Oral Health: ಹಲ್ಲುಜ್ಜುವ ಬ್ರಷನ್ನು ಎಷ್ಟು ಸಮಯಕ್ಕೊಮ್ಮೆ ಬದಲಾಯಿಸಬೇಕು ಗೊತ್ತಾ?

ಬಾಯಿ ಹಾಗೂ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಜನ ಬೆಳಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ಬ್ರಷ್‌ ಮಾಡುತ್ತಾರೆ. ಆದ್ರೆ ಕೆಲವರಿಗೆ ವರ್ಷಾನುಗಟ್ಟಲೆ ಒಂದೇ ಬ್ರಷ್‌ನಲ್ಲಿ ಹಲ್ಲುಜ್ಜುವ ಅಭ್ಯಾಸ ಇರುತ್ತದೆ. ಆದ್ರೆ ಇದರಿಂದ ಒಳ್ಳೆಯದಕ್ಕಿಂತ ಅಪಾಯವೇ ಜಾಸ್ತಿ. ಹಾಗಾಗಿ ಇಂತಿಷ್ಟು ಸಮಯಗಳಿಗೊಮ್ಮೆ ಹಲ್ಲುಜ್ಜುವ ಬ್ರಷನ್ನು ಬದಲಾಯಿಸಲೇಬೇಕು. ಹಾಗಿದ್ರೆ ಬ್ರಷನ್ನು ಎಷ್ಟು ಸಮಯಕ್ಕೊಮ್ಮೆ ಬದಲಾಯಿಸಬೇಕು ಎಂಬುದನ್ನು ನೋಡೋಣ.

Oral Health: ಹಲ್ಲುಜ್ಜುವ ಬ್ರಷನ್ನು ಎಷ್ಟು ಸಮಯಕ್ಕೊಮ್ಮೆ ಬದಲಾಯಿಸಬೇಕು ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jun 08, 2025 | 5:59 PM

ಬಾಯಿಯ ಆರೋಗ್ಯವನ್ನು (Oral Health)  ಕಾಪಾಡಿಕೊಳ್ಳುವಲ್ಲಿ ಟೂತ್‌ ಬ್ರಷ್‌ಗಳು  (toothbrush) ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಹಿಂದೆಲ್ಲಾ ಜನ ಬೇವಿನ ಕಡ್ಡಿಗಳಲ್ಲಿ ಹಲ್ಲುಜ್ಜುತ್ತಿದ್ದರು. ಆದ್ರೆ ಈಗ ಜನ ಹಲ್ಲುಜ್ಜಲು ಟೂತ್‌ ಬ್ರಷ್‌ಗಳನ್ನೇ ಬಳಸುತ್ತಾರೆ. ಇನ್ನೊಂದು ಏನಪ್ಪಾ ಅಂದ್ರೆ ಸವೆದು ಹೋಗೋ ವರೆಗೂ ಅದೇ ಒಂದು ಬ್ರಷ್‌ನಲ್ಲಿಯೇ ವರ್ಷಾನುಗಟ್ಟಲೇ ಹಲ್ಲುಜ್ಜುತ್ತಾರೆ. ಆದ್ರೆ ಹೀಗೆ ಒಂದೇ ಬ್ರಷನ್ನು ದೀರ್ಘ ಕಾಲ ಬಳಸುವುದು ಒಳ್ಳೆಯದಲ್ಲ. ಇದರಿಂದ ಮೌಖಿಕ ನೈರ್ಮಲ್ಯಕ್ಕಿಂತ ಅಪಾಯಗಳೇ ಹೆಚ್ಚು ಎಂದು ತಜ್ಞರು ಹೇಳುತ್ತಾರೆ. ಹಾಗಿದ್ರೆ ಒಂದೇ ಟೂತ್‌ ಬ್ರಷನ್ನು ದೀರ್ಘ ಕಾಲ ಬಳಸಿದ್ರೆ ಏನಾಗುತ್ತದೆ? ಹಲ್ಲುಜ್ಜುವ ಬ್ರಷನ್ನು ಎಷ್ಟು ಸಮಯಕ್ಕೊಮ್ಮೆ (how often you should change  toothbrush) ಬದಲಾಯಿಸುತ್ತಿರಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಲ್ಲುಜ್ಜುವ ಬ್ರಷನ್ನು ಎಷ್ಟು ಸಮಯಕ್ಕೊಮ್ಮೆ ಬದಲಾಯಿಸುತ್ತಿರಬೇಕು?

ಪ್ರತಿದಿನ ಹಲ್ಲುಜ್ಜುವುದರಿಂದ ನಮ್ಮ ಹಲ್ಲುಗಳು ಆರೋಗ್ಯಕರವಾಗಿರುತ್ತದೆ. ಹಲ್ಲುಜ್ಜುವುದರಿಂದ ನಿಮ್ಮ ಹಲ್ಲುಗಳಿಂದ ಪ್ಲೇಕ್‌ಗಳು ನಿವಾರಣೆಯಾಗುತ್ತವೆ. ಮತ್ತು ಇದು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಿ, ಕಾಯಿಲೆಗಳು ಬಾರದಂತೆ ನೋಡಿಕೊಳ್ಳುತ್ತವೆ. ಹೀಗಿರುವಾಗ ಹಲ್ಲುಜ್ಜುವ ಬ್ರಷ್‌ ಉಪಯೋಗ ಮಾಡುವುದರಲ್ಲಿ ಒಂದಷ್ಟು ತಪ್ಪುಗಳನ್ನು ಮಾಡಬಾರದು ಎಂದು ತಜ್ಞರು ಹೇಳುತ್ತಾರೆ.

ಕೆಲವರಿಗೆ ಬ್ರಷ್‌ ಸವೆದು ಹೋಗೋ ವರೆಗೂ ಅದೇ ಒಂದು ಬ್ರಷ್‌ನಲ್ಲಿ ಹಲ್ಲುಜ್ಜುವ ಅಭ್ಯಾಸ ಇರುತ್ತದೆ. ಆದ್ರೆ ಹೀಗೆ ಒಂದೇ ಬ್ರಷ್‌ನಲ್ಲಿ ವರ್ಷಾನುಗಟ್ಟಲೆ ಹಲ್ಲುಜ್ಜಬಾರದು. ತಜ್ಞರು ಹೇಳುವಂತೆ ಬ್ರಷ್ ಎಷ್ಟೇ ಗುಣಮಟ್ಟದ್ದಾಗಿದ್ದರೂ  12 ರಿಂದ 16 ವಾರಗಳ ನಂತರ ಅಥವಾ ನಾಲ್ಕು ತಿಂಗಳಿಗೊಮ್ಮೆ ಆ ಬ್ರಷನ್ನು ಬದಲಾಯಿಸಲೇಬೇಕು. ಹೀಗೆ ಕಾಲ ಕಾಲಕ್ಕೆ ಬ್ರಷ್‌ ಬದಲಾಯಿಸದೇ ಹೋದರೆ, ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

ಇದನ್ನೂ ಓದಿ
ಫೋನ್ ಜಾಸ್ತಿ ಬಳಸಿದರೆ ಬ್ರೈನ್ ಟ್ಯೂಮರ್ ಬರುತ್ತಾ?
ಇದಕ್ಕೆ ಹೇಳೋದು ವಾರದಲ್ಲಿ ಒಮ್ಮೆಯಾದರೂ ಮಶ್ರೂಮ್ ತಿನ್ನಿ ಅಂತ
ಮಧುಮೇಹದಿಂದ ಮಲಬದ್ಧತೆವರೆಗೆ ಎಲ್ಲಾ ಸಮಸ್ಯೆಗೂ ಈ ಬಳ್ಳಿಯೇ ಅಮೃತ
ಬಾಯಿಯ ದುರ್ವಾಸನೆಯಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿ

ಇದನ್ನೂ ಓದಿ: ಬಾಯಿಯ ದುರ್ವಾಸನೆ ತಡೆಯಲು ಇಲ್ಲಿದೆ ಸರಳ ಪರಿಹಾರ

ಹಲ್ಲುಜ್ಜುವ ಬ್ರಷನ್ನು ಬದಲಾಯಿಸುವುದು ಏಕೆ ಅಗತ್ಯ?

ಒಂದೇ ಬ್ರಷನ್ನು ವರ್ಷಗಳ ಕಾಲ ಬಳಸಬಾರದು. ಹೀಗೆ ಮಾಡುವುದರಿಂದ, ಬ್ಯಾಕ್ಟೀರಿಯಾಗಳು ಹಲ್ಲುಜ್ಜುವ ಬ್ರಷ್‌ನಲ್ಲಿ ಸಂಗ್ರಹವಾಗಬಹುದು, ಇದು ಹಲ್ಲುಜ್ಜುವಾಗ ಬಾಯಿಯೊಳಗೆ ಹರಡಬಹುದು. ಇದು ಬಾಯಿಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಬದಲು ಹಾನಿ ಮಾಡುತ್ತದೆ. ಹೌದು ಹಲ್ಲುಜ್ಜುವ ಬ್ರಷನ್ನು  ಹಲವಾರು ತಿಂಗಳುಗಳ ಕಾಲ ಬಳಸುವುದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತವೆ, ಇದು ಹಲ್ಲುನೋವು, ಕುಳಿಗಳು ಮತ್ತು ಪ್ಲೇಕ್ ಸಂಗ್ರಹಕ್ಕೆ ಕಾರಣವಾಗಬಹುದು.

ಇದಲ್ಲದೆ ನೀವು ಅನಾರೋಗ್ಯಕ್ಕೆ ತುತ್ತಾದ  ಸಮಯದಲ್ಲಿ ನೀವು ಬಳಸಿದ ಬ್ರಷ್  ಬದಲಾಯಿಸುವುದು ಒಳ್ಳೆಯದು. ಏಕೆಂದರೆ ಅನಾರೋಗ್ಯದ ಸಮಯದಲ್ಲಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳ ಪ್ರಮಾಣವು ಹೆಚ್ಚಾಗುತ್ತದೆ, ಅದು ನಿಮ್ಮ ಬ್ರಷ್‌ಗೆ ವರ್ಗಾಯಿಸಲ್ಪಡುತ್ತದೆ. ಮತ್ತು ಇದರಿಂದ ಸೋಂಕುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಬ್ಯಾಕ್ಟೀರಿಯಾದ ಸೋಂಕಿನಿಂದ ಹೆಚ್ಚಿನ ಅಪಾಯವಿದೆ. ಇದರೊಂದಿಗೆ ಹಲ್ಲುಜ್ಜುವ ಬ್ರಷನ್ನು ಹಂಚಿಕೊಳ್ಳದಂತೆಯೂ ತಜ್ಞರು ಸಲಹೆ ನೀಡುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ