ಬೆಳಿಗ್ಗೆ ಎದ್ದಾಗ ಬೆಡ್ ಕಾಫಿ ಸೇವನೆ ಮಾಡುವವರು ಅನೇಕರಿದ್ದಾರೆ. ಬೆಳಿಗ್ಗೆನಿಂದ ರಾತ್ರಿಯವರೆಗೆ ನಾಲ್ಕೈದು ಬಾರಿ ಕಾಫಿ ಹೀರುವ ಜನರಿದ್ದಾರೆ. ಕಾಫಿ ಅವರಿಗೆ ಚಟವಾಗಿರುತ್ತದೆ. ಕಾಫಿ ಮೂಡ್ ಫ್ರೆಶ್ ಮಾಡುತ್ತದೆ ಎನ್ನುವ ಕಾರಣಕ್ಕೆ ಕಚೇರಿಯಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಕಾಫಿ ಸೇವನೆ ಮಾಡುತ್ತಾರೆ. ಕಾಫಿಯಲ್ಲಿಯೇ ಅನೇಕ ವಿಧಗಳಿವೆ. ಅದ್ರಲ್ಲಿ ಎಸ್ಪ್ರೆಸೊ (Espresso) ಕೂಡ ಒಂದು. ಎಸ್ಪ್ರೆಸೊವನ್ನು ಶ್ರೀಮಂತ ಶೈಲಿಯ ಕಾಫಿ ಎನ್ನಬಹುದು. ಇಟಾಲಿಯನ್ ಮೂಲಕ ಕಾಫಿ ಬ್ಯೂಯಿಂಗ್ ವಿಧಾನವನ್ನು ಎಸ್ಪ್ರೆಸೊ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಸ್ಪ್ರೆಸೊ ಕಾಫಿ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇದರಿಂದ ಪ್ರಯೋಜನಗಳು ಎಷ್ಟು ಇದೆಯೋ ಅಷ್ಟೇ ಆರೋಗ್ಯಕ್ಕೆ ಹಾನಿಯನ್ನು ಮಾಡುತ್ತದೆ.
ಕಾಫಿಯನ್ನು ಮಿತವಾಗಿ ಸೇವನೆ ಮಾಡಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಕಾಫಿಯಲ್ಲಿರುವ ನೈಸರ್ಗಿಕ ರಾಸಾಯನಿಕಗಳು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಪಾರ್ಶ್ವವಾಯು ಸೇರಿದಂತೆ ಹೃದಯ ಸಮಸ್ಯೆ ಕಾರಣವಾಗುತ್ತದೆ. ಅದಲ್ಲದೆ ಕೆಲವು ಸಂಶೋಧನೆಗಳು ಹೇಳುವ ಪ್ರಕಾರ ಇದು ಪುರುಷ ಹಾಗೂ ಮಹಿಳೆ ಇಬ್ಬರ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಿದೆ.
ದಿನಕ್ಕೆ ಮೂರರಿಂದ ಐದು ಎಸ್ಪ್ರೆಸೊಗಳನ್ನು ಸೇವಿಸುವ ಜನರು ಎಸ್ಪ್ರೆಸೊವನ್ನು ಸೇವಿಸದವರಿಗಿಂತ ಹೆಚ್ಚಿನ ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುತ್ತಾರೆ. ಮೂರರಿಂದ ಐದು ಎಸ್ಪ್ರೆಸೊ ಪಾನೀಯಗಳನ್ನು ಕುಡಿಯುವ ಪುರುಷರು ಮಹಿಳೆಯರಿಗಿಂತ ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುತ್ತಾರೆ ಎಂಬುದು ತಿಳಿದು ಬಂದಿದೆ.
ಹೆಚ್ಚು ಎಸ್ಪ್ರೆಸೊ ಕಾಫಿ ಕುಡಿಯುವುದರಿಂದ ಪುರುಷರಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಆದರೆ ಮಹಿಳೆಯರಲ್ಲಿ ಇದು ಕಡಿಮೆ. ಇತ್ತೀಚಿನ ಸಂಶೋಧನೆಯು ದಿನಕ್ಕೆ ಮೂರರಿಂದ ಐದು ಕಪ್ ಎಸ್ಪ್ರೆಸೊ ಕುಡಿಯುವ ಪುರುಷರಿಗೆ ಎಚ್ಚರಿಕೆ ನೀಡಿದೆ. ಹಾಗಾಂತ ಮಹಿಳೆಯರು ಸುರಕ್ಷಿತರು ಎಂದಲ್ಲ. ದಿನಕ್ಕೆ ಆರಕ್ಕಿಂತ ಹೆಚ್ಚು ಬಾರಿ ಸೇವಿಸಿದರೆ ಅವರ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯವಿದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಬೇಕರಿ ಶೈಲಿಯಲ್ಲಿ ಮನೆಯಲ್ಲೇ ಮಾಡಿ ಗೋಡಂಬಿ ಬರ್ಫಿ , ಇಲ್ಲಿದೆ ರೆಸಿಪಿ
ಇಷ್ಟೆಲ್ಲಾ ಇದ್ದರೂ ಎಸ್ಪ್ರೆಸೊ ಕಾಫಿಯಲ್ಲಿ ಹಲವು ಆರೋಗ್ಯ ಪ್ರಯೋಜನಗಳಿವೆ. ಬಿಸಿ ನೀರಿನಲ್ಲಿ ಕಾಫಿ ಪುಡಿಯನ್ನು ಸೇರಿಸಿ ಅಥವಾ ಕುದಿಸಿ ಎಸ್ಪ್ರೆಸೊ ಕಾಫಿಯನ್ನು ತಯಾರಿಸಲಾಗುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದರೆ ಅತಿಯಾದ ಸೇವನೆ ಒಳ್ಳೆಯದಲ್ಲ. ನೀವೂ ಎಸ್ಪ್ರೆಸೊ ಅಥವಾ ಸಾಮಾನ್ಯ ಕಾಫಿ ಪ್ರಿಯರಾಗಿದ್ದರೆ ಕಾಫಿ ಸೇವನೆಯನ್ನು ಕಡಿಮೆ ಮಾಡಿ. ಆರೋಗ್ಯ ಕಾಪಾಡಿಕೊಳ್ಳಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ