ಈರುಳ್ಳಿ ಎಂಬ ತರಕಾರಿ ಮಾಡುವ ಉಪಕಾರ ತಾಯಿಯಿಂದ ಆಗುವುದಿಲ್ಲ ಎಂಬುದು ಆಗಾಗ ನಾವು ಕೇಳಿಬರುವ ಮಾತಾಗಿದೆ. ಅಂದರೆ ಈರುಳ್ಳಿ ಮಹಾತ್ಮೆ (Doctor) ಅಷ್ಟು ಪ್ರಭಾವಶಾಲಿಯಾಗಿದೆ. ಈರುಳ್ಳಿ ಸಾಮಾನ್ಯವಾಗಿ ಪ್ರಪಂಚದಾದ್ಯಂತ ಅಡುಗೆಯಲ್ಲಿ ಬಳಸಲಾಗುವ ತರಕಾರಿಯಾಗಿದೆ. ಬರ್ಗರ್‌ನಿಂದ ಸಾಂಪ್ರದಾಯಿಕ ಅಡುಗೆ ಮನೆಗಳಲ್ಲಿಯೂ ಎಲ್ಲದಕ್ಕೂ ಸುರುಚಿ/ಸುವಾಸನೆಗಾಗಿ ಈರುಳ್ಳಿ ಬೇಕೇ ಬೇಕು. ಹಸಿರು ಈರುಳ್ಳಿ ಊಟಕ್ಕೆ ಉಪ್ಪಿನಕಾಯಿಯಂತೆ ನಂಜಿಕೊಂಡು ತಿನ್ನುವವರೂ ಇದ್ದಾರೆ. ಆದರೆ ಕೆಲವರಿಗೆ ಇದರ ರುಚಿ ಇಷ್ಟವಾಗದಿರಬಹುದು. ಹಸಿ ಈರುಳ್ಳಿ ತಿಂದ ನಂತರವೂ ಬಾಯಿ ದುರ್ವಾಸನೆ ಬರಬಹುದು ಎಂದು ವರಾತ ತೆಗೆಯುವವರು ಇದ್ದಾರೆ. ಹಾಗಾದರೆ ಇಂತಹ ಈರುಳ್ಳಿಯನ್ನು 1 ತಿಂಗಳ ಕಾಲ ತಿನ್ನದಿದ್ದರೆ ( Eating Onions) ಏನಾಗುತ್ತದೆ ಎಂಬುದನ್ನು ಈಗ ತಿಳಿದುಕೊಳ್ಳೋಣ (Onion and Health).
ಈರುಳ್ಳಿ ಕೇವಲ ರುಚಿಗೆ ಅಲ್ಲ. ಅವು ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿವೆ. ಇವೆಲ್ಲವೂ ನಿಮ್ಮ ದೇಹವನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಈರುಳ್ಳಿಯಿಂದ ವಿಟಮಿನ್ ಸಿ, ಬಿ6 ಮತ್ತು ಫೋಲೇಟ್ ಲಭ್ಯವಿದೆ. ಬಲವಾದ ಪ್ರತಿರಕ್ಷಣಾ ವ್ಯವಸ್ಥೆ, ಜೀವಕೋಶದ ಬೆಳವಣಿಗೆ ಮತ್ತು ಆರೋಗ್ಯಕರ ಚಯಾಪಚಯ ಕ್ರಿಯೆಗೆ ಅವು ಅವಶ್ಯಕ.
ಇದನ್ನೂ ಓದಿ: kitchen Tips in Kannada – ಈರುಳ್ಳಿ ಹಾಳಾಗದಂತೆ ಸಂಗ್ರಹಿಸಿಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಈರುಳ್ಳಿಯು ಅಲೈಲ್ ಪ್ರೊಪೈಲ್ ಡೈಸಲ್ಫೈಡ್ ನಂತಹ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದು ಉರಿಯೂತದ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ.
ಈರುಳ್ಳಿ ಆಹಾರದ ಫೈಬರ್‌ನ ಉತ್ತಮ ಮೂಲವಾಗಿದೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಫೈಬರ್ ಅತ್ಯಗತ್ಯ. ಹಾಗಾಗಿ ಈರುಳ್ಳಿ ತಿನ್ನುವುದನ್ನು ನಿಲ್ಲಿಸುವುದು ಮಲಬದ್ಧತೆ ಅಥವಾ ಇತರ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.
ಈರುಳ್ಳಿ ಅಲಿಸಿನ್ ಮತ್ತು ಕ್ವೆರ್ಸೆಟಿನ್ ಅನ್ನು ಹೊಂದಿರುತ್ತದೆ. ಈರುಳ್ಳಿ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಈ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಈರುಳ್ಳಿಯನ್ನು ಸೇವಿಸುವುದನ್ನು ನೀವು ನಿಲ್ಲಿಸಿದರೆ, ಅದು ಕಾಲಾನಂತರದಲ್ಲಿ ನಿಮ್ಮ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಈರುಳ್ಳಿ ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ನಿಮ್ಮ ಆಹಾರದಿಂದ ಅವುಗಳನ್ನು ತೆಗೆದುಹಾಕುವುದು ಆ ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು. ಈರುಳ್ಳಿಯನ್ನು ದೂರ ಇಡುವುದರಿಂದ ಮ್ಯಾಂಗನೀಸ್, ಪೊಟ್ಯಾಸಿಯಮ್, ವಿಟಮಿನ್ ಸಿ, ಬಿ6 ಮತ್ತು ಫೋಲೇಟ್ ನಂತಹ ಖನಿಜಾಂಶಗಳು ದೇಹಕ್ಕೆ ಲಭ್ಯವಾಗುವುದಿಲ್ಲ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಆಯಾಸ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕೆಂಪು ರಕ್ತ ಕಣಗಳಂತಹ ಸಮಸ್ಯೆಗಳು ಕಾಡುತ್ತವೆ.
ಜೀವನಶೈಲಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Fri, 7 June 24