ಈ ಆರೋಗ್ಯ ಸಮಸ್ಯೆ ನಿಮಗಿದ್ದು ರಾತ್ರಿ ಹಾಲು ಕುಡಿಯುತ್ತಿದ್ದರೆ ನೀವು ತುಂಬಾ ಅಪಾಯದಲ್ಲಿದ್ದೀರಿ ಎಂದರ್ಥ!

ಮಲಗುವ ಮುನ್ನ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರು ನಂಬುತ್ತಾರೆ. ಅದಕ್ಕಾಗಿಯೇ ಹಿರಿಯರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಮಲಗುವಾಗ ಒಂದು ಲೋಟ ಬಿಸಿ ಬಿಸಿ ಹಾಲು ಕುಡಿದು ಮಲಗುತ್ತಾರೆ. ಅದಲ್ಲದೆ ಹಾಲು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ರಾತ್ರಿ ಸಮಯದಲ್ಲಿ ಹಾಲಿನ ಸೇವನೆ ಎಲ್ಲರಿಗೂ ಪ್ರಯೋಜನಕಾರಿಯಲ್ಲ. ಹೌದು ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಹಾಲು ಒಳ್ಳೆಯದಲ್ಲ, ಬದಲಾಗಿ ಅದು ಆ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾದ್ರೆ ಇದು ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈ ಆರೋಗ್ಯ ಸಮಸ್ಯೆ ನಿಮಗಿದ್ದು ರಾತ್ರಿ ಹಾಲು ಕುಡಿಯುತ್ತಿದ್ದರೆ ನೀವು ತುಂಬಾ ಅಪಾಯದಲ್ಲಿದ್ದೀರಿ ಎಂದರ್ಥ!
Drinking Milk At Night Risks & Precautions

Updated on: Jan 05, 2026 | 8:28 PM

ಹಾಲು (Milk) ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪ್ರತಿದಿನ ಹಾಲು ಕುಡಿಯುತ್ತಾರೆ. ದಿನನಿತ್ಯ ಒಂದು ಲೋಟ ಹಾಲು ಕುಡಿಯುವುದರಿಂದ ದೇಹಕ್ಕೆ ಅನೇಕ ರೀತಿಯ ಪೋಷಕಾಂಶಗಳು ದೊರೆಯುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿಯೂ ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಆಯಾಸವನ್ನು ಕಡಿಮೆ ಮಾಡುತ್ತದೆ. ಬೆಳಿಗ್ಗೆ ಅಥವಾ ಸಂಜೆ ಹಾಲು ಕುಡಿಯುವುದು ಪ್ರಯೋಜನಕಾರಿ. ಆದರೆ ಕೆಲವರಿಗೆ ಹಾಲು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳನ್ನು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಇದು ಕೆಲವರಿಗೆ ಆಶ್ಚರ್ಯ ಹುಟ್ಟಿಸಿದರೂ ಕೂಡ ಸತ್ಯ. ಹಾಗಾದ್ರೆ ಇದು ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಹಾಲಿನ ಸೇವನೆ ಯಾರಿಗೆ ಒಳ್ಳೆಯದಲ್ಲ?

ಲ್ಯಾಕ್ಟೋಸ್ ಅಲರ್ಜಿಯಿಂದಾಗಿ ಹಾಲು ಸೇವನೆ ಮಾಡುವುದು ಕೆಲವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ, ಬೊಜ್ಜಿನ ಸಮಸ್ಯೆ ಎಲ್ಲರಲ್ಲಿಯೂ ಹೆಚ್ಚಾಗುತ್ತಿದ್ದು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ರಾತ್ರಿ ಮಲಗುವಾಗ ಹಾಲು ಕುಡಿಯಬಾರದು. ಏಕೆಂದರೆ ಹಾಲಿನಲ್ಲಿರುವ ಕೊಬ್ಬು ಮತ್ತು ಕ್ಯಾಲೊರಿಗಳನ್ನು ದೇಹ ಹೀರಿಕೊಂಡು, ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಈಗಾಗಲೇ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಸಮಯದಲ್ಲಿ ಹಾಲು ಕುಡಿಯುವುದನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು.

ಇದನ್ನೂ ಓದಿ: ಮೊಟ್ಟೆ ತಿಂದ್ರೆ ಕೆಮ್ಮು ಕಡಿಮೆಯಾಗುತ್ತದೆಯೇ? ಇಲ್ಲಿದೆ ಅಚ್ಚರಿ ಮಾಹಿತಿ

ಅಷ್ಟೇ ಅಲ್ಲ, ಸೈನಸ್ ಮತ್ತು ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ರಾತ್ರಿ ಹಾಲು ಕುಡಿಯಬಾರದು. ಏಕೆಂದರೆ ಈ ಅಭ್ಯಾಸ ಲೋಳೆಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಟೈಪ್ 2 ಮಧುಮೇಹ ಇರುವವರು ಹಾಲಿನ ಸೇವನೆಯ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು. ಅದಕ್ಕಾಗಿಯೇ ಮಧುಮೇಹ ರೋಗಿಗಳು ರಾತ್ರಿಯಲ್ಲಿ ಹಾಲು ಕುಡಿಯದಂತೆ ವೈದ್ಯರು ಸಲಹೆ ನೀಡುತ್ತಾರೆ. ಹಾಲಿನಲ್ಲಿರುವ ಲ್ಯಾಕ್ಟೋಸ್ ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇನ್ನು ಗ್ಯಾಸ್, ಅಜೀರ್ಣ ಅಥವಾ ಆಮ್ಲೀಯತೆಯಿಂದ ಬಳಲುತ್ತಿರುವವರು ರಾತ್ರಿಯಲ್ಲಿ ಹಾಲು ಕುಡಿಯಬಾರದು, ಏಕೆಂದರೆ ಇದು ಈ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ