Guava Side Effects: ಈ ಸಮಸ್ಯೆ ಇರುವವರು ಪೇರಳೆ ಹಣ್ಣನ್ನು ಅಪ್ಪಿ ತಪ್ಪಿಯೂ ಸೇವಿಸಬೇಡಿ
ಪೇರಳೆಯಲ್ಲಿ ನಾರಿನಂಶ, ಜೀವಸತ್ವಗಳು ಅಧಿಕವಾಗಿವೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಹಾಗಾಗಿ ಈ ಹಣ್ಣು ಮಧುಮೇಹಿಗಳಿಗೆ ಒಳ್ಳೆಯದು. ಇದಲ್ಲದೆ, ಪೇರಳೆ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಆದರೆ ಕೆಲವರು ಅದರ ಬಳಕೆಯನ್ನು ತಪ್ಪಿಸಬೇಕು. ಏಕೆ ಗೊತ್ತಾ? ಇದರಿಂದಾಗುವ ಅಡ್ಡಪರಿಣಾಮಗಳೇನು? ಇಲ್ಲಿದೆ ಮಾಹಿತಿ
ಪೇರಳೆ ಹಣ್ಣು ರುಚಿಯ ಜೊತೆಗೆ ಒಳ್ಳೆಯ ಪೌಷ್ಟಿಕಾಂಶಗಳನ್ನು ಒಳಗೂಂಡಿದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಫೈಬರ್ ಸಮೃದ್ಧವಾಗಿದೆ. ಅಲ್ಲದೆ ಪೇರಳೆಯಲ್ಲಿ ನಾರಿನಂಶ, ಜೀವಸತ್ವಗಳು ಅಧಿಕವಾಗಿವೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಹಾಗಾಗಿ ಈ ಹಣ್ಣು ಮಧುಮೇಹಿಗಳಿಗೆ ಒಳ್ಳೆಯದು. ಇದಲ್ಲದೆ, ಪೇರಳೆ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಆದರೆ ಕೆಲವರು ಅದರ ಬಳಕೆಯನ್ನು ತಪ್ಪಿಸಬೇಕು. ಏಕೆ ಗೊತ್ತಾ? ಇದರಿಂದಾಗುವ ಅಡ್ಡಪರಿಣಾಮಗಳೇನು? ಇಲ್ಲಿದೆ ಮಾಹಿತಿ.
ಪೇರಳೆ ಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ನಂತಹ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದುರ್ಬಲ ಜೀರ್ಣಕ್ರಿಯೆ, ಅಂದರೆ ತಿಂದ ಆಹಾರ ಬೇಗ ಜೀರ್ಣವಾಗದಿರುವವರು, ಶೀತ ಮತ್ತು ಕೆಮ್ಮಿನ ಸಮಸ್ಯೆ ಇರುವವರು ಪೇರಳೆ ಹಣ್ಣನ್ನು ತಿನ್ನಬಾರದು. ಏಕೆಂದರೆ ಇದು ಈ ರೋಗ ಲಕ್ಷಣಗಳನ್ನು ಉಲ್ಭಣಗೊಳಿಸುತ್ತದೆ. ಅದರಲ್ಲಿಯೂ ಈ ಹಣ್ಣನ್ನು ವಿಶೇಷವಾಗಿ ರಾತ್ರಿಯಲ್ಲಿ ತಿನ್ನಬಾರದು.
ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು
ಪೇರಳೆ ಹಣ್ಣು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ಅತಿಯಾಗಿ ತಿನ್ನುವುದು ಕೂಡ ಒಳ್ಳೆಯದಲ್ಲ. ಇನ್ನು ಶಸ್ತ್ರಚಿಕಿತ್ಸೆಗೆ ಒಳಗಾದವರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಪೇರಳೆ ಹಣ್ಣನ್ನು ಸೇವನೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಇದರಲ್ಲಿ ಫೈಬರ್ ಸಮೃದ್ಧವಾಗಿದ್ದು ಇದನ್ನು ಅತಿಯಾಗಿ ತಿನ್ನುವುದರಿಂದ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಪೇರಳೆ ಎಲೆಗಳನ್ನು ಸೇವಿಸುವುದರಿಂದ ರಕ್ತಹೀನತೆ, ತಲೆನೋವು ಮತ್ತು ಮೂತ್ರಪಿಂಡದ ಸಮಸ್ಯೆಗಳು ಉಂಟಾಗಬಹುದು. ಅದೂ ಅಲ್ಲದೆ ಇದರಲ್ಲಿರುವ ನೈಸರ್ಗಿಕ ಸಕ್ಕರೆ ಅಂಶವೂ ಕೂಡ ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು.
ಇದನ್ನೂ ಓದಿ: ಮೂಗಿನೊಳಗೆ ಬೆರಳು ಹಾಕುವ ಅಭ್ಯಾಸ ನಿಮಗಿದೆಯೇ? ಈ ಅಪಾಯಕಾರಿ ಕಾಯಿಲೆ ಬರಬಹುದು ಎಚ್ಚರ
ಯಾವ ಸಮಯದಲ್ಲಿ ಸೇವನೆ ಮಾಡಬೇಕು?
ಪೇರಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಹಾಗಾಗಿ ಇದನ್ನು ಅತಿಯಾಗಿ ಸೇವನೆ ಮಾಡಬಾರದು. ಉರಿಯೂತದ ಸಮಸ್ಯೆ ಇರುವವರು ಕೂಡ ಪೇರಳೆಯನ್ನು ತಿನ್ನಬಾರದು. ಏಕೆಂದರೆ ಇದನ್ನು ತಿನ್ನುವುದರಿಂದ ಊತ ಹೆಚ್ಚಾಗಬಹುದು. ಪ್ರತಿದಿನ ಒಂದು ಅಥವಾ ಎರಡು ಪೇರಳೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಮಧ್ಯಾಹ್ನದ ಸಮಯದಲ್ಲಿ ಇದನ್ನು ತಿನ್ನುವುದು ಒಳ್ಳೆಯದು. ಇದಲ್ಲದೆ, ವ್ಯಾಯಾಮದ ಮೊದಲು ಕೂಡ ಇದನ್ನು ಸೇವಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: