Jackfruit Seeds: ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳಲು ಹಲಸಿನ ಬೀಜಗಳನ್ನು ಸೇವನೆ ಮಾಡಿ

"ಹಸಿದು ಹಲಸು ತಿನ್ನು" ಎನ್ನುವ ಮಾತಿದೆ. ಏಕೆಂದರೆ ದೇಹಕ್ಕೆ ಇದರಿಂದ ತಕ್ಷಣ ಶಕ್ತಿ ಸಿಗುತ್ತದೆ. ಆದರೆ ಅದೇ ಹಲಸಿನ ಹಣ್ಣಿನ ಬೀಜಗಳನ್ನು ಬೇಡವೆಂದು ಬಿಸಾಡುತ್ತೇವೆ. ನಮಗೆ ಅದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಅದರಲ್ಲಿಯೂ ಆ ಬೀಜ ಯಾವುದಕ್ಕೆ ಬಳಕೆಯಾಗುತ್ತದೆ ಎಂದು ಅಸಡ್ಡೆ ಮಾಡುವವರೇ ಹೆಚ್ಚು. ಆದರೆ ನಿಮಗೆ ಗೊತ್ತೆ ಈ ಬೀಜಗಳಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ.

Jackfruit Seeds: ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳಲು ಹಲಸಿನ ಬೀಜಗಳನ್ನು ಸೇವನೆ ಮಾಡಿ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 06, 2024 | 5:28 PM

ಹಲಸಿನ ಹಣ್ಣು ಎಂದರೆ ಎಲ್ಲರ ಬಾಯಲ್ಲೂ ನೀರು ಬರುವುದು ಸಹಜ. ತನ್ನ ಅಮೋಘ ಪರಿಮಳದಿಂದಲೇ ಎಲ್ಲರನ್ನೂ ಆಕರ್ಷಿಸುವ ಗುಣವಿದೆ. ಚಿಕ್ಕದಾಗಿ ಇದನ್ನು ಬಣ್ಣಿಸುವುದಾದರೆ ತನ್ನ ಗಾತ್ರಕ್ಕೆ ತಕ್ಕಂತೆ ಹೆಸರು ಉಳಿಸಿಕೊಂಡಿದೆ ಎನ್ನಬಹುದು. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು ಹಾಗಾಗಿಯೇ “ಹಸಿದು ಹಲಸು ತಿನ್ನು” ಎನ್ನುವ ಮಾತಿದೆ. ಏಕೆಂದರೆ ದೇಹಕ್ಕೆ ಇದರಿಂದ ತಕ್ಷಣ ಶಕ್ತಿ ಸಿಗುತ್ತದೆ. ಆದರೆ ಅದೇ ಹಲಸಿನ ಹಣ್ಣಿನ ಬೀಜಗಳನ್ನು ಬೇಡವೆಂದು ಬಿಸಾಡುತ್ತೇವೆ. ನಮಗೆ ಅದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಅದರಲ್ಲಿಯೂ ಆ ಬೀಜ ಯಾವುದಕ್ಕೆ ಬಳಕೆಯಾಗುತ್ತದೆ ಎಂದು ಅಸಡ್ಡೆ ಮಾಡುವವರೇ ಹೆಚ್ಚು. ಆದರೆ ನಿಮಗೆ ಗೊತ್ತೆ ಈ ಬೀಜಗಳಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ.

ಕೂದಲು ಉದುರುವುದು ಕಡಿಮೆಯಾಗುತ್ತೆ

ಕೆಲಸದ ಒತ್ತಡ, ಕಿರಿ ಕಿರಿಯಿಂದ ಕೂದಲು ಆರೈಕೆ ಮಾಡಲು ಆಗುವುದಿಲ್ಲ. ಇದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗಬಹುದು. ಆದರೆ ಈ ಸಮಸ್ಯೆಯನ್ನು ಹಲಸಿನ ಬೀಜಗಳನ್ನು ಸೇವನೆ ಮಾಡುವ ಮೂಲಕ ಬಗೆಹರಿಸಿಕೊಳ್ಳಬಹುದು. ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಇರುವುದರಿಂದ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ದೇಹದ ರಕ್ತ ಸಂಚಾರ ಸರಾಗವಾಗಿ ಆಗುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ಹಲಸಿನ ಬೀಜಗಳಲ್ಲಿರುವ ಪ್ರೋಟೀನ್ ಅಂಶಗಳು ಮತ್ತು ಇನ್ನಿತರ ಪೌಷ್ಟಿಕ ಸತ್ವಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ. ಇದನ್ನು ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಕೂಡ ಬಳಸಲಾಗುತ್ತದೆ.

ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ

ದಂಪತಿ ಮಧ್ಯೆ ಒಡಕಿಗೆ ಲೈಂಗಿಕ ಆಸಕ್ತಿಯ ಕೊರತೆಯೂ ಕಾರಣವಾಗಬಹುದು. ಅಂತಹವರಿಗೆ ಹಲಸಿನ ಹಣ್ಣಿನ ಬೀಜಗಳು ಸಹಾಯ ಮಾಡುತ್ತವೆ. ಇದರಲ್ಲಿ ಕಂಡು ಬರುವ ಕಬ್ಬಿಣದ ಅಂಶ ಸಂಗಾತಿಗಳಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚು ಮಾಡುತ್ತದೆ. ಹಿಂದಿನ ಕಾಲದಲ್ಲಿ ಲೈಂಗಿಕ ಅಸ್ವಸ್ಥತೆಯ ಸಮಸ್ಯೆಗಳನ್ನು ದೂರ ಮಾಡಲು ಹಲಸಿನ ಬೀಜಗಳನ್ನು ಔಷಧಿಗಳನ್ನಾಗಿ ಬಳಸುತ್ತಿದ್ದರು ಎನ್ನಲಾಗುತ್ತದೆ. ಇದನ್ನು ಹುರಿದು ಅಥವಾ ನಿಮಗೆ ಬೇಕಾದ ರೀತಿಯಲ್ಲಿ ಸೇವನೆ ಮಾಡಬಹುದು.

ಜೀರ್ಣಶಕ್ತಿ ಉತ್ತಮವಾಗುತ್ತದೆ

ಅಜೀರ್ಣತೆ, ಮಲಬದ್ಧತೆ ಸಮಸ್ಯೆಗಳಿದ್ದರೆ ಹಲಸಿನ ಹಣ್ಣಿನ ಬೀಜ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬೇಧಿ ಸಮಸ್ಯೆ ಇರುವವರು ಕೂಡ ಈ ಬೀಜಗಳನ್ನು ಬೇಯಿಸಿ ತಿನ್ನಬಹುದು.

ಇದನ್ನೂ ಓದಿ: ಪ್ರತಿದಿನ ಒಂದು ಚಮಚ ದೇಸಿ ತುಪ್ಪವನ್ನು ತಿಂದರೆ ಬೆಟ್ಟದಷ್ಟು ಆರೋಗ್ಯ ಪ್ರಯೋಜನ

ದೇಹದ ಸದೃಢತೆಗೆ ಒಳ್ಳೆಯದು

ಹಲಸಿನ ಹಣ್ಣಿನ ಬೀಜಗಳಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿರುವುದರಿಂದ ದೇಹದ ಸದೃಢತೆಗೆ ಇದು ಉತ್ತಮ ಆಹಾರವಾಗಿದೆ. ವ್ಯಾಯಾಮದ ನಂತರ ಹಲವು ಬಗೆಯ ಪ್ರೋಟಿನ್ ಅಂಶಗಳಿರುವ ಆಹಾರಗಳನ್ನು ಸೇವಿಸಲು ಬಯಸಿದರೆ ಹಲಸಿನ ಹಣ್ಣಿನ ಬೀಜಗಳು ಉತ್ತಮ ಆಯ್ಕೆಯಾಗಿದೆ.

ಕಣ್ಣಿನ ಸಮಸ್ಯೆಯನ್ನು ನಿವಾರಿಸುತ್ತದೆ

ದೃಷ್ಟಿ ದೋಷ, ಕಣ್ಣಿನ ಪೊರೆ, ಕಣ್ಣಿನಲ್ಲಿ ನೀರು ತುಂಬಿಕೊಳ್ಳುವುದು, ಇದ್ದಕ್ಕಿದ್ದಂತೆ ಕಣ್ಣು ಕೆಂಪಾಗುವುದು, ಕೆಲ ಸಮಯ ಕಣ್ಣು ಮಂಜಾಗುವುದು, ರಾತ್ರಿ ಕಣ್ಣು ಕಾಣದಿರುವುದು ಇತ್ಯಾದಿ ಸಮಸ್ಯೆಗಳಿಗೆ ಹಲಸಿನ ಬೀಜ ಪರಿಹಾರ ಒದಗಿಸಬಲ್ಲವು. ಇದರಲ್ಲಿ ವಿಟಮಿನ್ ‘ಎ’ ಅಂಶ ಹೆಚ್ಚಾಗಿದ್ದು, ಇಂತಹ ಸಮಸ್ಯೆಗೆ ಒಳ್ಳೆಯ ಪರಿಹಾರವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: