ಕ್ಯಾನ್ಸರ್ (Cancer)ಎಂಬುದು ಅಪಾಯಕಾರಿ ರೋಗವಾಗಿದ್ದು, ಕಳೆದ ಐದಾರು ವರ್ಷಗಳಲ್ಲಿ ಕ್ಯಾನ್ಸರ್ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚು ವೇಗವನ್ನು ಪಡೆದುಕೊಳ್ಳುತ್ತಿದೆ. ಹಲವು ರೀತಿಯ ಕ್ಯಾನ್ಸರ್ಗಳಿವೆ ಅದರಲ್ಲಿ ಅಂಡಾಶಯ ಕ್ಯಾನ್ಸರ್(Ovarian Cancer) ಕೂಡ ಒಂದು, ಮಹಿಳೆಯರು ನಿರ್ಲಕ್ಷಿಸುವ ಅಂಡಾಶಯ ಕ್ಯಾನ್ಸರ್ನ್ನು ಮೊದಲೇ ಪತ್ತೆ ಹಚ್ಚಬಹುದು ಆದರೆ ಲಕ್ಷಣಗಳು ಮೊದ ಮೊದಲು ಸಣ್ಣ ಪ್ರಮಾಣದಲ್ಲಿರುವುದರಿಂದ ಸಾಕಷ್ಟು ಮಂದಿ ನಿರ್ಲಕ್ಷಿಸಿ ಅಪಾಯವನ್ನು ತಂದುಕೊಳ್ಳುತ್ತಾರೆ.
ಅಂಡಾಶಯದ ಕ್ಯಾನ್ಸರ್ ಕುರಿತು ನಡೆಸಿದ ಸಮೀಕ್ಷೆಯೊಂದರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಮಹಿಳೆಯರು ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಹೊಟ್ಟೆ ತುಂಬಿದ ಭಾವನೆ ಅಥವಾ ಆಗಾಗ ಶೌಚಾಲಯಕ್ಕೆ ಹೋಗುವಂತಹ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ ಎಂಬುದು ತಿಳಿದುಬಂದಿದೆ.
ಜಾಗೃತಿಯ ಕೊರತೆ: ಮಹಿಳೆಯರಿ ಅಂಡಾಶಯ ಕ್ಯಾನ್ಸರ್ ಕುರಿತು ಜಾಗೃತಿಯ ಕೊರತೆ ಇದೆ. ಮುಖ್ಯ ಪ್ರತಿಯೊಬ್ಬರೂ ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮಹಿಳೆಯರಲ್ಲಿ ಈ ರೋಗಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನಗಳು ಸರ್ಕಾರದಿಂದ ಇನ್ನಷ್ಟು ನಡೆಯಬೇಕಿದೆ.
ರೋಗವನ್ನು ಆರಂಭಿಕ ಹಂತದಲ್ಲಿಯೇ ಕಂಡುಹಿಡಿಯಬಹುದು: ಕಡಿಮೆ ಜನರಿಗೆ ತುರ್ತು ಹಂತದ ಚಿಕಿತ್ಸೆ ಅಗತ್ಯವಿರುತ್ತದೆ ಮತ್ತು ಮುಖ್ಯವಾಗಿ ಅಂಡಾಶಯದ ಕ್ಯಾನ್ಸರ್ ನಿಂದ ಸಾಯುವ ಮಹಿಳೆಯರು ಕಡಿಮೆ. ಅಂಡಾಶಯ ಕ್ಯಾನ್ಸರ್ (Ovarian Cancer) ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ರೀತಿ ಮಾಡಿದರೆ ರೋಗ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ,
ಕೆಲವು ಸಮಸ್ಯೆಗಳು ಕ್ಯಾನ್ಸರ್ಗೆ ಕಾರಣವಾಗಬಹುದು: 1,000 ಮಂದಿ ಮಹಿಳೆಯರ ಸಮೀಕ್ಷೆ ನಡೆಸಲಾಗಿದ್ದು, ಐದರಲ್ಲಿ ಒಬ್ಬರಿಗೆ ಮಾತ್ರ (ಶೇ.21) ಊತವು ಗಡ್ಡೆಯ ಸಂಭವನೀಯ ಚಿಹ್ನೆ ಎಂದು ತಿಳಿದಿದೆ ಎಂದು ಕಂಡುಹಿಡಿದಿದೆ. ಮೂರನೇ ಎರಡರಷ್ಟು (ಶೇ.68) ಜನರಿಗೆ ಹೊಟ್ಟೆ ನೋವು ಒಂದು ಚಿಹ್ನೆ ಎಂದು ತಿಳಿದಿರಲಿಲ್ಲ. 97 ಪ್ರತಿಶತದಷ್ಟು ಜನರಲ್ಲಿ ಯಾವಾಗಲೂ ಹೊಟ್ಟೆ ತುಂಬಿರುವ ಭಾವನೆಯು ಅಂಡಾಶಯದ ಕ್ಯಾನ್ಸರ್ನ ಪ್ರಮುಖ ಲಕ್ಷಣವಾಗಿದೆ ಎಂದು ತಿಳಿದಿರಲಿಲ್ಲ. ಶೇ.99ರಷ್ಟು ಮಂದಿಗೆ ಸಾಮಾನ್ಯಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆಯ ಲಕ್ಷಣವನ್ನು ನಿರ್ಲಕ್ಷಿಸುತ್ತಾರೆ. ಇವೆಲ್ಲವೂ ಕ್ಯಾನ್ಸರ್ನ ಎಚ್ಚರಿಕೆಯ ಗಂಟೆ ಎಂದೇ ಹೇಳಬಹುದು.
ಮಲಬದ್ಧತೆ ಕೂಡ ಅಂಡಾಶಯ ಕ್ಯಾನ್ಸರ್ನ ಲಕ್ಷಣವಿರಬಹುದು: ಮಲಬದ್ಧತೆಯು ಕೂಡ ಅಂಡಾಶಯ ಕ್ಯಾನ್ಸರ್ನ ಲಕ್ಷಣವಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ, ಹೀಗಾಗಿ ಇಂತಹ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೂ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ