Dehydration Symptoms: ಮೂತ್ರದ ಬಣ್ಣದಿಂದ ದೇಹದಲ್ಲಿ ನೀರಿನ ಕೊರತೆಯಾಗಿರುವುದನ್ನು ಕಂಡುಹಿಡಿಯಬಹುದು

ವಿಪರೀತ ಶಾಖದಿಂದಾಗಿ, ದೇಹದಲ್ಲಿ ನೀರಿನ ಕೊರತೆಯಾಗುತ್ತಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಈ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಇದು ಮುಂದುವರಿದರೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಜೊತೆಗೆ ಹೀಟ್ ಸ್ಟ್ರೋಕ್ ಗೂ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ಈ ಕುರಿತು ತಿಳಿದುಕೊಳ್ಳುವುದು ಮುಖ್ಯ. ಹಾಗಾದರೆ ನೀರಿನ ಕೊರತೆ ಬಗ್ಗೆ ತಜ್ಞರ ಅಭಿಪ್ರಾಯವೇನು? ಇಲ್ಲಿದೆ ಮಾಹಿತಿ.

Dehydration Symptoms: ಮೂತ್ರದ ಬಣ್ಣದಿಂದ ದೇಹದಲ್ಲಿ ನೀರಿನ ಕೊರತೆಯಾಗಿರುವುದನ್ನು ಕಂಡುಹಿಡಿಯಬಹುದು
Follow us
ಅಕ್ಷತಾ ವರ್ಕಾಡಿ
|

Updated on:Jun 07, 2024 | 3:19 PM

ತೀವ್ರ ಶಾಖದ ಪರಿಣಾಮ ಅನೇಕ ರೀತಿಯ ಸಮಸ್ಯೆಗಳು ಕಂಡುಬರುತ್ತಿದೆ. ಜೊತೆಗೆ ಈ ವಿಪರೀತ ಶಾಖದಿಂದಾಗಿ, ದೇಹದಲ್ಲಿ ನೀರಿನ ಕೊರತೆಯಾಗುತ್ತಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಈ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಇದು ಮುಂದುವರಿದರೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಜೊತೆಗೆ ಹೀಟ್ ಸ್ಟ್ರೋಕ್ ಗೂ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ಈ ಕುರಿತು ತಿಳಿದುಕೊಳ್ಳುವುದು ಮುಖ್ಯ. ಹಾಗಾದರೆ ನೀರಿನ ಕೊರತೆ ಬಗ್ಗೆ ತಜ್ಞರ ಅಭಿಪ್ರಾಯವೇನು? ಇಲ್ಲಿದೆ ಮಾಹಿತಿ.

ಡಾ.ಅಜಯ್ ಕುಮಾರ್ ಅವರು ಹೇಳುವ ಪ್ರಕಾರ, ಮೂತ್ರದ ಬಣ್ಣದಿಂದ ದೇಹದಲ್ಲಿ ನೀರಿನ ಕೊರತೆಯನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು ಎನ್ನುತ್ತಾರೆ. ಮೂತ್ರದ ಬಣ್ಣ ಬದಲಾವಣೆಯು ನಿರ್ಜಲೀಕರಣದ ಸಂಕೇತವಾಗಿದೆ. ಇದು ಸ್ಪಷ್ಟ ಮತ್ತು ಬಿಳಿಯಾಗಿದ್ದರೆ ದೇಹದಲ್ಲಿ ನೀರಿನ ಕೊರತೆಯಾಗಿಲ್ಲ. ತಿಳಿ ಹಳದಿಯಾಗಿದ್ದರೂ ಚಿಂತಿಸಬೇಕಾಗಿಲ್ಲ, ಆದರೆ ಮೂತ್ರದ ಬಣ್ಣವು ಗಾಢ ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ಅದು ದೇಹದಲ್ಲಿ ನೀರಿನ ಕೊರತೆಯನ್ನು ಸೂಚಿಸುತ್ತದೆ. ಈ ರೀತಿಯಾದ ಸಂದರ್ಭದಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಬೇಕು ಇಲ್ಲವಾದಲ್ಲಿ ಎಳನೀರು ಅಥವಾ ಮಜ್ಜಿಗೆಯನ್ನು ಕುಡಿಯಬಹುದು.

ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು?

ನೀರಿನ್ನು ಯಾವ ಪ್ರಮಾಣದಲ್ಲಿ ಕುಡಿಯಬೇಕು ಎಂಬ ಬಗ್ಗೆ ಜನರಲ್ಲಿ ಒಂದಿಷ್ಟು ಪ್ರಶ್ನೆಗಳಿರುತ್ತವೆ, ಎಷ್ಟು ನೀರು ಕುಡಿಯಬೇಕು? ಯಾವಾಗ ಕುಡಿಯಬೇಕು? ಊಟದ ಮೊದಲು ಅಥವಾ ನಂತರ ಕುಡಿಯಬೇಕೇ? ಎಂದು ಗೊಂದಲಕ್ಕೊಳಗಾಗುತ್ತಾರೆ. ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ದೇಹದ ತೂಕಕ್ಕೆ ಅನುಗುಣವಾಗಿ ನೀರನ್ನು ಕುಡಿಯಬೇಕು ಅಂದರೆ ನಿಮ್ಮ ತೂಕ 60 ಕೆಜಿ ಇದ್ದರೆ ಸುಮಾರು 2100 ಮಿಲಿ ನೀರನ್ನು ಸೇವಿಸಿ. ನಿಮ್ಮ ಜೀವನಶೈಲಿಯನ್ನು ಅವಲಂಬಿಸಿ ಈ ಮೊತ್ತವು ಸ್ವಲ್ಪ ಹೆಚ್ಚು ಅಥವಾ ಕಡಿಮೆ ಇರಬಹುದು. ನೀವು ಸಾಕಷ್ಟು ವ್ಯಾಯಾಮ ಮಾಡುವವರಾಗಿದ್ದರೆ ಅಥವಾ ಹೆಚ್ಚು ಬೆವರುತ್ತಿದ್ದರೆ ಹೆಚ್ಚು ಹೆಚ್ಚು ನೀರು ಕುಡಿಯಬೇಕು.

ಊಟದ ಮೊದಲು ಒಳ್ಳೆಯದೋ ಅಥವಾ ನಂತರವೋ?

ಆಹಾರವನ್ನು ತಿನ್ನುವ ಮೊದಲು ಸ್ವಲ್ಪ ಸಮಯ ಮತ್ತು ಆಹಾರವನ್ನು ಸೇವಿಸಿದ ಸ್ವಲ್ಪ ಸಮಯದ ನಂತರ ನೀರು ಕುಡಿಯಬೇಕು. ಮೂತ್ರಪಿಂಡದ ಸಮಸ್ಯೆಯನ್ನು ಹೊಂದಿರುವವರು ಮಾತ್ರ ವೈದ್ಯರ ಸಲಹೆಯಂತೆ ನೀರನ್ನು ಕುಡಿಯಬೇಕು.

ಇದನ್ನೂ ಓದಿ: ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳಲು ಹಲಸಿನ ಬೀಜಗಳನ್ನು ಸೇವನೆ ಮಾಡಿ

ನೀರಿನ ಕೊರತೆಯನ್ನು ನಿವಾರಿಸುವುದು ಹೇಗೆ?

ಶಾಖದ ಪ್ರಭಾವದಿಂದ ತಪ್ಪಿಸಿಕೊಳ್ಳಲು ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ. ನಿಯಮಿತವಾಗಿ ಮೂತ್ರವನ್ನು ಪರೀಕ್ಷಿಸುತ್ತಿರಿ. ಹಣ್ಣುಗಳ ಸೇವನೆ ಮಾಡುವುದನ್ನು ಮರೆಯದಿರಿ

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 9:48 am, Fri, 7 June 24