸ್ಕ್ಯಾನ್‌ಗಳು, ಸ್ಲೈಡ್‌ಗಳು ಮತ್ತು ಜೆನೆಟಿಕ್ ಪರೀಕ್ಷೆಗಳನ್ನು ಹೆಚ್ಚಿನ ನಿಖರತೆಯೊಂದಿಗೆ ಅರ್ಥೈಸಲು ಇದು ಸಹಾಯ ಮಾಡುತ್ತವೆ. ಎಐ ಮಾದರಿಗಳು ಈಗ ಮ್ಯಾಮೊಗ್ರಾಮ್‌ಗಳು, ಸಿಟಿಗಳು, ಎಂಆರ್ ಐ ಮತ್ತು ರೋಗಶಾಸ್ತ್ರ ಸ್ಲೈಡ್‌ಗಳನ್ನು ಸೆಕೆಂಡುಗಳಲ್ಲಿ ಸ್ಕ್ಯಾನ್ ಮಾಡುತ್ತವೆ. ಇದು ಅನುಮಾನಾಸ್ಪದ ಪ್ರದೇಶಗಳನ್ನು ಹೈಲೈಟ್ ಮಾಡಿ, ರೇಡಿಯಾಲಜಿಸ್ಟ್‌ಗಳು ಮತ್ತು ರೋಗಶಾಸ್ತ್ರಜ್ಞರು ಗೆಡ್ಡೆಯ ಪ್ರದೇಶಗಳ ಮೇಲೆ ತ್ವರಿತವಾಗಿ ಗಮನಹರಿಸಲು ಸಹಾಯ ಮಾಡುತ್ತವೆ. ಈ ತಂತ್ರಜ್ಞಾನವು ಗೆಡ್ಡೆಯ ಹರಡುವಿಕೆಯನ್ನು ಮೊದಲೇ ಗುರುತಿಸಿ, ರೋಗನಿರ್ಣಯದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಡಾ. ಅಕ್ಷತ್ ಮಲಿಕ್ ಎಂದು ತಿಳಿಸಿದ್ದಾರೆ.
ಕ್ಯಾನ್ಸರ್-ಚಾಲನಾ ರೂಪಾಂತರಗಳು ಮತ್ತು ಬಯೋಮಾರ್ಕರ್‌ಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆಯೂ ಜೀನೋಮಿಕ್ ಮತ್ತು ಆಣ್ವಿಕ ಡೇಟಾವನ್ನು ಪ್ರಕ್ರಿಯೆಗೊಳಿಸುತ್ತದೆ. ಇದು ರೋಗಿಗೆ ಸರಿಯಾದ ಚಿಕಿತ್ಸೆಗಳನ್ನು ನೀಡಲು ಸಹಾಯ ಮಾಡುತ್ತದೆ . ಎಐ ಚಾಲಿತ ಜೀನೋಮಿಕ್ ವಿಶ್ಲೇಷಣೆಯು ರೋಗಿಯ ಗೆಡ್ಡೆಯು ಚಿಕಿತ್ಸೆಗೆ ಹೇಗೆ ವರ್ತಿಸಬಹುದು ಹಾಗೂ ಜೀನ್ ಗಳಲ್ಲಿ ಆಗುವ ಬದಲಾವಣೆಗಳನ್ನು ಕಂಡುಹಿಡಿಯಲು ಸಹಕಾರಿಯಾಗಿದೆ ಎಂದಿದ್ದಾರೆ ಕ್ಯಾನ್ಸರ್ ತಜ್ಞರು.
ಇದನ್ನೂ ಓದಿ : National Doctors Day 2025: ಕಾಲಕಾಲಕ್ಕೆ ವೈದ್ಯ ಲೋಕದಲ್ಲಿ ಆದ ಬದಲಾವಣೆಗಳೇನು?
ರೋಗಿಯ ಇತಿಹಾಸ, ಇಮೇಜಿಂಗ್ ಮತ್ತು ಜೆನೆಟಿಕ್ ಪ್ರೊಫೈಲ್ ಗಳನ್ನು ಸಂಯೋಜಿಸುವ ಮೂಲಕ ಎಐ ಗೆಡ್ಡೆಯೂ ಯಾವ ಹಂತದಲ್ಲಿದೆ ಹಾಗೂ ಯಾವ ರೀತಿಯ ಚಿಕಿತ್ಸೆ ಸೂಕ್ತ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಈ ಎಐ ಮಾದರಿಗಳು ರೋಗಿಯ ಫಲಿತಾಂಶಗಳ ಕುರಿತು ಮುನ್ಸೂಚಕ ಅಂಕಗಳನ್ನು ನೀಡುತ್ತವೆ, ರೋಗಿಯ ಅಗತ್ಯತೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲು ಹಾಗೂ ಹೆಚ್ಚಿನ ಅಪಾಯವನ್ನು ಮೊದಲೇ ಗುರುತಿಸಲು ಸಹಕಾರಿಯಾಗಿದೆ. ಬಾಯಿಯ ಅಥವಾ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ವೇಳೆಯಲ್ಲಿ ಯಾವ ರೋಗಿಗಳಿಗೆ ತಕ್ಷಣದ ಗಮನ ನೀಡಬೇಕು ಎಂಬುದನ್ನು ತಿಳಿಸಲು ಎಐ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ ಡಾ. ಮಲಿಕ್.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ